ಫೌಜಿಯಾ ಸುಲ್ತಾನಾ ಡಿ- ಫಾರ್ಮಸಿಯಲ್ಲಿ ದ್ವಿತೀಯ ಸ್ಥಾನ

Fauzia Sultana D- Second place in Pharmacy

ತಾಳಿಕೋಟಿ 10: ಪಟ್ಟಣದ ಲೋಟಸ್ ಡಿ-ಫಾರ್ಮಸಿ ಕಾಲೇಜಿನ ವಿದ್ಯಾರ್ಥಿನಿ ಫೌಜಿಯಾ ಸುಲ್ತಾನಾ ಅಬ್ದುಲ್ ಗನಿ ಮಕಾಂದಾರ ಇವಳು ಡಿ- ಫಾರ್ಮಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಶೇ.77 ( 850/1100) ಅಂಕಗಳನ್ನು ಪಡೆದು ಕಾಲೇಜಿಗೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾಳೆ.  

ಅಭಿನಂದನೆ: ತಮ್ಮ ಕಾಲೇಜಿನ ವಿದ್ಯಾರ್ಥಿನಿ ಫೌಜಿಯಾ ಸುಲ್ತಾನಾ ಮಕಾಂದಾರ ಇವಳು ಅತ್ಯುತ್ತಮ ಸಾಧನೆ ಮಾಡುವುದರೊಂದಿಗೆ ಕಾಲೇಜಿನ ಕೀರ್ತಿ ಹೆಚ್ಚಿಸಿರುವುದಕ್ಕೆ ಸಂಸ್ಥೆಯ ಅಧ್ಯಕ್ಷ ಇರ್ಫಾನ್ ಕೆ, ಆಡಳಿತಾಧಿಕಾರಿ ಡಾ.ಅಬ್ದುಲ್ ರೆಹಮಾನ್ ನಮಾಜಕಟ್ಟಿ, ಕಾರ್ಯದರ್ಶಿ ನೂರ್ ನಮಾಜಕಟ್ಟಿ, ಪ್ರಾಚಾರ್ಯ ಸಿರಾಜ್ ಹಾಗೂ ಉಪನ್ಯಾಸಕ ವರ್ಗ ಅಭಿನಂದಿಸಿದೆ.