ಕೆಟ್ಟು ನಿಂತ ಪಂಪಸೆಟ್‌ಗಳನ್ನು ಸರಿಪಡಿಸಿ ಇನ್ನೂ 20 ದಿನ ನೀರು ಹರಿಸಲು ನವಿಲುತೀರ್ಥ ಕಚೇರಿಗೆ ಮುತ್ತಿಗೆ ಹಾಕಿ ರೈತರು ಪ್ರತಿಭಟಿನೆ
Farmers protest by besieging the Naviluthirtha office to demand that the broken pump sets be repaire
ಯರಗಟ್ಟಿ 24 : ತಾಲೂಕಿನ ಏತನೀರಾವರಿ ಕಾಲುವೆಗೆ ತಿಂಗಳಾದರೂ ನೀರಿಲ್ಲ-ಕಚೇರಿಯಲ್ಲಿ ಅಧಿಕಾರಿಗಳಿಲ್ಲ. ಇದು ನೀರಾವರಿ ಕಚೇರಿಯ ದುಸ್ಥಿತಿ. ದುರಸ್ಥಿಗೆ ಬಂದ ಪಂಪಸೆಟ್‌ಗಳನ್ನು ತ್ವರಿತವಾಗಿ ರಿಪೇರಿ ಮಾಡಿ. ಇಲ್ಲವೇ ಪಂಪಸೆಟ್ ಸರಿಪಡಿಸಿದ ಬಳಿಕ ಸ್ಥಗಿತಗೊಳಿಸಿದ ಸಮಯ ಆಧರಿಸಿ ಇನ್ನೂ 20 ದಿನ ನೀರು ಹರಿಸುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಿರೆಂದು ಸೋಮವಾರ ನವಿಲುತೀರ್ಥ ಕಚೇರಿಗೆ ಹಠಾತ್ತನೆ ಮುತ್ತಿಗೆ ಹಾಕಿ ಪ್ರತಿಭಟಿಸಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಮಲಪ್ರಭಾ ಎಡದಂಡೆ ಕಾಲುವೆ ಮೂಲಕ ಯರಗಟ್ಟಿ ಏತನೀರಾವರಿ ಜಾಕ್ವೆಲ್‌ಗೆ ಬಂದ ನೀರನ್ನು ಲಿಫ್ಟ್ ಮಾಡಿ ಕಾಲುವೆಗೆ ಹರಿಸಲಾಗುತ್ತಿದೆ. ಇರುವ ನಾಲ್ಕಾರು ಪಂಪ್‌ಸೆಟ್‌ಗಳಲ್ಲಿ ಎರಡ್ಮೂರು ಕೆಟ್ಟುನಿಂತಿವೆ. ಫೆ. 28 ಕ್ಕೆ ಅವುಗಳನ್ನು ಸ್ಥಗಿತಗೊಳಿಸುತ್ತಿದ್ದೀರಿ. ಆಲದಕಟ್ಟಿ ಸೇರಿ ಹಲವು ಗ್ರಾಮಗಳ ಜಮೀನುಗಳಿಗೆ ಇನ್ನೂ ನೀರುಣಿಸಿಲ್ಲ. ಅಧಿಕಾರಿಗಳ ತಪ್ಪಿಗೆ ರೈತರು ಬಲಿಪಶುವಾಗುವದು ಎಷ್ಟು ಸರಿಯೆಂದು ಪ್ರತಿಭಟನಾ ನಿರತ ರೈತರು ಆಗ್ರಹಿಸಿದರು.
ಅಲದಕಟ್ಟಿ, ರೈನಾಪೂರ, ಜೀವಾಪೂರ, ಸೊಪ್ಪಡ್ಲ ಹಾಗೂ ಸುತ್ತಲಿನ ಪ್ರದೇಶಗಳಿಗೆ ಮೇಲ್ಮಟ್ಟದ ಕ್ಷೇತ್ರಕ್ಕೆ ನೀರುಣಿಸುವ 2 ಪಂಪ್‌ಗಳು ಕೆಟ್ಟು ಸಾಕಷ್ಟು ಪ್ರಮಾಣದ ಬೆಳೆಗಳು ನೀರಿಲ್ಲದೆ ಒಣಗಿ ಕಮರುತ್ತಿವೆ. ಕಡಲೆ, ಗೋವಿನಜೋಳ, ಸೂರ್ಯಕಾಂತಿ ಸೇರಿ ಹಿಂಗಾರು ಬೆಳೆಗಳಿಗೆ ನೀರಿನ ಅತೀ ಅವಶ್ಯವಿದೆ. ಇನ್ನೂ ಸ್ವಲ್ಪ ಅವಧಿ ನೀರುಣಿಸಿದರೆ ಬೆಳೆಗಳು ರೈತರ ಕೈತಾಕಲಿವೆ. ಬಿರುಬಿಸಲಿಗೆ ಭೂಮಿ ಬಾಯಿತೆರೆಯುತ್ತಿದೆ. ಬೆಳೆ ಒಣಗಿ ನೆಲಕಚ್ಚಲು ಸನ್ನಿಹಿತವಾಗಿದೆ. ಸಕಾಲಕ್ಕೆ ನೀರುಣಿಸದಿದ್ದರೆ ಇವತ್ತಿನವರೆಗೆ ಶ್ರಮಿಸಿದ್ದೆಲ್ಲವೂ ವ್ಯರ್ಥವಾಗುತ್ತದೆ.
ನೀರಾವರಿ ಇಲಾಖೆಯಲ್ಲಿ ಸಿಬ್ಬಂದಿಗಳಿಲ್ಲ. ಸಮಸ್ಯೆಯನ್ನು ತಿಳಿಸುವದಾದರೂ ಯಾರಿಗೇ ? ಸರಕಾರಗಳು ಬದಲಾದರೂ ರೈತರ ಬವಣೆ ನಿಂತಿಲ್ಲ. ಶೀಘ್ರ ಕ್ರಮವಿರಿಸಿ ಜಾಕ್ವೆಲ್ ಗೆ ನೀರು ಹರಿಸಿರಿ ಎಂದು ಪ್ರತಿಭಟನಾ ನಿರತ ರೈತರು ತಮ್ಮ ಅಳಲನ್ನು ತೋಡಿಕೊಂಡರು.
ಅಧಿಕಾರಿಗಳ ಭರವಸೆ ಮೇರೆಗೆ ಪ್ರತಿಭಟನೆ ಸ್ಥಗಿತಗೊಳಿಸಿದ ರೈತರು ಮನವಿ ಸಲ್ಲಿಸಿದರು. ಈ ವೇಳೆ ಪ್ರಭು ಚವಡಪ್ಪನವರ, ಮಲ್ಲನಗೌಡ ಸಣ್ಣಗೌಡರ, ಈಶ್ವರ ಚವಡಪ್ಪನವರ, ಬಸವರಾಜ ಹಳಮನಿ, ಚಂದ್ರು ಸಣ್ಣಗೌಡ್ರ ಹಾಗೂ ಪ್ರಮುಖರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 