ಬಿ ಎಲ್ ಓ ವೈಷ್ಣವಿ ಉಮರ್ಜಿ ಸತ್ಕಾರ

ಬಿ ಎಲ್ ಓ ವೈಷ್ಣವಿ ಉಮರ್ಜಿ ಸತ್ಕಾರ Felicitation of BLO Vaishnavi Umarji

ಲೋಕದರ್ಶನ ವರದಿ 

ಇಂಡಿ 28 : ಎಸ್‌ಐಆರ್ ನೋಂದಣಿ ಪ್ರಕ್ರಿಯೆಯನ್ನು ತಮ್ಮ ವ್ಯಾಪ್ತಿಯಲ್ಲಿ ಪ್ರತಿಶತ ನೂರರಷ್ಟು (100ಅ) ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿದ ಬಿ.ಎಲ್‌.ಒ  ವೈಷ್ಣವಿ ಉಮರ್ಜಿ ಅವರನ್ನು ಅಧಿಕಾರಿಗಳು ಸತ್ಕರಿಸಿ, ಗೌರವಿಸಿದರು.  ಪೌರಾಯುಕ್ತ ಶಿವಾನಂದ ಪೂಜಾರಿ ಅವರು ಮಾತನಾಡಿ, "ಚುನಾವಣಾ ಕಾರ್ಯಗಳಲ್ಲಿ ಬಿ.ಎಲ್‌.ಒಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ತಮಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿ, ನೂರಕ್ಕೆ ನೂರರಷ್ಟು ಸಾಧನೆ ಮಾಡಿದ ವೈಷ್ಣವಿ ಅವರ ಕಾರ್ಯವೈಖರಿ ಎಲ್ಲರಿಗೂ ಪ್ರೇರಣೆಯಾಗಲಿ" ಎಂದು ಹಾರೈಸಿದರು.  ಈ ಸಂದರ್ಭದಲ್ಲಿ ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ, ಇಂಡಿ ನಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಶ್ರೀಕಾಂತ ಕೂಡಿಗನೂರ, ಮುಖಂಡ ಸುದೀರ ಕರಿಕಟ್ಟಿ, ನಗರಸಭೆ ಕಂದಾಯ ಅಧಿಕಾರಿ ಸದಾಶಿವ ನಿಂಬಾಳ್ಕರ್, ಕಿರಿಯ ಆರೋಗ್ಯ ನೀರೀಕ್ಷಕಿ ಸಂಗೀತಾ ಕೋಳಿ ಉಪಸ್ಥಿತರಿದ್ದರು.