ರೈತರು ಬೀಜ- ಗೊಬ್ಬರಕ್ಕಾಗಿ ಆತಂಕ ಪಡುವ ಅಗತ್ಯವಿಲ್ಲ- ಪ್ರಕಾಶ ಕೊಳಿವಾಡ

ರೈತರು ಬೀಜ- ಗೊಬ್ಬರಕ್ಕಾಗಿ ಆತಂಕ ಪಡುವ ಅಗತ್ಯವಿಲ್ಲ- ಪ್ರಕಾಶ ಕೊಳಿವಾಡ  Farmers need not worry about seeds and fertilizers - Prakash Kolivada

ರಾಣೆಬೆನ್ನೂರು 28: ತಾಲೂಕಿನಲ್ಲಿ ಯಾವುದೇ ರೀತಿಯ ಬಿತ್ತನೆ ಬೀಜದ ಕೊರತೆ ಇಲ್ಲ ರೈತರು ಆತಂಕ ಪಡುವ ಅಗತ್ಯವೂ ಇಲ್ಲ ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು. ಅವರು ಸಹಾಯಕ  ಕೃಷಿ ನಿರ್ದೇಶಕರ ಕಛೇರಿಯಲ್ಲಿ ನಡೆದ ರಿಯಾಯಿತಿ ದರದ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.  ನದಿ ಪಾತ್ರದಲ್ಲಿ ಬರುವ ತಾಲೂಕಿನ ರೈತರು ಅಧಿಕ ಬೆಳೆಯ ನೀರೀಕ್ಷೆಯಲ್ಲಿ ಅಧಿಕ ಪ್ರಮಾಣದಲ್ಲಿ ಭತ್ತವನ್ನು ನಾಟಿ ಮಾಡಿದ್ದರು ಅವರ ನೀರೀಕ್ಷೆಯಂತೆ ಫಸಲು ಸಹ ಬಂದಿತ್ತು ಆದರೆ ಕೃತಿಕಾ ಮಳೆ ಪ್ರಭಾವ ರೈತರನ್ನು ವಂಚಿಸಿದೆ. ರೈತರು ದೃತಿ ಗೆಡುವ ಅಗತ್ಯವಿಲ್ಲ. ಮುಂಗಾರು ಹಂಗಾಮಿನ ಹಾನಿಗೆ ಪರಿಹಾರ ದೊರೆಯಲಿದೆ ಎಂದರು.  

 ರೈತರು ಹೇಳುವಂತೆ ಸರ್ಕಾರ ನೀಡುವ ಹಾನಿ ಪರಿಹಾರ  ಅ ವೈಜ್ಞಾನಿಕವಾಗಿದೆ ಎನ್ನುವ ಮಾತುಗಳು ಸತ್ಯವಾಗಿದ್ದರೂ, ವೈಜ್ಞಾನಿಕ ಬೆಲೆ ನೀಡಬೇಕಾದ ಅಗತ್ಯವು ಇಂದಿನದಾಗಿದೆ ಆದ್ದರಿಂದ ಈ ಕುರಿತು  ಸರ್ಕಾರದೊಂದಿಗೆ, ಸದನದಲ್ಲಿ ಧ್ವನಿಯೆತಿದ್ದೇನೆ. ಈ ಕುರಿತು ಹಲವು ಶಾಸಕರು ನಮ್ಮ ಬೇಡಿಕೆ ಇಟ್ಟಿದ್ದಾರೆ  ಸಮಾಲೋಚನೆ ನಡೆಸಿ, ವೈಜ್ಞಾನಿಕ ರೀತಿಯ ಪರಿಹಾರಕ್ಕೆ ಸರ್ಕಾರಕ್ಕೆ ಒತ್ತಾಯಿಸಲಾಗಿದ್ದು,   ಸರ್ಕಾರ ರೈತರ ಪರವಾಗಿದೆ. ಇಂದಿಲ್ಲ  ನಾಳೆ, ರೈತರಿಗೆ ವೈಜ್ಞಾನಿಕ ವಾಗಿ ಹಾನಿ ಪರಿಹಾರ ಈಡೇರಿಸುವ ವಿಶ್ವಾಸ ತಮಗಿದೆ ಎಂದರು. ರೈತರು ಯಾವುದೇ ಕಾರಣಕ್ಕೂ ಬೀಜ ಗೊಬ್ಬರಕ್ಕಾಗಿ ಆತಂಕ ಪಡಬಾರದು ನಿಯಮಾನುಸಾರ ಪಡೆದುಕೊಳ್ಳಲು ಅವಕಾಶವಿದೆ ಅಭಾವ ಸೃಷ್ಟಿಯಾಗದಂತೆ ನೋಡಿಕೊಳ್ಳುವ ಕುರಿತು ರೈತರು ಚಿಂತನೆ ನಡೆಸಬೇಕು. ಈ ಕುರಿತಂತೆ ತಾವು  ಇಗಾಗಲೇ ಸೂಕ್ತ ವ್ಯವಸ್ಥೆ  ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.  

