ನಿವೃತ್ತ ಶಿಕ್ಷಕ ಸಿ.ಎಂ. ಹಿರೇಮಠರಿಗೆ ಸನ್ಮಾನ

ನಿವೃತ್ತ ಶಿಕ್ಷಕ ಸಿ.ಎಂ. ಹಿರೇಮಠರಿಗೆ ಸನ್ಮಾನ  Felicitation of retired teacher C.M. Hiremath

ತಾಳಿಕೋಟೆ, ಜು. 6: ದೇವರ ಹಿಪ್ಪರಗಿ ಮತಕ್ಷೇತ್ರದ ಯಾಳವಾರ ಗ್ರಾಮದ ಶ್ರೀ ಸೋಮೇಶ್ವರ ವಿದ್ಯಾವರ್ಧಕ ಸಂಘದ ಸುವರ್ಣ ಮಹೋತ್ಸವ, ಪ್ರೌಢಶಾಲೆಯ ನೂತನ ಕಟ್ಟಡ ಹಾಗೂ ವಸತಿ ನಿಲಯ ಉದ್ಘಾಟನೆ ಮತ್ತು ’ಸುವರ್ಣ ಸಂತಸ’ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ತಾಳಿಕೋಟೆಯ ನಿವೃತ್ತ ಮುಖ್ಯ ಶಿಕ್ಷಕ ಸಿ.ಎಂ. ಹಿರೇಮಠ ಅವರನ್ನು ಸನ್ಮಾನಿಸಲಾಯಿತು.  

ಸ್ಮರಣ ಸಂಚಿಕೆಗೆ ಲೇಖನಗಳನ್ನು ನೀಡಿದ ಹಿನ್ನೆಲೆಯಲ್ಲಿ ಜಾಲಹಳ್ಳಿಯ ಪರಮಪೂಜ್ಯರು ಹಿರೇಮಠ ಅವರನ್ನು ಸನ್ಮಾನಿಸಿ, ಅಭಿನಂದನಾ ಪತ್ರ ನೀಡಿ ಆಶೀರ್ವದಿಸಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸೋಮೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ರಾಜುಗೌಡ ಎಸ್‌. ನಾಡಗೌಡ್ರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪರಮಪೂಜ್ಯರು, ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.