ಎಸ್‌ಐಆರ್ ಕಾರ್ಯ ಯಶಸ್ವಿ ಪೂರ್ಣಗೊಳಿಸಿದ ಬಿಎಲ್‌ಒ ಗಳಿಗೆ ಸನ್ಮಾನ
Felicitation of BLOs who successfully completed the SIR task
ಮುದ್ದೇಬಿಹಾಳ 03 : ಸರ್ಕಾರ ವಹಿಸಿದ ಎಸ್‌ಐಆರ್ ಕಾರ್ಯವನ್ನು ಅಚ್ಚುಕಟ್ಟಾಗಿ, ಪಾರದರ್ಶಕವಾಗಿ ಹಾಗೂ ನಿಗದಿತ ಅವಧಿಯಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ 137ನೇ ಭಾಗದ ಬಿಎಲ್‌ಒ ಎ.ಎಂ. ಮುಲ್ಲಾ ಹಾಗೂ 138ನೇ ಭಾಗದ ಬಿಎಲ್‌ಒ ಅಂಜುಮ್ ಆರಾ ಚೌಧರಿ ಅವರನ್ನು ವಾರ್ಡ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪರಶುರಾಮ ನಾಲತವಾಡ, ಬಿಎಲ್‌ಒಗಳು ಮತದಾರರ ಪರಿಷ್ಕರಣೆ ಕಾರ್ಯವನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಿದ್ದಾರೆ. ಮರಣ ಹೊಂದಿದವರು, ಪುನರಾವರ್ತಿತ ಮತದಾರರು, ಸ್ಥಳಾಂತರಗೊಂಡವರು ಹಾಗೂ ಗೈರಾಗಿರುವ ಮತದಾರರ ಕುರಿತು ಮಾಹಿತಿ ಸಂಗ್ರಹಿಸಿ, ಅವರ ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಿ ಪರೀಶೀಲನೆ ನಡೆಸಿದ ಬಳಿಕ ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಶ್ಲಾಘಿಸಿದರು.
ಅಲ್ಲದೆ, ಎಆರ್‌ಒ ಸೌದಾಗರ್ ಅವರ ಮಾರ್ಗದರ್ಶನದಲ್ಲಿ ಕಾರ್ಯಗಳು ಸುಸೂತ್ರವಾಗಿ ನಡೆದಿದ್ದು, ತಾಲೂಕಿನ ದಂಡಾಧಿಕಾರಿ ಕೀರ್ತಿ ಚಾಲಕ್ ಅವರು ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಬಿಎಲ್‌ಒಗಳಿಗೆ ನಿರಂತರ ಮಾರ್ಗದರ್ಶನ ನೀಡುವ ಮೂಲಕ ಮುದ್ದೇಬಿಹಾಳ ತಾಲೂಕಿನಲ್ಲಿ ಎಸ್‌ಐಆರ್ ಕಾರ್ಯವನ್ನು ಅಚ್ಚುಕಟ್ಟಾಗಿ ನಡೆಸಲು ಸಹಕರಿಸಿದ್ದಾರೆ ಎಂದು ಹೇಳಿದರು. 137 ಹಾಗೂ 138ನೇ ಭಾಗದ ಬಿಎಲ್‌ಒಗಳಿಗೆ ಸಹಾಯಕರಾಗಿ ದಂಡಾಧಿಕಾರಿಗಳ ಮೌಖಿಕ ಆದೇಶದ ಮೇರೆಗೆ ಎಂ.ಬಿ. ಬಾಗವಾನ ಅವರು ಕೂಡ ಹಗಲು-ರಾತ್ರಿ ಶ್ರಮಿಸಿ ಕಾರ್ಯಕ್ಕೆ ಬೆಂಬಲ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ನೇತಾಜಿ ನಗರ ಹಾಗೂ ಅಂಬೇಡ್ಕರ್ ನಗರದ ಗಣ್ಯರಾದ ಶೆಟ್ಟಪ್ಪ ಬೋವಿ, ಮೆಹಬೂಬ್ ಜಾನೇಕರ, ಗೋಪಿ ಕಲಾಲ, ಶಿವಶಂಕರ ದೊಡಮನಿ, ಮಾಂತೇಶ ಚಲವಾದಿ, ಅಂಬರೀಶ ಹಂಗರಗಿ, ಬಸವರಾಜ ಮಡಿವಾಳರ, ಕಾಸಿಂಸಾಬ ಬಾಗಲಕೋಟ ಸೇರಿದಂತೆ ಹಲವರು ಹಾಗೂ ಅನೇಕ ಮತದಾರರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 