ಬಸವ ಮಂಟಪದಲ್ಲಿ ನಡೆದ 75 ವರ್ಷ ನಿವೃತ್ತ ನೌಕರರ ಸನ್ಮಾನ ಸಮಾರಂಭ

 ಬಸವ ಮಂಟಪದಲ್ಲಿ ನಡೆದ 75 ವರ್ಷ ನಿವೃತ್ತ ನೌಕರರ ಸನ್ಮಾನ ಸಮಾರಂಭ Felicitation ceremony for retired employees completing 75 years, held at Basava Mantapa

ಲೋಕದರ್ಶನ ವರದಿ 

ಸಿಂದಗಿ 04 : ಮೊದಲು ಯುವಕರು ಈ ದೇಶದ ಆಸ್ತಿ ಎಂದು ಹೆಳುತ್ತಿದ್ದರು ಆದರೆ ಇಂದು ನಿವೃತ್ತ ನೌಕರರು  ಯುವಕರಿಗೆ ತಮ್ಮ ಅನುಭವವನ್ನು ದಾರೆ ಎರೆದು ಸಮಾಜವನ್ನು ಕಟ್ಟುವ ಜವಾಬ್ದಾರಿಯನ್ನು ಹೊತ್ತು ಮುನ್ನಡೆಸುತ್ತಿದ್ದಾರೆ ಅದಕ್ಕೆ ಈ ದೇಶದ ದೊಡ್ಡ ಆಸ್ತಿ ನಿವೃತ್ತ ನೌಕರರು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.  ನಗರದ ಬಸವ ಮಂಟಪದಲ್ಲಿ ನಡೆದ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡ 75 ವರ್ಷ ಮೇಲ್ಪಟ್ಟ ಹಿರಿಯ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ಕಂಪ್ಯೂಟರ ಯುಗದಲ್ಲಿ ಯುವಕರು ಎಷ್ಟು ಮುಂದೆ ವರೆದಿದ್ದಾರೆ ಎನ್ನುವುದಕ್ಕಿಂತ ಹಿರಿಯರ ಅನುಭವದ ಮುಂದೆ ಎಲ್ಲವು ಗೌಣವಾಗುತ್ತದೆ ಕಾರಣ ನಿವೃತ್ತ ನೌಕರರು ಮನೆಯಿಂದಲೆ ಸಂಸ್ಕಾರ ನೀಡಿ ಸಮಾಜಕ್ಕೆ ದಾರೆ ಎರೆದರೆ ಸದೃಡ ಸಮಾಜ ಕಟ್ಟಲು ಅನುಕೂಲವಾಗುತ್ತದೆ ಎಂದು ಹೆಳಿದ ಅವರು, ನಿವೃತ್ತ ನೌಕರರಿಗೆ ಸಭೆ ನಡೆಸಲು ಸಭಾ ಭವನಕ್ಕೆ ಸರಕಾರದಿಂದ ಅನುದಾನ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.   

ಸಮಾರಂಭದ ಸಾನಿದ್ಯತೆ ವಹಿಸಿದ  ಆಲಮೇಲ ವಿರಕ್ತಮಠದ ಪೂಜ್ಯ   ಜಗದೇವ ಮಲ್ಲಬೊಮ್ಮ ಮಹಾಸ್ವಾಮಿಗಳು ಆರ್ಶಿವಚನ ನೀಡಿ, ಮನುಷ್ಯನ ಚಿಂತೆ ಮುಪ್ಪು ಮಾಡುತ್ತದೆ ಆದರೆ ಹಸ್ಮುಖಿ ಜೀವನ ಸಧೃಡ ಬದುಕು ಕೊಡುತ್ತದೆ ಅದಕ್ಕೆ 60 ವರ್ಷಕ್ಕೆ ಅರಳು ಮರಳು ಅಲ್ಲ ನಿವೃತ್ತಿ ಜೀವನ ಮರಳಿ ಅರಳೀದಂತಾಗಿದೆ. ಸರಕಾರಿ ಸೇವೆಯಲ್ಲಿ ಸಮಾಜ ಸೇವೆ ಮಾಡಕ್ಕಾಗಿಲ್ಲ ಇಂದು ನಿಜವಾದ ಸಮಾಜ ಸೇವೆಯಾಗಿದೆ ನಿವೃತ್ತ ಜೀವನದಲ್ಲಿ ಮೊಮ್ಮಕ್ಕಳಿಗೆ ಮನೆಯಲ್ಲಿಯೇ ಕುಳೀತು ಶಿಕ್ಷಣ ನೀಡುವುದರ ಜೊತೆಗೆ ಸಂಸ್ಕಾರ ನೀಡಿದ್ದಾದರೆ ಅದುವೇ ಭವ್ಯ ಭಾರತ ನಿರ್ಮಾಣ ಮಾಡಿದಂತಾಗುತ್ತದೆ ಎಂದರು. ಕನ್ನಡ ಮತ್ತು ಸಂಸ್ಕೃತಿ  ಇಲಾಖೆಯ ವಿಶ್ರಾಂತ ಸಹಾಯಕ ನಿರ್ದೇಶಕ ಡಾ. ಸೋಮಶೇಖರ ಎಂ. ವಾಲಿ ಉಪನ್ಯಾಸ ನೀಡಿ, ನಿವೃತ್ತಿಯಾಗಿದ್ದಿರಿ ಎಂದು ಸುಮ್ಮನೆ ಕುಳಿತುಕೊಳ್ಳದೆ ಮನೆಗೆಲಸದಲ್ಲಿ ತೊಡಗಿಕೊಂಡು ಸಹಕಾರಿಗಳಾಗಬೇಕು. ನಿವೃತ್ತಿಯಾಗಿದ್ದೇನೆ ಎಂದು ಸ್ಮರಣ ಶಕ್ತಿ ಕಳೆದು ಹೋಗಿದೆ ಎಂದು ವಯಸ್ಸು ಹಾಳು ಮಾಡಿಕೊಳ್ಳದೇ ಉತ್ತಮ ಆಹಾರ ಸೇವನೆ ಮಾಡುವ ಮೂಲಕ ಹಾಡಿ, ನಲಿದು ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಎಂದು ಸಲಹೆ ನೀಡಿದರು.