ಜಂಬಗಿ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ: ಇಬ್ಬರಿಗೆ ಗಂಭೀರ ಗಾಯ
Fatal road accident on Jambagi Road: Two seriously injured
ಜಮಖಂಡಿ 27 : ನಗರದ ಜಂಬಗಿ ರಸ್ತೆಯ ಹೊರವಲಯದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ನಗರಸಭೆ ಕಸ ವಿಲೇವಾರಿ ಟಾಟಾ ಎಸ್ ವಾಹನ ಹಾಗೂ ಬೈಕ್ ನಡುವೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಬೈಕ್ ಸವಾರನ ಸ್ಥಿತಿ ಗಂಭೀರವಾಗಿದೆ. ನಗರಸಭೆಯ ಕಸ ವಿಲೇವಾರಿ ಟಾಟಾ ಎಸ್ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ತಾಲ್ಲೂಕಿನ ಕಂಕಣವಾಡಿ ಗ್ರಾಮದ ಸೋಮನಾಥ ಹಿರೇಮಠ (33) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ವಿಜಯಪುರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಅಪಘಾತದಲ್ಲಿ ಮತ್ತೋರ್ವ ವ್ಯಕ್ತಿ ಮುತ್ತೂರು ಗ್ರಾಮದ ಸುಭಾಸ ಕೊಕಟನೂರ (40) ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರನ್ನು ಸಹ ಬೇರೆ ಆಸ್ಪತ್ರೆಗೆ ರವಾನಿಸಲಾಗಿದೆ.ಜಮಖಂಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬೈಕ್ ಸಾವರಿಬ್ಬರಿಗೂ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಕಡೆ ರವಾನಿಸಲಾಗಿದೆ.ಇನ್ನೂ ನಗರಸಭೆ ಪೌರಕಾರ್ಮಿಕ ಟಾಟಾ ಎಸ್ ವಾಹನದ ಚಾಲಕ ಬಸವರಾಜ ನವಣಿ (43) ಸಣ್ಣಪುಟ್ಟ ಗಾಯಗಳಾಗಿದ್ದು.
ಮತ್ತೋರ್ವ ಪೌರಕಾರ್ಮಿಕ ಲಕ್ಷ್ಮಣ ಘಾಟಗೆ (23) ಗಂಭೀರ ಗಾಯಗೊಂಡಿದ್ದು. ಜಮಖಂಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಘಟನಾ ಸ್ಥಳಕ್ಕೆ ಗ್ರಾಮೀಣ ಪೋಲಿಸ್ ಠಾಣೆಯಪಿ.ಎಸ್.ಐ. ಗಂಗಾಧರ ಪೂಜಾರಿ ಭೇಟಿ ನೀಡಿ ತನಿಖೆಯನ್ನು ಮುಂದುವರಿಸಿದ್ದಾರೆ. ಜಂಬಗಿ ರಸ್ತೆಯ ವಾಹನ ಸವಾರರು ಅತೀವವಾಗಿ ವಾಹನ ಚಲಾಯಿಸದಂತೆ ಹಂಸ ಹಾಕಲಾಗಿದ್ದು. ಅಲ್ಲಿಯೇ ಕೆಲವಂದಿಷ್ಟು ಮಂಗಳಮುಖಿಯರು ನಿಂತುಕೊಂಡು ಹೋಗುವ ಹಾಗೂ ಬರುವ ಬೈಕ್ ಸವಾರರನ್ನು ಅಡ್ಡಗಟ್ಟಿ ಹಣ ವಸೂಲಿ ಮಾಡುವ ಸಮಯದಲ್ಲಿ ಅವರನ್ನು ತಪ್ಪಿಸಲು ಹೋಗಿ ನಗರಸಭೆಯ ಕಸದ ವಿಲೇವಾರಿ ಟಾಟಾ ಎಸ್ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿರಬಹುದು ಎಂದು ಸಾರ್ವಜನಿಕರು ಸರಕಾರಿ ಆಸ್ಪತ್ರೆಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಪೋಲಿಸ್ ಇಲಾಖೆ ಕಡಿವಾಣ ಹಾಕುತ್ತಾರ ಕಾದುನೋಡಬೇಕಾಗಿದೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 