ಭೀಮಾ ನದಿಗೆ ನೀರು ಹರಿಸುವಂತೆ ರೋಡಗಿಯಲ್ಲಿ ರೈತರ ವಿಶೇಷ ಪ್ರಾರ್ಥನೆ
Farmers offer special prayers at Rodagi for the release of water into the Bhima River
ಲೋಕದರ್ಶನ ವರದಿ
ಇಂಡಿ 18: ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ರೋಡಗಿ ಗ್ರಾಮದಲ್ಲಿ ಖೇಡಗಿ, ಮಿರಗಿ ಹಾಗೂ ಶಿವಪೂರ ಗ್ರಾಮಗಳ ನೂರಾರು ರೈತರು ಭೀಮಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಶಿವಲಿಂಗೇಶ್ವರ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರಾದ ಬಿ.ಡಿ. ಪಾಟೀಲ ಅವರು ರೈತರ ಪರವಾಗಿ ಮಾತನಾಡಿ, ಬತ್ತಿರುವ ಭೀಮಾ ಮತ್ತೆ ಉಕ್ಕಿ ಹರಿಯಲಿ. ರೈತರ ಬದುಕು ಹಸನಾಗಲಿ. ಮೇಘರಾಜನ ಕೃಪೆ ಈ ಬರಪೀಡಿತ ನಾಡಿನ ಮೇಲೆ ಸುರಿದು ಸಮೃದ್ಧಿ ನೆಲೆಸಲಿ ಎಂದು ಭೀಮಾ ನದಿಯ ದಡದಲ್ಲಿ ಪ್ರಾರ್ಥಿಸಿದರು.
ಅವರು ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿ, ಬಳಗಾನೂರ ಕೆರೆಯಿಂದ ನವಲಿ ಹಳ್ಳದ ಮೂಲಕ ಭೀಮಾ ನದಿಗೆ ನೀರು ಹರಿಸುವ ವ್ಯವಸ್ಥೆಯನ್ನು ತಕ್ಷಣ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದರಿಂದ ಇಂಡಿ ತಾಲ್ಲೂಕಿನ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದ್ದು, ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂದು ತಿಳಿಸಿದರು. ಅದೇ ರೀತಿ, ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿ ಶ್ರೀ ಎಚ್.ಡಿ. ಕುಮಾರಸ್ವಾಮಿ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿ, ಭೀಮಾ ನದಿಗೆ ನೀರು ಹರಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಇಂಡಿ ತಾಲೂಕಿನ ರೈತರ ಪರವಾಗಿ ಮನವಿ ಮಾಡಿದರು.
ಚಿದಾನಂದ ಗಚ್ಚಿನಮಠ, ಶಂಕರಗೌಡ ಬಂಡಿ, ಮಂಜು ಶಾಹಾಬಾದಿ, ಡಾ. ಹಣಮಂತ ಮೋಸಲಗಿ, ಗಂಗಪ್ಪ ಬಡದಾಳ, ಶಿವಮೂರ್ತಿ ಮಾಲಗಿ, ಶರಣಗೌಡ ಪಾಟೀಲ, ಬಸುಸಾವಕಾರ ಕೋರೆ, ಹಣಮಂತ ಸೋನ್ನ, ವಿಠಲ ಪೂಜಾರಿ, ಸಲ್ಲು ನದಾಪ್ ಶ್ರೀಶೈಲ ಲಬ್ಬಾ, ಶಂಕರ ಮಡಗೋಂಡ, ಗಜಾನನ ಪಾಟೀಲ, ನಿಯಾಝ್ ಅಗರಖೇಡ, ದುಂಡು ಬಿರಾದಾರ, ಫಜಲು ಮುಲ್ಲಾ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು. ರೈತರು ಭೀಮಾ ನದಿಗೆ ಶೀಘ್ರ ನೀರು ಹರಿಸಿ ಬರಪೀಡಿತ ಪ್ರದೇಶದ ಕೃಷಿ ಹಾಗೂ ಜನಜೀವನವನ್ನು ಉಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 