ಸಹಕಾರ ಸಂಘದ ಏಳಿಗೆಗೆ ರೈತರು ಕೈ ಜೋಡಿಸಿ ಸಿ.ಯಂಕಪ್ಪ

ಸಹಕಾರ ಸಂಘದ ಏಳಿಗೆಗೆ ರೈತರು ಕೈ ಜೋಡಿಸಿ ಸಿ.ಯಂಕಪ್ಪ Farmers should join hands for the progress of the cooperative society: C. Yankappa

ಲೋಕದರ್ಶನ ವರದಿ

ಕಂಪ್ಲಿ 28:  ಸಹಕಾರಿ ಸಂಘಗಳಿಗೆ ಸರ್ಕಾರದ ಅನುದಾನವಿಲ್ಲ. ರೈತರ ಶೇರು ಅನುದಾನದಲ್ಲೇ ಸಾಲ ಸೌಲಭ್ಯದೊಂದಿಗೆ ಸಂಘವು ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಸಿ.ಯಂಕಪ್ಪ ಹೇಳಿದರು.  ತಾಲೂಕಿನ ಸಣಾಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಛೇರಿ ಆವರಣದಲ್ಲಿ ಗುರುವಾರ ನಡೆದ ವಾರ್ಷಿಕ ಮಹಾಜನ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಸಂಘವು 1253 ಜನ ಸದಸ್ಯರನ್ನು ಹೊಂದುವ ಜೊತೆಗೆ ಸುಮಾರು 79.70 ಲಕ್ಷ ಶೇರು ಬಂಡವಾಳ ಹೊಂದಿದೆ. 251 ಜನಕ್ಕೆ ಸುಮಾರು 268.19 ಲಕ್ಷ ಕೆಸಿಸಿ ಸಾಲ ನೀಡಿದ್ದು, ಶೇ.100ರಷ್ಟು ವಸೂಲಾತಿ ಸಾಧನೆ ಮಾಡಿದೆ. 64 ಜನಕ್ಕೆ 28.08 ಲಕ್ಷ ಬಿಡಿಪಿ ಸಾಲ, 51 ಜನಕ್ಕೆ 260.65 ಲಕ್ಷ ಐಪಿ ಸೆಟ್ ಸಾಲ, 6 ಜನಕ್ಕೆ 17.54 ಲಕ್ಷ ಟ್ರ್ಯಾಕ್ಟರ್ ಸಾಲ ವಿತರಿಸಿದೆ.

26.39 ಲಕ್ಷ ಪತ್ತೇತರ ವ್ಯವಹಾರ ನಡೆಸಿ, 0.29 ಲಕ್ಷ ವ್ಯವಹಾರ ಲಾಭಗಳಿಸಿದೆ. 2025-26ನೇ ಸಾಲಿನಲ್ಲಿ ಸುಮಾರು 1 ಲಕ್ಷ 66 ಸಾವಿರ 224 ರೂ.ಗಳ ನಿವ್ವಳ ಲಾಭಗಳಿಸಿದೆ. ನಿರ್ದೇಶಕರ, ರೈತರು, ಸ್ಥಳೀಯ ಮುಖಂಡರ ಸಹಕಾರದೊಂದಿಗೆ  ಸಂಘವು ಅಭಿವೃದ್ಧಿಯತ್ತ ದಾಪುಗಾಲು ಇಟ್ಟಿದೆ. ಇದೇ ತರನಾಗಿ ಸಂಘದ ಏಳಿಗೆಗೆ ಕೈಜೋಡಿಸಬೇಕು ಎಂದರು. ನಂತರ ಮುಖ್ಯಕಾರ್ಯನಿರ್ವಾಹಕ ಎ.ಶಿವಕುಮಾರ ವಾರ್ಷಿಕ ವರದಿ ಮಂಡಿಸಿದರು.  ಈ ಸಂದರ್ಭದಲ್ಲಿ ಉಪಾಧ್ಯಕ್ಷ ಡಿ.ಹನುಮಯ್ಯ, ನಿರ್ದೇಶಕರಾದ ಪಿ.ಮೂಕಯ್ಯಸ್ವಾಮಿ, ಕೆ.ವೆಂಕಟರಾಮರಾಜು, ಜಿ.ವಿರೇಶಪ್ಪ, ಪಿ.ಚೊಕ್ಕರಾವ್, ವಿ.ವೆಂಕಟೇಶ, ಜಾಲಿಹಳ್ಳಿ ಶಾಮೀದ್ ಸಾಬ್, ಹಗೇದಾಳ್ ವಿರೇಶ, ಗೌಡ್ರು ಚನ್ನವೀರ, ವೈ.ರೇಣುಕಮ್ಮ, ಎಂ.ಈಶ್ವರಿ, ಕಂಬಳಿ ಚನ್ನಪ್ಪ ಸೇರಿದಂತೆ ಮುಖಂಡರು, ಸಿಬ್ಬಂದಿ ಇದ್ದರು.