ಅಪ್ಪನಿಗೆ ಐರಾಳ ಸ್ಪೂನ್ ಫೀಡ್

ಬೆಂಗಳೂರು, ಮಾ 24, ಕೊರೋನಾ ವೈರಾಣು ನಿಯಂತ್ರಿಸುವ ನಿಟ್ಟಿನಲ್ಲಿ ಇಡೀ ರಾಜ್ಯ ಸ್ತಬ್ಧವಾಗಿದೆ. ಸಿನಿಮಾ, ಸೀರಿಯಲ್ ಎಲ್ಲವೂ ಕ್ಯಾನ್ಸಲ್ ಆಗಿರುವ ಪರಿಣಾಮ ಸ್ಟಾರ್ ನಟ-ನಟಿಯರು ತಮ್ಮ ಕುಟುಂಬದವರ ಜೊತೆ ಕಾಲ ಕಳೆಯುತ್ತಿದ್ದಾರೆ.  ರಾಕಿಂಗ್ ಸ್ಟಾರ್ ಯಶ್ ಕೂಡ ಇದಕ್ಕೆ ಹೊರತಾಗಿಲ್ಲ.  ಸಂಪೂರ್ಣ ಸಮಯವನ್ನು ಕುಟುಂಬಕ್ಕೆ ಮೀಸಲಿಡುವ ಸಮಯಾವಕಾಶವನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಪುಟ್ಟ ಕಂದ ಐರಾ.  ಹೌದು.  ಅವಳೊಂದಿಗೆ ಆಡುತ್ತ, ಆಟವಾಡಿಸುತ್ತ, ಮಗನ ಆಟಪಾಟ ನೋಡುತ್ತ ಯಶ್ ಆರಾಮವಾಗಿದ್ದಾರೆ.   ಐರಾ ಹೇಳಿದ ಹಾಗೇ ಯಶ್ ಕೇಳುತ್ತಿದ್ದಾರೆ. ಅಪ್ಪನಿಗೆ ಐರಾ ಸ್ಪೂನ್ ಫೀಡ್ ಮಾಡಿಸುತ್ತಿದ್ದಾಳೆ. ನೀನು ತಿಂದರೆ ಮಾತ್ರ ತಿನ್ನುತ್ತೇನೆ ಎಂದು ಯಶ್ ಹೇಳುತ್ತಿದ್ದಾರೆ. ಆದರೆ ಐರಾಗೆ ತಿನ್ನಿಸೋಕೆ ಯಶ್ ಹರಸಾಹಸ ಪಟ್ಟರೂ ವರ್ಕೌಟ್ ಆಗಿಲ್ಲ. ಐರಾ ಮಾತ್ರ ಅಪ್ಪನಿಗೆ ಮತ್ತೆ ಮತ್ತೆ ತಿನ್ನಿಸಿದ್ದಾಳೆ.ಇದನ್ನು ರಾಧಿಕಾ ವಿಡಿಯೋ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಪ್ಪ- ಮಗಳ ಬಾಂಧವ್ಯದ ಈ ಸನ್ನಿವೇಶಕ್ಕೆ ಫ್ಯಾನ್ಸ್ ದಿಲ್ ಖುಷ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದುವರೆಗೂ 7 ಲಕ್ಷಕ್ಕೂ ಅಧಿಕ ಮಂದಿ ಲೈಕ್ಸ್ ಮಾಡಿದ್ದು, 5 ಸಾವಿರಕ್ಕೂ ಹೆಚ್ಚಿನ ಜನರು ಕಮೆಂಟ್ ಮಾಡಿದ್ದಾರೆ.