ಬೆಳೆಪರಿಹಾರ ವಿಮಾ ಹಣ ಬಿಡುಗಡೆಗೆ ಒತ್ತಾಯಿಸಿ ರೈತರ ಪ್ರತಿಭಟನೆ
Farmers protest demanding release of crop insurance money
ಲೋಕದರ್ಶನ ವರದಿ
ಬೆಳೆಪರಿಹಾರ ವಿಮಾ ಹಣ ಬಿಡುಗಡೆಗೆ ಒತ್ತಾಯಿಸಿ ರೈತರ ಪ್ರತಿಭಟನೆ
ಶಿಗ್ಗಾವಿ 11: ಪ್ರಸ್ತುತ ಮುಂಗಾರಿನಲ್ಲಿ ಅತೀ ಮಳೆಯಾಗಿ ಬೆಳೆ ಹಾನಿಯಾದರು ತಾಲೂಕನ್ನು ಹಾನಿ ಪ್ರದೇಶ ಎಂದು ಪರಿಗಣಿಸಿಲ್ಲ, 2024 ನೇ ಸಾಲಿನ ಬೆಳೆಪರಿಹಾರ ಮತ್ತು ವಿಮಾ ಹಣವನ್ನು ಬಿಡುಗಡೆ ಮಾಡಬೇಕು, ಒತ್ತಾಯಿಸಿ ತಾಲೂಕಿನ ನೊಂದ ರೈತ ಪಡೆಯಿಂದ ಪಟ್ಟಣದಲ್ಲಿ ಬ್ರಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡ ಶಶಿಧರ ಹೊನ್ನಣ್ಣವರ ಮಾತನಾಡಿ ತಾಲೂಕಿನಲ್ಲಿ ಬೆಳೆ ಹಾನಿ ಸಮೀಕ್ಷೆಯನ್ನು ನಡೆಸಿದ ಕಂದಾಯ ಇಲಾಖೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸರ್ಕಾರದ ಮತ್ತು ವಿಮಾ ಕಂಪನಿಗಳ ನಿರ್ದೇಶನದಂತೆ ತಾಲೂಕಿನಲ್ಲಿ ವಾಡಿಕೆ ಗಿಂತ ಮಳೆ ಕಡಿಮೆಯಾಗಿದೆ. ಮತ್ತು ಅಧಿಕಾರಿಗಳ ವರದಿ ಪ್ರಕಾರ ತಾಲೂಕಿನಲ್ಲಿ ಗೋವಿನ ಜೋಳದ ಬೆಳೆ ಮಾತ್ರ ಕೇವಲ ಗುಂಟೆಗಟ್ಟಲೆ ಭೂಮಿ ಹಾನಿಯಾಗಿ ಎಂದು ವರದಿಯನ್ನು ಅಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಅಧಿಕಾರಿಗಳ ಅವೈಜ್ಞಾನಿಕ ವರದಿಯಿಂದ ತಾಲೂಕಿನ ರೈತರು ಪರಿಹಾರಕ್ಕಾಗಿ ಪರದಾಡುವಂತಾಗಿದೆ. ಸಮೀಕ್ಷೆ ನಡೆಸಿದ ಅಧಿಕಾರಿಗಳ ವರದಿಯಲ್ಲಿ ಕೇವಲ ಒಂದು ಸಾವಿರದ ಎರಡು ಹೆಕ್ಟೇರ್ ಖುಷಿ ಭೂಮಿ ಹಾನಿಯಾಗಿದೆ ಎಂದು ವರದಿ ಸಲ್ಲಿಸಲಾಗಿದೆ. ಸರ್ಕಾರ ಹಾವೇರಿ ಜಿಲ್ಲೆಯನ್ನು ಹೊರತು ಪಡಿಸಿ ರಾಜ್ಯದ 9 ಜಿಲ್ಲೆಗಳನ್ನು ಹಾನೀಗೀಡಾದ ಪ್ರದೇಶ ಎಂದು ಪರಿಹಾರ ಕೊಟ್ಟರೆ, ತಾಲೂಕಿನಲ್ಲಿ ಸಾವಿರದ ಎರಡು ಹೆಕ್ಟೇರ್ ಪ್ರದೇಶದ ಹಾನಿಗೆ ಪರಿಹಾರ ಯಾವ ರೀತಿಯಲ್ಲಿ ಕೊಡುತ್ತೀರಿ ಎಂದರು. ಬೆಳೆ ಹಾನಿಯಿಂದ ರೈತರು ಪರದಾಡುತ್ತಿದ್ದರು ಜಿಲ್ಲಾ ಉಸ್ತುವಾರಿ ಸಚಿವರು ರೈತರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಸರ್ಕಾರ ನ್ಯಾಯಯುತ ಮರು ಸಮೀಕ್ಷೆ ನಡೆಸಿ ಹಾನಿಯಿಂದ ನೊಂದ ರೈತರಿಗೆ ಸೂಕ್ತ ಪರಿಹಾರವನ್ನು ಶೀಘ್ರದಲ್ಲಿ ಕೊಡಬೇಕು. ಇಲ್ಲದಿದ್ದರೆ ಪರಿಹಾರಕ್ಕಾಗಿ ನವಲಗುಂದ, ನರಗುಂದದ ರೈತ ಹೋರಾಟದ ಮಾದರಿಯಲ್ಲಿ ಮುಂದಿನ ದಿನಗಳಲ್ಲಿ ತಹಸೀಲ್ದಾರ ಕಚೇರಿ, ಕೃಷಿ ಇಲಾಖೆ ಕಚೇರಿಗೆ ಬೀಗ ಜಡಿದು, ರಾಷ್ಟ್ರೀಯ ಹೆದ್ದಾರಿಯ ತಡೆದು ಉಗ್ರ ಹೋರಾಟದ ಎಚ್ಚರಿಕೆ ನೀಡಿದರು. ರಾಣಿ ಚೆನ್ನಮ್ಮ ವೃತ್ತದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಮಾರ್ಕೆಟ್ ರೋಡ್, ಹಳೆ ಬಸ್ ನಿಲ್ದಾಣ, ಪಿ ಎಲ್ ಡಿ ಬ್ಯಾಂಕ್ ಸರ್ಕಲ್, ಹೊಸ ಬಸ್ ನಿಲ್ದಾಣ ಮುಖಾಂತರ ತಹಸೀಲ್ದಾರ ಕಾರ್ಯಾಲಯಕ್ಕೆ ತೆರಳಿ ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರ ಯಲ್ಲಪ್ಪ ಗೋಣೆಣ್ಣವರ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಉಮೇಶ ಅಂಗಡಿ, ವಿಶ್ವನಾಥ ಹರವಿ, ಕಲ್ಲಪ್ಪ ಮಾರನಬೀಡ, ಶೇಕಣ್ಣ ಕುಂದೂರು, ಹನುಮಂತಪ್ಪ ತೆಮ್ಮನಕೊಪ್ಪ, ಮಲ್ಲೇಶಪ್ಪ ಬೂದಿಹಾಳ, ನಾಗರಾಜ ಬುದನೂರ, ಮುತ್ತಣ್ಣ ಗುಡಗೇರಿ, ನಿಂಗಣ್ಣ ಹರಿಜನ, ಜಿನ್ನಪ್ಪ ವರೂರ, ಉಮೇಶ ಅಂಗಡಿ, ನಾಗರಾಜ ಅಂಗಡಿ, ಜಗದೀಶ ಸಿದ್ದಪ್ಪನವರ, ಅರ್ಜಪ್ಪ ಲಮಾಣಿ, ಬಸವರಾಜ ಕುರಗೊಡಿ ಸೇರಿದಂತೆ ಅನೇಕರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 