ನಿಗಧಿತ ಬೆಲೆ ನೀಡದ ಕಾರಣ ರಾಜ್ಯ ಹೆದ್ದಾರಿ ತಡೆದು ರೈತರಿಂದ ಪ್ರತಿಭಟನೆ
Farmers protest by blocking state highway over non-payment of fixed price
ಕಾಗವಾಡ, 05 : ರೈತರು ಕಷ್ಟಪಟ್ಟು ಬೆಳೆದ ಪ್ರತಿ ಟನ್ ಕಬ್ಬಿಗೆ ಕನಿಷ್ಟ 3500 ರೂ. ದರವನ್ನು ನೀಡಬೇಕೇಂದು ಬುಧವಾರ ದಿ. 05 ರಂದು ತಾಲೂಕಿನ ಮಂಗಸೂಳಿ ಗ್ರಾಮದ ಹತ್ತಿರ ಅಥಣಿ-ಕಾಗವಾಡ ರಾಜ್ಯ ಹೆದ್ದಾರಿ ತಡೆದು, ರೈತರು ಪ್ರತಿಭಟನೆ ನಡೆಸಿದ್ದಾರೆ
ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ ರೈತ ಸಂಘಟನೆಯ ಮುಖಂಡರ ನೇತೃತ್ವದಲ್ಲಿ ಮೋಳೆ, ಮಂಗಸೂಳಿ, ಐನಾಪೂರ, ಕೆಂಪವಾಡ, ಲೋಕೂರ, ಕಿತ್ತೂರ, ಬಣಜವಾಡ ಕೌಲಗುಡ್ಡ, ನವಲಿಹಾಳ ಸೇರಿದಂತೆ ಹಲವಾರು ಗ್ರಾಮಗಳ ನೂರಾರು ರೈತರು ರಾಜ್ಯ ಹೆದ್ದಾರಿ ತಡೆದು, ಪ್ರತಿಭಟನೆ ನಡೆಸಿ, ಸಕ್ಕರೆ ಕಾರ್ಖಾನೆಗಳಿಗೆ, ಹಾಗೂ ಸರ್ಕಾರಕ್ಕೆ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಪ್ರಸಕ್ತ ಹಂಗಾಮಿಗೆ ಪ್ರತಿ ಟನ್ ಕಬ್ಬಿಗೆ ಕನಿಷ್ಠ ಪಕ್ಷ 3500 ರೂ. ಘೋಷಿಸಿ, ಕಾರ್ಖಾನೆಗಳನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು. ಕಳೆದ ಒಂದು ವಾರದಿಂದ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಸೇರಿದಂತೆ ಲಕ್ಷಾಂತರ ರೈತರು ಬೀದಿಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದರೂ ಕೂಡ ಯಾವೊಬ್ಬ ಸಚಿವರಾಗಲಿ, ಶಾಸಕರಾಗಲಿ, ಕಾರ್ಖಾನೆಯ ಮಾಲೀಕರಾಗಲಿ ರೈತರ ಬಳಿ ಬಂದು ದರ ಘೋಷಣೆ ಮಾಡದೇ ಇರುವುದು ರೈತರು ಕೆಂಗಣ್ಣಿಗೆ ಗುರಿಯಾಗಿದೆ. ಹೀಗೆ ನೀವು ಮೊಂಡುತನ ಮುಂದುವರೆಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದರು.
