ಸಾಂಕ್ರಾಮಿಕ ರೋಗಗಳ ಭೀತಿ: ಆಲದಕಟ್ಟಿ ಕೆ.ಎಂ ಚರಂಡಿಗಳು ಇಲ್ಲದೇ ರಸ್ತೆ ಮೇಲೆ ಕೊಳಚೆ ನೀರು

ಸಾಂಕ್ರಾಮಿಕ ರೋಗಗಳ ಭೀತಿ: ಆಲದಕಟ್ಟಿ ಕೆ.ಎಂ ಚರಂಡಿಗಳು ಇಲ್ಲದೇ ರಸ್ತೆ ಮೇಲೆ ಕೊಳಚೆ ನೀರು Fear of infectious diseases: Sewage flows onto the road in Aladakatti K.M. due to the lack of drains

ಲೋಕದರ್ಶನ ವರದಿ 

 ಯರಗಟ್ಟಿ 27 : ಸಮೀಪದ  ಆಲದಕಟ್ಟಿ ಕೆ.ಎಂ. ಗ್ರಾಮದಲ್ಲಿ ಚರಂಡಿಗಳು ಇಲ್ಲದೇ ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತಿದ್ದು ಇದರಿಂದ ಗ್ರಾಮಸ್ಥರಲ್ಲಿ ರೋಗಗಳ ಆತಂಕ ಮೂಡಿದೆ. ನಾನಾ ಸುಮಾರು ಆಲದಕಟ್ಟಿ ಕೆ ಎಂ. ಗ್ರಾಮದಲ್ಲಿ 4000ಕ್ಕೂ ಹೆಚ್ಚು ಜನರು ವಾಸಿಸುತ್ತಿ-ದ್ದಾರೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸ್ವಚ್ಛತೆಯು ಸಂಪೂರ್ಣ ಮಾಯವಾಗಿದೆ. ಸ್ವಚ್ಛತೆ ಕಾಪಾಡಬೇಕಾದ ಸಂಬಂಧ ಪಟ್ಟ ಗ್ರಾಮ ಪಂಚಾಯಿತಿಯು ನಿರ್ಲಕ್ಷ್ಯ ವಹಿಸುತ್ತಿದೆ ಎನ್ನುತ್ತಾರೆ ಸ್ಥಳೀಯರು. 

ಗ್ರಾಮದ ಪ್ರತಿಯೊಂದು ಬೀದಿಗಳಲ್ಲಿ ಅನೈರ್ಮಲ್ಯ ವಾತಾವರಣ ಸೃಷ್ಟಿಸಿದೆ. ಚರಂಡಿಗಳಲ್ಲಿ ಕಸ, ಕಡ್ಡಿ, ತ್ಯಾಜ್ಯ ತುಂಬಿಕೊಂಡು ನೀರು ಸರಾಗವಾಗಿ ಹರಿಯದೇ ದುರ್ನಾತ ಬೀರುತ್ತಿವೆ.  ಸೂಕ್ತ ಚರಂಡಿಗಳು ಇಲ್ಲದ ಕಾರಣ ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತಿವೆ. 'ರಸ್ತೆ ಮೇಲೆ ಚರಂಡಿ ಮತ್ತು ಕೊಳಚೆ ನೀರು ಹರಿಯುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ರೋಗಗಳು ಹರಡುವ ಆತಂಕ ಎದುರಾಗಿದೆ. ವೃದ್ಧರು, ಮಕ್ಕಳು ಹಾಗೂ ಮಹಿಳೆಯರು ಆತಂಕದ ಸ್ಥಿತಿಯಲ್ಲಿ ಜೀವನ ನಡೆಸುವಂತಾಗಿದೆ' ಎನ್ನುತ್ತಾರೆ ಗ್ರಾಮಸ್ಥರು. 

ಆಲದಕಟ್ಟಿ ಕೆ.ಎಂ. ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಮುನ್ನವೇ ಗ್ರಾಮ ಪಂಚಾಯಿತಿ ಅಧಿಕಾರಿಗಳು ಚರಂಡಿ ನಿರ್ಮಿಸಿ ಮತ್ತು ಹೂಳು ತುಂಬಿ ಚರಂಡಿಗಳನ್ನು ಸ್ವಚ್ಛಗೊಳಿಸುವುದು, ಕೊಳಚೆನೀರು ಚರಂಡಿ ಮೂಲಕ ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕು.  

ಜೊತೆಗೆ ಉತ್ತಮ ಜೀವನ ನಡೆಸಲು ಆರೋಗ್ಯಕರವಾದ ವಾತಾವರಣ ನಿರ್ಮಾಣ ಮಾಡಬೇಕು ಎಂದು ಸ್ಥಳೀಯರಾದ ಚಂದ್ರಶೇಖರ ಮಡಿವಾಳರ ಚನ್ನವ್ವ ಸೊಗಲದ, ಕೃಷ್ಣಪ್ಪ ಮಡಿವಾಳರ, ಫಕ್ಕೀರವ್ವ ಸೊಗಲದ, ಬಸವರಾಜ ಮಡಿವಾಳರ, ವಿಠ್ಠಲ ದಾಗನಾಯ್ಕರ ಒತ್ತಾಯಿಸಿದ್ದಾರೆ.