 ಕೃಷಿ ಅಧಿಕಾರಿ ಅರವಿಂದ್ ಎಂ ಅವರು ಮಾತನಾಡಿ2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅಂದರೆ ಜನೇವರಿಯಿಂದ ಮೇ ತಿಂಗಳವರೆಗೆ 135..60 ಮಿ.ಮೀ. ವಾಡಿಕೆ ಮಳೆ ಇದ್ದು ಇಲ್ಲಿಯವರೆಗೂ 157.10 ಮಿ.  ಮೀ. ಮಳೆಯಾಗಿದೆ ರೈತರು ತಮ್ಮ ಭೂಮಿ ಸಿದ್ಧತೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಪ್ರಗತಿಯಲ್ಲಿದೆ ಮುಂಗಾರು ಹಂಗಾಮಿನಲ್ಲಿ ಬಿತ್ತ ನೆಗಾಗಿ 7780  ಭತ್ತ, 42909  ಗೋವಿನ ಜೋಳ,615 ತೊಗರಿ, 1150  ಶೇಂಗಾ,575 ಹತ್ತಿ,579 ಸೋಯಾಬಿನ್,159 ಹೆಸರು ಮತ್ತು1206 ಡಾಕ್ಟರ್ ಪ್ರದೇಶಗಳಲ್ಲಿ ಇತರೆ ಬೆಳೆಗಳು ಸೇರಿದಂತೆ ಒಟ್ಟು 54901 ಹೆಕ್ಟರ್ ಪ್ರವೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ.  

ಸೋಯಾಬಿನ್ ಶೇಂಗಾ ಬೀಜಗಳ ಮೇಲ್ಪದರೂ ಸೂಕ್ಷ್ಮವಾಗಿ ರುವುದರಿಂದ ಟ್ರ್ಯಕ್ಟರ್ ಬಿತ್ತನೆ ಆಳವಾದ ಬಿತ್ತನೆ ಹೆಚ್ಚಾಗಿ ಉಷ್ಣಾಂಶ ಹಾಗೂ ಒಣ ಹವೇ ಇದ್ದಲ್ಲಿ ಬಿತ್ತನೆಗೆ ಸೂಕ್ತವಾಗಿರುವುದಿಲ್ಲ. ರೈತರು ಬೀಜಗಳನ್ನು ಬಿತ್ತುವಾಗ ಟ್ರೈಕೋಡ  ಡಮ್ರಾ/ ಅಜಟೂಬ್ಯಾಕ್ಟೊ ಮತ್ತು ಅಜೋಸ್ವರಲಮಓ,/ ವ್ಯಾಮ್ ಜೈನೆಟ್ / ಮೋನೇಬ್ ಳನ್ನು 4 ಗ್ರಾಂ ಪ್ರತಿ ಕೆಜಿ ಬೀಜಕ್ಕೆ ಲೇಪಿಸಿ ( ಉಪಚರಿಸಿ ) ಬಿತ್ತನೆ ಮಾಡುವುದರಿಂದ ಬೀಜ ಮೊಳಕೆ ಮತ್ತು ಬೆಳೆಯ ಬೆಳವಣಿಗೆ ಹಂತದಲ್ಲಿ ಬರುವಂತಹ ರೋಗ, ಕೀಟಗಳಿಂದ ರಕ್ಷಿಸಿಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು. ಸಹಾಯಧನ ಬೀಜ ವಿತರಣಾ ಕಾರ್ಯಕ್ರಮದಲ್ಲಿ ರೈತ ಮುಖಂಡ ರವೀಂದ್ರ ಗೌಡ ಪಾಟೀಲ್, ಸಹಾಯಕ ಕೃಷಿ ನಿರ್ದೇಶಕರು ಸೇರಿದಂತೆ ಮತ್ತಿತರ ನೂರಾರುರೈತರು ಉಪಸ್ಥಿತರಿದ್ದರು