ಪತ್ರಿಕಾ ವಿತರಕ ಗಣೇಶ ಮಾಶೇಟ್ಟಿಗೆ ಸನ್ಮಾನ
Felicitation of newspaper distributor Ganesh Mashetti
ಲೋಕದರ್ಶನ ವರದಿ
ಮುಧೋಳ ಸೆ.04 : ಮಳೆ, ಗಾಳಿ, ಚಳಿ, ಬಿಸಿಲನ್ನು ಲೆಕ್ಕಿಸದೆ ಪ್ರತಿದಿನ ಬೆಳಿಗಿನ ಜಾವ ಪ್ರತಿ ಮನೆಮನೆಗೆ ತೆರಳಿ ದಿನಪತ್ರಿಕೆ ತಲುಪಿಸುವ ಕಾರ್ಯವನ್ನು ಮಾಡುತ್ತಾರೆ, ಇಂತಹ ಶ್ರಮಜೀವಿಗಳಾಗಿರುವ ಪತ್ರಿಕಾ ವಿತರಕರ ಕಷ್ಟ-ಸುಖಗಳನ್ನು ಗುರುತಿಸಿ, ವಿತರಕರ ಸಂಘಟನೆಗಳು ಮತ್ತು ಸರ್ಕಾರ ಅವರ ಬೇಡಿಕೆ ಗಳನ್ನು ಈಡೇರಿಸಬೇಕೆಂದು ಪತ್ರಿಕಾ ಓದುಗ, ಹಿರಿಯ ನ್ಯಾಯವಾದಿ, ಸಾಹಿತಿ, ಪತ್ರಿಕಾ ಅಂಕಣ ಕಾರ ಪ್ರಕಾಶ ವಸ್ತ್ರದ ಹೇಳಿದರು.
ಪ್ರತಿವರ್ಷ ಸೆಪ್ಟೆಂಬರ್ 4 ರಂದು ಪತ್ರಿಕಾ ವಿತರಕರ ದಿನವನ್ನು ಸ್ಮರಿಸಿಕೊಂಡ ಅವರು ಶುಕ್ರವಾರ ಬೆಳಗಿನ ಜಾವ ತಮ್ಮ ಮನೆಗೆ ಪತ್ರಿಕೆ ಹಂಚಲು ಬಂದಿದ್ದ ಗಣೇಶ ಮಾಶೇಟ್ಟಿ ಅವರನ್ನು ತಮ್ಮ ಮನೆಯ ಮುಂಭಾಗದಲ್ಲಿ ಎಲ್ಲ ಪತ್ರಿಕಾ ಓದುಗರ ಹಾಗೂ ವಿತರಕರ ಪರವಾಗಿ ಶಾಲು ಹೊದಿಸಿ, ಪುಸ್ತಕವನ್ನು ಕೊಡುಗೆಯಾಗಿ ನೀಡಿ ಸನ್ಮಾನಿಸಿ, ಗೌರವಿಸಿ ಪತ್ರಿಕಾ ವಿತರಕ ಕಷ್ಟ-ನಷ್ಟಗಳನ್ನು ವಿಚಾರಿಸಿ ಸುದ್ದಿ, ಸಮಾಚಾರ, ಜ್ಞಾನ ಮನೆ ಮನೆಗೆ ತಪ್ಪದೆ ಹಂಚುತ್ತಿರುವ ಪತ್ರಿಕಾ ವಿತರಕರ ಸೇವೆಯನ್ನು ಅವರು ಶ್ಲಾಘಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 