ಉರಿ ಬಿಸಿಲಿನಲ್ಲಿ ರೈತರು 'ಉರುಳು ಸೇವೆ' ಮೂಲಕ ಬೃಹತ್ ಪ್ರತಿಭಟನೆ

ಉರಿ ಬಿಸಿಲಿನಲ್ಲಿ ರೈತರು 'ಉರುಳು ಸೇವೆ' ಮೂಲಕ ಬೃಹತ್ ಪ್ರತಿಭಟನೆ Farmers stage massive protest in scorching sun through 'Urulu Seva'

ಲೋಕದರ್ಶನ ವರದಿ 

20ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ; ರೋಟ್ಟಿ ಬಡಿಯೋ ಚಳುವಳಿ ಇಂದು..! 

ಗದಗ  06: ನಗರದ ಮುಳಗುಂದ ನಾಕಾದಿಂದ ಜಿಲ್ಲಾಡಳಿತದ ವರೆಗೂ ಬಗರಹುಕುಂ ಸಾಗುವಳಿದಾರ ರೈತರು ಉರಿ ಬಿಸಿಲಿನಲ್ಲಿ ಉರುಳು ಸೇವೆ ಮಾಡುವ ಮುಲಕ ಹಕ್ಕು ಪತ್ರಕ್ಕಾಗಿ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಯಿತು. 

ಸತತ 20 ದಿನಗಳಿಂದ ಉತ್ತರ ಕರ್ನಾಟಕ ಮಹಾಸಭಾ ನೇತೃತ್ವದಲ್ಲಿ ಬಗರಹುಕುಂ ಸಾಗುವಳಿದಾರರು ಹಾಗೂ ಅರಣ್ಯ ಅವಲಂಬಿತ ರೈತರಿಗೆ ಹಕ್ಕುಪತ್ರ ನೀಡುವಂತೆ, ನಾಗಾವಿ ಆರ್‌ಡಿಪಿಆರ್ ವಿಶ್ವವಿದ್ಯಾಲಯಕ್ಕೆ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ಅಥವಾ ಪರ್ಯಾಯ ಜಮೀನು ನೀಡುವಂತೆ ಆಗ್ರಹಿಸಿ ರೈತರು ಜಿಲ್ಲಾಡಳಿತ ಭವನದ ಎದುರು ದಿನದಿಂದ ದಿನಕ್ಕೆ ತಿವ್ರಗೊಳ್ಳುತ್ತಿರುವ ಪ್ರತಿಭಟನೆ ಶನಿವಾರ ನೂರಾರು ಸಂಖ್ಯೆಯಲ್ಲಿ ರೈತರು, ಮಹಿಳೆಯರು ನಗರದ ಮುಳಗುಂದ ನಾಕಾದಿಂದ ಉರಿ ಬಿಸಿಲಿನಲ್ಲಿ, ಸುಡುವ ದಾರಿಯ ಮೇಲೆ ಮಲಗಿ ಉರಳುತ್ತಾ ಜಿಲಾಡಳಿತ ಹಾಗೂ ಸಚಿವರ ವಿರುದ್ಧ ಘೋಷಣೆ ಕುಗೂ ಹಾಕುತ್ತಾ ಜಿಲ್ಲಾಡಳಿತ ಭವನದ ವರೆಗೂ ಹಕ್ಕು ಪತ್ರಕ್ಕಾಗಿ ಪ್ರತಿಭಟನೆ ನಡೆಸಿದ ಘಟನೆ ಇದಾಗಿದೆ. 

