ಶಂಕರ ನಂದೀಶ್ವರ ಅವರಿಗೆ ಸನ್ಮಾನ

ಶಂಕರ ನಂದೀಶ್ವರ ಅವರಿಗೆ ಸನ್ಮಾನ  Felicitation of Shankara Nandishwara


ಸಂಬರಗಿ 19: ಬೆಳಗಾವಿ ಡಿಸಿಸಿ ಬ್ಯಾಂಕ್ ಅಥಣಿ ಶಾಖೆಯ ಮುಖ್ಯ ಅಥಣಿ ತಾಲೂಕು ನಿಯಂತ್ರಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಶಂಕರ ನಂದೀಶ್ವರ ಹಾಗೂ ನಿಜಗುಣಿ ಮಗುಡಂ ಅವರನ್ನು ಸಂಬರಗಿ ಸಹಕಾರಿ ಸಂಘದ ವತಿಯಿಂದ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಲಾಯಿತು.  ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಅಶೋಕ ಪೂಜಾರಿ, ಅಪ್ಪಾಸಾಹೇಬ ಚೌಗುಲೆ, ಮಹಾದೇವ ಗಲಗಲಿ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.