ಶ್ರೇಷ್ಠ ಉದ್ಯಮಿ ಪ್ರಶಸ್ತಿ ಪಡೆದ ವೀರಣ್ಣ ಪವಾಡದವರಿಗೆ ಸನ್ಮಾನ

ಶ್ರೇಷ್ಠ ಉದ್ಯಮಿ ಪ್ರಶಸ್ತಿ ಪಡೆದ ವೀರಣ್ಣ ಪವಾಡದವರಿಗೆ ಸನ್ಮಾನ  Felicitation for Veeranna Pavadada, recipient of the 'Outstanding Entrepreneur' award

ಗದಗ  16: ಗದಗ ಉತ್ಸವ-2026ಸಮಾರಂಭದಲ್ಲಿ ಶಿಗ್ಲಿ ಗ್ರಾಮದ ಹಿರಿಯ ಉದ್ಯಮಿ ವೀರಣ್ಣ ಪವಾಡದವರಿಗೆ ‘ಶ್ರೇಷ್ಠ ಉದ್ಯಮಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.  ಹಿರೇಹಟ್ಟಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಚಂದ್ರು ಕೆ. ಲಮಾಣಿ ಅವರು ಶಿಗ್ಲಿ ಗ್ರಾಮದಲ್ಲಿರುವ ವೀರಣ್ಣ ಪವಾಡದವರ ನಿವಾಸಕ್ಕೆ ತೆರಳಿ, ಅವರ ದಂಪತಿಯನ್ನು ಶಾಲು ಹೊದಿಸಿ, ಫಲ-ತಾಂಬೂಲ ನೀಡಿ ಆತ್ಮೀಯವಾಗಿ ಸನ್ಮಾನಿಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ. ಚಂದ್ರು ಲಮಾಣಿ, ಗ್ರಾಮೀಣ ಭಾಗದಲ್ಲಿ ಉದ್ಯಮ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ ಹಾಗೂ ಸಮಾಜಮುಖಿ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಶಿಗ್ಲಿ ಗ್ರಾಮದ ಜನತೆಗೆ ಹೆಮ್ಮೆಯ ಸಂಗತಿ ಎಂದರು. ಈ ವೇಳೆ ವೀರಣ್ಣ ಪವಾಡದವರ ಕುಟುಂಬಸ್ಥರು, ಗ್ರಾಮದ ಮುಖಂಡರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.