ಪ್ರತಿಭಟನಾ ಸ್ಥಳದಲ್ಲಿ ಉತ್ತರ ಕರ್ನಾಟಕ ಮಹಾಸಭಾ ಅಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ, ಜಿಲ್ಲೆಯ ಉಸ್ತುವಾರಿ ಸಚಿವರಾದ ಎಚ್‌.ಕೆ.ಪಾಟೀಲರು ವಾರಕ್ಕೆ ಒಂದು ಬಾರಿಯಾದರು ಜಿಲ್ಲೆಗೆ ಆಗಮಿಸಿ ವಿವಿಧ ಕಾರ್ಯಕ್ರಮಕ್ಕೆ ಬಂದು ಹಾರೈಸಿ ಹೊಗುವ ಅವರು ಇಪ್ಪತ್ತು ದಿನಗಳಿಂದ ಮನೆ ಮಠ ಬಿಟ್ಟು ರೈತರು ಪ್ರತಿಭಟನೆಗೆ ಕುಳಿತಿರುವುದು ಅವರ ಗಮನಕ್ಕೆ ಬಂದಿಲ್ಲವೇ, ನಮ್ಮ ರೈತರ ಸಮಸ್ಯೆ ಅವರಿಗೆ ಕಾಣುತ್ತಿಲ್ಲವೆ, ಕಳೆದ ಬಾರಿ ಅವರು ಸಮಸ್ಯೆ ಪರಿಹರಿಸುವಂತೆ ತಿಳಿಸಿ, ಇಲ್ಲಿಯವರೆಗೂ ಯಾವ ಪರಿಹಾರನು ಇಲ್ಲದೆ ನಮ್ಮ ಸಮಸ್ಯೆಗಲನ್ನು ಆಲಿಸದೆ ಇರುವುದು ಸರಿಯೇ ಎಂದು ಪ್ರಶ್ನಿಸಿದರು. ಏನೇ ಆಗಲಿ ಸಚಿವರು ಬಂದು ನಮಗೆ ಕೊಟ್ಟ ಮಾತಿನಂತೆ ನಮ್ಮ ಸಮಸ್ಯೆ ಪರಿಹರಿಸುವ ವರೆಗು ನಮ್ಮ ಹೋರಾಟದ ತೀವ್ರತೆಯನ್ನು ನಾವು ತೋರಿಸುತ್ತೆವೆ ಎಂದರು. 

ಪ್ರತಿಭಟನೆಯಲ್ಲಿ ವಿವಿಧ ಸಂಘಗಳಾದ ಕರ್ನಾಡಕ ರಾಜ್ಯ ರೈತರ ಸಂಘ, ರೈತ ಮೋರ್ಚಾ ಮುಖಂಡರು ಭಾಗವಹಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. 

ಈ ಸಂದರ್ಭದಲ್ಲಿ ರಮೇಶ ಮಜ್ಜೂರ, ಚಂಬಣ್ಣ ಪರಸಾಪೂರ, ಶಾಂತವ್ವ ನಾಗಾವಿ, ಸೋಮನಾಥ ಜಾಧವ, ನಾಮದೇವ ಮಾಂಡ್ರೆ, ನಬಿಸಾಬ ನದಾಫ, ಈಶಪ್ಪ ಕಡಕೋಳ, ದ್ಯಾಮಣ್ಣ ಲಮಾಣಿ, ಫಿರೋಜ್ ನದಾಫ್, ಖಾದೀರ್ ಸಾಬ್, ಮಹಮ್ಮದ್ ಶಲವಡಿ ಸೇರಿದಂತೆ ನಾಗಾವಿ, ಬೆಳಧಡಿ, ಶಿರಹಟ್ಟಿ, ಲಕ್ಷ್ಮೇಶ್ವರ, ಎಲ್ಲಾಪೂರ, ಮುರುಡಿ ಹಾಗೂ ಗ್ರಾಮದ ರೈತರು, ಮಹಿಳೆಯರು ಭಾಗವಹಿಸಿ “ಅರಣ್ಯ ಅವಲಂಬಿತ ಬಗರಹುಕುಂ ಸಾಗುವಳಿದಾರ ರೈತರಿಗೆ ಹಕ್ಕುಪತ್ರ ನೀಡಬೇಕು” ಎಂದು ಆಗ್ರಹಿಸಿದರು. 

ರೋಟ್ಟಿ ಬಡಿಯೋ ಚಳುವಳಿ ಇಂದು..! 

ಬಗರಹುಕುಂ ಸಾಗುವಳಿದಾರರು ಹಾಗೂ ಅರಣ್ಯ ಅವಲಂಬಿತ ರೈತರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಒಂದಲ್ಲಾ ಒಂದು ರೀತಿಯ ಪರತಿಭಟನೆ ಮಾಡಿತ್ತಿದ್ದು, ದೀಡ್ ನಮಸ್ಕಾರ, ಉರುಳು ಸೇವೆ, ಪೊರಕೆ ಚಳುವಳು ಹಾಗೂ ಇಂದು ಶನಿವಾರ ನಗರದ ಜಿಲ್ಲಾಡಳಿತ ಭವನದ “ರೋಟ್ಟಿ ಬಡಿಯೋ ಚಳುವಳಿ” ನಿರ್ಧರಿಸಲಾಗಿದೆ ಎಂದು ಉತ್ತರ ಕರ್ನಾಟಕ ಮಹಾಸಭಾದ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ ತಿಳಿಸಿದ್ದಾರೆ.