ತಮ್ಮ ಪ್ರಮುಖ ಬೇಡಿಕೆ ಈಡೇರದೇ ಹೋದರೆ ಸಕ್ಕರೆ ಕಾರ್ಖಾನೆಯ ಕ್ಯಾರಿಯರ್‌ನಲ್ಲಿ ಒಂದು ತುಂಡು ಕಬ್ಬು ಬೀಳುವುದಿಲ್ಲ. ನಿಮ್ಮ ಚಿಮಣಿಯಿಂದ ಹೊಗೆಯು ಸಹ ಬರುವುದಿಲ್ಲವೆಂದು ಪ್ರತಿಭಟನಾನಿರತ ಕಬ್ಬು ಬೆಳೆಗಾರರು ಸಕ್ಕರೆ ಕಾರ್ಖಾನೆಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಎಪಿಎಂಸಿಯ ಮಾಜಿ ಅಧ್ಯಕ್ಷ ರವೀಂದ್ರ ಪೂಜಾರಿ ಮಾತನಾಡಿ, ಬೆಳಗಾವಿ, ವಿಜಯಪೂರ, ಬಾಗಲಕೋಟ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಲ್ಲಿ ರೈತರು ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೇವೆ. ಈಗ ಅಕ್ಷರಶಃ ರೈತರು ಸಹನೆ ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೇ, ಕಾರ್ಖಾನೆಯವರು ಕುತಂತ್ರಗಳನ್ನು ನಡೆಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತ ಮುಖಂಡ ಚಿದಾನಂದ ಮಾಳಿ ಮಾತನಾಡಿ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಕ್ಕರೆ ದರ 4500 ರೂ. ಇರುವಾಗ ಕಬ್ಬಿಗೆ 3500 ರೂ. ನೀಡಬೇಕು ಎಂದು ಆಗ್ರಹಿಸಿ, ಕಬ್ಬಿನಿಂದ ಸಕ್ಕರೆ ಅಲ್ಲದೆ ಉಪ ಉತ್ಪನ್ನಗಳಿಂದ ಕೋಟ್ಯಾಂತರ ರೂ. ಲಾಭ ಮಾಡಿಕೊಳ್ಳುತ್ತಿದ್ದರೂ ಸಹ ರೈತರಿಗೆ ಮಾತ್ರ ಬೆಂಬಲ ಬೆಲೆ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಈ ವೇಳೆ ರೈತ ಮುಖಂಡರಾದ ನಾನಾಸಾಹೇಬ ಶಿರಗಾಂವೆ, ರಾಹುಲ ಕಟಗೇರಿ, ವೀರಭದ್ರ ಕಟಗೇರಿ, ಸಂಜಯ ತಳವಲಕರ, ಚಿದಾನಂದ ಮಾಳಿ, ಮುಕುಂದ ಪೂಜಾರಿ, ಸಿದ್ದು ಹವಳೆ, ಆಧಿನಾಥ ಯರಂಡೋಲಿ, ಅಶೋಕ ಹುಗ್ಗಿ, ಮಹಾವೀರ ಮುಂಜೆ, ಬಾಹುಬಲಿ ಟೋಪಗಿ, ದುಂಡಪ್ಪ ತುಗಶೆಟ್ಟಿ, ಬಾಳು ನರಟ್ಟಿ, ಪೋಪಟ ಬಣಚೋಡ, ಗಣಪತಿ ಬಣಚೋಡ, ರವೀಂದ್ರ ಬಣಚೋಡ, ಅಶೋಕ ಚಾಳೇಕರ, ಹಣಮಂತ ಕಡಕೋಳ, ಧರೆಪ್ಪ ಕೆಂಪವಾಡೆ, ಶಾಂತು ದೇಸಾಯಿ, ಲಕ್ಷ್ಮಣ ಮಾಳಿ, ಸೇರಿದಂತೆ ನೂರಾರು ರೈತ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಮಂಗಸೂಳಿ ಗ್ರಾಮದಲ್ಲಿ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ಸುಮಾರು 4 ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು. ಕಾಗವಾಡ ಪೋಲೀಸರು ಬಂದೋಬಸ್ತ ಏರಿ್ಡಸಿ, ರೈತರಿಗೆ ಸಾಥ್ ನೀಡಿದರು. ತಹಸೀಲ್ದಾರ ರವೀಂದ್ರ ಹಾದಿಮನಿ ಬಂದು ರೈತರ ಮನವಿ ಸ್ವೀಕರಿಸಿ ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.
ರೈತರು ನಡೆಸುತ್ತಿರುವ ಹೋರಾಟಕ್ಕೆ ಕಾಗವಾಡ ತಾಲೂಕಾ ವಕೀಲರ ಸಂಘ ಹಾಗೂ ಪತ್ರಕರ್ತರು ತಮ್ಮ ಬೆಂಬಲವನ್ನು ಸೂಚಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 