ಹೆಸ್ಕಾಂ ಕಾರ್ಯಾಲಯದಲ್ಲಿ ಸಿಬ್ಬಂದಿಯನ್ನು ನೇಮಿಸಲು ಸದಲಗಾ ಪಟ್ಟಣದ ರೈತರಿಂದ ಅಧಿಕಾರಿಗಳಿಗೆ ಮನವಿ
Farmers of Sadalaga town appeal to officials to appoint staff at HESCOM office
ಲೋಕದರ್ಶನ ವರದಿ
ಮಾಂಜರಿ 11 : ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಉಪ ವಿಭಾಗ ಕಾರ್ಯಾಲಯ ಸೇರಿ ಬೋರಗಾವ್ ಸಬ್ ಸ್ಟೇಷನ್ ವಿಭಾಗದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸಿಬ್ಬಂದಿ ಕೊರತೆಯಾಗುತ್ತಿದ್ದು ಸಿಬ್ಬಂದಿಯನ್ನು ತಕ್ಷಣ ಭರ್ತಿ ಮಾಡಬೇಕೆಂದು ಆಗ್ರಹಿಸಿ ಸೋಮವಾರರಂದು ಸದಲಗಾ ನಿಪಟ್ಟಣದ ರೈತರು, ಸಾರ್ವಜನಿಕರು ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಯುವ ಸಮಾಜ ಸೇವಾ ಸಂಘದ ವತಿಯಿಂದ ಸದಲಗಾ ಹೆಸ್ಕಾಂ ಕಾರ್ಯಾಲಯಕ್ಕೆ ತೆರಳಿ ಮನವಿ ಸಲ್ಲಿಸಿದರು. ಸಂದರ್ಭದಲ್ಲಿ ಡಾಕ್ಟರ್ ಅಬ್ದುಲ್ ಕಲಾಂ ಸಂಘದ ಅಧ್ಯಕ್ಷ ಅಜರುದ್ದೀನ್ ಶೇಖಜಿ. ಮಾತನಾಡಿ ಈಗಾಗಲೇ ಹಲವು ಬಾರಿ ಸಿಬ್ಬಂದಿ ಕೊರತೆಯ ಕುರಿತು ಮೌಖಿಕವಾಗಿ ಹಾಗೂ ಲಿಖಿತವಾಗಿ ಅರ್ಜಿ ಸಲ್ಲಿಸಲಾಗಿದೆ.
ಸದಲಗಾ ಮತ್ತು ಬೋರ್ಗಾವ್ ಪಟ್ಟಣದಲ್ಲಿರುವ ಹೆಸ್ಕಾಂ ಕಂಪನಿಯಲ್ಲಿ ಸಿಬ್ಬಂದಿಗಳನ್ನು ಸ್ವಾರಿ ನೇಮಕ ಮಾಡಬೇಕೆಂದು ಹಲವಾರು ಬಾರಿ ಮನವಿ ಸಲ್ಲಿಸಿದರು ಕೂಡ ಆದರೂ ಧೋರಣೆ ಅಧಿಕಾರಿಗಳಿಂದ ನಿರ್ಲಕ್ಷ ಅನುಸರಿಸುತ್ತಿದ್ದು ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಉಡಾಫೆ ಉತ್ತರ ನೀಡಿ ರೈತರನ್ನು ಕಡೆಗಣಿಸಲಾಗುತ್ತಿದೆ. ಬರುವ ಒಂದು ವಾರದಲ್ಲಿ ಸಿಬ್ಬಂದಿ ನೇಮಕ ಮಾಡದಿದ್ದರೆ ಕಚೇರಿ ಎದುರು ಉಪವಾಸ ಸತ್ಯಾಗ್ರಹದೊಂದಿಗೆ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಸಂತೋಷ ಹೂಗಾರ,ಬಸವರಾಜ ವಾಲಿ, ಅಜರುದ್ದೀನ್ ಶೇಖಜಿ, ಸಚಿನ್ ಪಾಟೀಲ, ಪ್ರಭು ಹವಾಲ್ದಾರ್, ಸಂಜು ಕಾಂಬಳೆ,ರಾಜು ಅಮೃತಸಮ್ಮನ್ನವರ, ಅಡಕೆ,ಸುನೀಲ್ ಬಾಗಡಿ,ಬಸವರಾಜ ಕೋಳಿ,ಪಂಕಜ ತಿಪ್ಪಣ್ಣವರ,ಮಾರುತಿ ಕಮತೆ, ಸದ್ದಾಂ ಮನೀಯರ, ಶೌಕತ್ ಅವಟಿ, ಹರೀಶ್ ಹಿತ್ತಲಮಣಿ, ಬಾದಶಾ ಕಂಪು, ಸೇರಿದಂತೆ ಸದಲಗಾ ಪಟ್ಟಣಸೇರಿ ಸುತ್ತಲಿನ ರೈತರು,ಸಾರ್ವಜನಿಕರು ಉಪಸ್ಥಿತರಿದ್ದರು.
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ
48 ಗಂಟೆಯಲ್ಲಿ ಮನೆಗಳ್ಳರಿಬ್ಬರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ
ಕನ್ನಡ ಭಾಷೆಯ ನಾಮಫಲಕಗಳ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ
ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ 