ಹುನೂರು ಸಮೀಪ ಭೀಕರ ಅಪಘಾತ: ಬಾವಿಗೆ ಬಿದ್ದ ಟ್ಯಾಂಕರ್, ಚಾಲಕ ಸ್ಥಳದಲ್ಲೇ ಸಾವು
Fatal accident near Hunur: Tanker falls into well, driver dies on the spot
ಲೋಕದರ್ಶನ ವರದಿ
ಜಮಖಂಡಿ : ತಾಲೂಕಿನ ಹುನ್ನೂರ ಗ್ರಾಮದ ಸಮೀಪ ತಡರಾತ್ರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮಳ್ಳಿ ತುಂಬಿದ್ದ ಟ್ಯಾಂಕರ್ ರಸ್ತೆ ಬದಿಯ ಸುಮಾರು 150 ಅಡಿ ಆಳದ ತೆರೆದ ಪಾಳುಬಿದ್ದ ಬಾವಿಗೆ ಉರುಳಿದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಸಂಭವಿಸಿದೆ. ಅಥಣಿ ತಾಲೂಕಿನ ಬಳವಾಡ ಗ್ರಾಮದ ನಿವಾಸಿ ಮಂಜುನಾಥ ಅಪ್ಪಾಸಾಹೇಬ ಅಟವಾಳಕರ (35) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಹಿಪ್ಪರಗಿ ಕಡೆಯಿಂದ ಕಾರ್ಖಾನೆಯ ಮಳ್ಳಿಯನ್ನು ಟ್ಯಾಂಕರ್‌ನಲ್ಲಿ ತುಂಬಿಕೊಂಡು ಜಮಖಂಡಿ ಕಡೆಗೆ ಬರುತ್ತಿದ್ದ ವೇಳೆ ಹುನ್ನೂರ ಗ್ರಾಮದ ಬಿಳ್ಳೂರ ತೋಟದ ಸಮೀಪ ಚಾಲಕನ ನಿಯಂತ್ರಣ ತಪ್ಪಿ ವಾಹನ ರಸ್ತೆ ಬದಿಯಲ್ಲಿದ್ದ ತೆರೆದ ಬಾವಿಗೆ ಉರುಳಿ ಬಿದ್ದಿದೆ. ಅಪಘಾತದ ತೀವ್ರತೆ ಹಾಗೂ ಬಾವಿಯ ಹೆಚ್ಚಿನ ಆಳದಿಂದಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೋಲಿಸ ಮೂಲದಿಂದ ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಗ್ರಾಮೀಣ ಪೊಲೀಸ್ ಠಾಣೆಯ ಎಎಸ್‌ಐ ಮಾಚಕನೂರ ಹಾಗೂ ಸಿಬ್ಬಂದಿ ಮಹೆಬೂಬ ಕೆರೂರ ಭೇಟಿ ನೀಡಿ ಪರೀಶೀಲನೆ ನಡೆಸಿದರು. ಅಗ್ನಿಶಾಮಕ ಇಲಾಖೆಯ ಅಧಿಕಾರಿ ಎಂ.ಎಸ್. ಹುಗಾರ ನೇತೃತ್ವದಲ್ಲಿ ಟಿ.ವೈ. ಭಂಡಾರಿ, ಎ.ವೈ. ಹಣಮರಟ್ಟಿ, ವಿ.ಎಚ್. ಇಮ್ಮನ್ನವರ, ಕೆ.ಬಿ. ದೋಡಮನಿ, ಡಿ.ವೈ. ಗಣಾಚಾರಿ, ಬಿ.ವೈ. ಬಿರಾದಾರ ಹಾಗೂ ಬಿ.ವೈ. ಮೆಳ್ಳಿಗೆರಿ ಅವರ ತಂಡ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಬಾವಿಯಿಂದ ಹೊರತೆಗೆದಿದ್ದಾರೆ. ಪೋಲಿಸರು ತನಿಖೆಯನ್ನು ಮುಂದುವರಿಸಿದ್ದಾರೆ. 150 ಅಡಿ ಆಳದ ತೆರೆದ ಪಾಳುಬಿದ್ದ ಬಾವಿಗೆ ಉರುಳಿದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಸಂಭವಿಸಿದೆ.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 