ಕೃಷಿ ಪಂಪ್ಸೆಟ್ಗಳಿಗೆ ಸಮರ​‍್ಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರೈತರ ಪ್ರತಿಭಟನೆ

ಕೃಷಿ ಪಂಪ್ಸೆಟ್ಗಳಿಗೆ ಸಮರ​‍್ಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರೈತರ ಪ್ರತಿಭಟನೆ  Farmers protest demanding adequate power supply for agricultural pumpsets


ಹೂವಿನಹಡಗಲಿ, 22: ಕೃಷಿ ಪಂಪ್ಸೆಟ್ಗಳಿಗೆ ಅಸಮರ​‍್ಕ ವಿದ್ಯುತ್ ಪೂರೈಕೆ ಖಂಡಿಸಿ, ನಿರಂತರ ಹಾಗೂ ಸಮರ​‍್ಕ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ತಾಲೂಕಿನ ಗಿರಿಯಾಪುರ ಮಠ ಕೆಇಬಿ ಕಚೇರಿಗೆ ಮುತ್ತಿಗೆ ಹಾಕಿದ ರೈತರು ಪ್ರತಿಭಟನೆ ನಡೆಸಿದರು.  

ಭೀಕರ ಬರಗಾಲದಿಂದಾಗಿ ಈಗಾಗಲೇ ಮಳೆಯಾಶ್ರಿತ ಬೆಳೆಗಳು ಒಣಗಿವೆ. ಬೋರ್ವೆಲ್ಗಳಲ್ಲಿಯೂ ನೀರು ಕುಸಿದಿದ್ದು, ಉಳಿದಿರುವ ನೀರಾವರಿ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.

ಈ ಪರಿಸ್ಥಿತಿಯಲ್ಲಿ ಲಭ್ಯವಿರುವ ಏಳು ತಾಸಿನ ವಿದ್ಯುತ್ ಪೂರೈಕೆಯಲ್ಲಿ ಕೇವಲ ಐದು ಗಂಟೆ ಮಾತ್ರ ವಿದ್ಯುತ್ ದೊರೆಯುತ್ತಿದ್ದು, ಅದೂ ನಿರಂತರವಾಗಿ ಪೂರೈಕೆಯಾಗುತ್ತಿಲ್ಲ ಎಂದು ರೈತರು ದೂರಿದರು.  

ಪದೇ ಪದೇ ವಿದ್ಯುತ್ ಟ್ರಿಪ್ ಆಗುತ್ತಿರುವುದರಿಂದ ರೈತರು ರಾತ್ರಿ ವೇಳೆ ಹೊಲಗಳಿಗೆ ತೆರಳಿ ಪಂಪ್ಸೆಟ್ಗಳನ್ನು ಚಾಲನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರೈತರು ನಿದ್ದೆ ಕಳೆದುಕೊಂಡು, ರಾತ್ರಿ ಹೊತ್ತು ಹೊಲಗಳಲ್ಲಿ ಸುತ್ತಾಡುವಂತಾಗಿದೆ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು.  

“ರಾತ್ರಿ ವೇಳೆ ವಿದ್ಯುತ್ ನೀಡುವುದು ರೈತರಿಗೆ ಅನುಕೂಲ ಎಂದು ಕಚೇರಿ ದಾಖಲೆಗಳಲ್ಲಿ ಲೆಕ್ಕ ಹಾಕಬಹುದು. ಆದರೆ ಮಧ್ಯರಾತ್ರಿ ಹೊಲದಲ್ಲಿ ಒಬ್ಬಂಟಿಯಾಗಿ ನಿಂತು ವಿದ್ಯುತ್ಗಾಗಿ ಕಾಯುವ ರೈತನಿಗೆ ಅದರ ನಿಜವಾದ ಬೆಲೆ ಗೊತ್ತಾಗುತ್ತದೆ.

ಒಂದು ಕಡೆ ಬೆಳೆ ಒಣಗುವ ಆತಂಕ, ಮತ್ತೊಂದೆಡೆ ವಿದ್ಯುತ್ ಸಂಪರ್ಕದಿಂದ ಅಪಾಯ ಎದುರಾಗುವ ಭೀತಿ ಹಾಗೂ ವಿಷಕಾರಿ ಹುಳು-ಹುಪ್ಪಟೆಗಳ ಕಾಟದ ನಡುವೆ ರೈತರು ಜೀವನ ಸಾಗಿಸಬೇಕಾಗಿದೆ” ಎಂದು ರೈತರು ಹೇಳಿದರು.  

ಹಗಲಿನ ವೇಳೆಯಲ್ಲಿ ವಿದ್ಯುತ್ ಪೂರೈಕೆಗೆ ಆಗ್ರಹ  

ರೈತರಿಗೆ ಹಗಲಿನ ವೇಳೆಯಲ್ಲಿಯೇ ಸಮರ​‍್ಕ ಹಾಗೂ ನಿರಂತರ ವಿದ್ಯುತ್ ಪೂರೈಕೆ ಮಾಡುವ ವ್ಯವಸ್ಥೆ ಕಲ್ಪಿಸಬೇಕು. ಕನಿಷ್ಠ ದಿನಕ್ಕೆ 10 ಗಂಟೆಗಳ ಕಾಲ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕು ಎಂದು ರೈತರು ಆಗ್ರಹಿಸಿದರು.  ಬೂದನೂರು, ನಂದಿಗಾವಿ, ಬ್ಯಾಲಹುಣಸಿ, ವಿರಾಪುರ ಹಾಗೂ ಗಿರಿಯಾಪುರ ಗ್ರಾಮದ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.