ವಿದ್ಯುತ್ ವ್ಯತ್ಯಯ ಖಂಡಿಸಿ ಕೆಇಬಿ ಕಚೇರಿಗೆ ರೈತರ ಮುತ್ತಿಗೆ

ವಿದ್ಯುತ್ ವ್ಯತ್ಯಯ ಖಂಡಿಸಿ ಕೆಇಬಿ ಕಚೇರಿಗೆ ರೈತರ ಮುತ್ತಿಗೆ  Farmers lay siege to KEB office in protest against power outages


ಕೊಲ್ಹಾರ 04: ರೈತರ ಪಂಪ್ಸೆಟ್ಗಳಿಗೆ ಸಮರ​‍್ಕ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ತಾಲೂಕಿನ ತಳೆವಾಡ, ಕೂಡಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಗುರುವಾರ ಕೆಇಬಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಸರ್ಕಾರದ ನಿಯಮದಂತೆ ಗ್ರಾಮೀಣ ಭಾಗದ ರೈತರ ಪಂಪ್ಸೆಟ್ಗಳಿಗೆ ಪ್ರತಿದಿನ ಏಳು ಗಂಟೆ ನಿರಂತರ ತ್ರಿಫೇಸ್ ವಿದ್ಯುತ್ ಪೂರೈಸಬೇಕು. ಆದರೆ ಹಲವು ದಿನಗಳಿಂದ ವಿದ್ಯುತ್ ವ್ಯತ್ಯಯ, ಲೋಡ್ಶೆಡ್ಡಿಂಗ್ ಹಾಗೂ ವಿದ್ಯುತ್ ಲೈನ್ ಸಮಸ್ಯೆಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ ಎಂದು ರೈತರು ಆರೋಪಿಸಿದರು.

ಕಳೆದ ವಾರ ಕೆಇಬಿ ಕಚೇರಿಗೆ ಮುತ್ತಿಗೆ ಹಾಕಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಕೂಡಲೇ ವಿದ್ಯುತ್ ಲೈನ್ಗಳ ದುರಸ್ತಿ ಮಾಡಿ ನಿರಂತರ ವಿದ್ಯುತ್ ಪೂರೈಸಬೇಕು,  ಎಂದು ರೈತರು ಆಗ್ರಹಿಸಿದರು. ಮಾಂತೇಶ ಮಠಪತಿ, ಸದಯ್ಯ ಮಠಪತಿ, ಗೋಪಾಲ್ ಕಾಡಸಿದ್ದಿ, ಅರ್ಜುನ ಜಗ್ಲಿ, ಭೀಮಶಿ ಕುಮಾರ್, ಹಜರು ಕೋಲಾರ, ಸಂಗು ಜಾಲಾಪುರ ಸೇರಿದಂತೆ ತಳೆವಾಡ ಗ್ರಾಮದ ರೈತರು ಹಾಗೂ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.