ಚಡಚಣ : ಉತ್ತಮ ಫಸಲು ಬರುತ್ತದೆ,ಮಾಡಿದ ಸಾಲ ತೀರಿಸಬೇಕು ಎಂದು ಅಂದುಕೊಂಡರೆ, ಹಣೆಬರಹದ ಲೆಕ್ಕಾಚರೆವೇ ಬೇರೆಯಾಗಿದೆ,ಕೈ ಗೆ ಬಂದ ತುತ್ತ ಬಾಯಿಗೆ ಬರಲಿಲ್ಲ ಎಂಬ ರೈತ ಸಹೋದರ ಸಮಸ್ಯೆಗೆ ಸ್ಪಂದಿಸಲದ ಅಧಿಕಾರಿಗಳಿಗೆ ಇಲ್ಲಿದೆ ಒಂದು ನಿದರ್ಶನ.
ಚಡಚಣ ಸಮೀಪದ ಹಾವಿನಾಳ ಇಂಡಿಯನ್ ಸಕ್ಕರೆ ಕಾಖರ್ಾನೆ ಹಿಂಬದಿಯಲ್ಲಿರುವ ರೈತರಾದ ಮಹಾಂತೇಶ ಡೋಣಿ ಹಾಗೂ ಗುರುರಾಜ ಡೋಣಿ ಎಂಬ ಸಹೋದರರ 9 ಏಕರೆ ತೊಟದಲ್ಲಿ ಕಟಾವಿಗೆ ಬಂದ ದಾಳಿಂಬೆ ಕಾಖರ್ಾನೆ ಹೊರ ಸೋಸುವ ಧೂಳು ಹಾಗೂ ಹೊಗೆಯಿಂದ ಕಮರಿ ಹೋಗುತ್ತಿರುವದು ರೈತರಲ್ಲಿ ಆತಂಕ ಮೂಡಿಸಿದೆ.
ಇನ್ನೇನು ಒಂದು ತಿಂಗೋಳಗೆ ದಾಳಿಂಬೆ ಕಟಾವಿಗೆ ಬರುತ್ತದೆ,ಮಾಡಿದ ಸಾಲ ತೀರಿಸಬೇಕು ಎನ್ನುತ್ತಿರುವಾಗಲೇ,ಸತತ 20 ದಿನಗಳಿಂದ ಕಾಖರ್ಾನೆ ಡಿಸ್ಟಲರಿ ಘಟಕದಿಂದ ಹೊರ ಸೂಸುತ್ತಿರುವ ಧೂಳು ಹಾಗೂ ದಟ್ಟವಾದ ಹೊಗೆಯಿಂದ ದಾಳಿಂಬೆ ಗಿಡದ ಎಲೆಗಳು ಉದುರಿ ಬಿಳುತ್ತಿವೆ.ಇದರಿಂದ ಕಟಾವಿಗೆ ಬಂದ ಕಾಯಿಗಳು ಒಣಗಲಾರಂಭಿಸಿವೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ರೈತ ಗುರುರಾಜ ಡೋಣಿ,ಸುಮಾರು 40 ಲಕ್ಷ ರೂಪಾಯಿ ಸಾಲ ಮಾಡಿ,ಭೀಮಾ ನದಿಯಿಂದ ಪೈಪಲೈನ ಮೂಲಕ ನೀರು ತಂದಿದ್ದೇನೆ,ಸಸಿ ನೆಟ್ಟು,ಮಗುವಿನಂತೆ ಜೋಪಾನ ಮಾಡಿ ಬೆಳೆದ ದಾಳಿಂಬೆ ಕಾಖರ್ಾನೆ ಹೊರ ಸೂಸುವ ಧೂಳು ಹಾಗೂ ಹೊಗೆಯಿಂದ ಕಮರಿಗೋಗುತ್ತಿದೆ.ಇದರಿಂದ 15 ಲಕ್ಷ ರೂಪಾಯಿ ನಷ್ಟ ಉಂಟಾಗಲಿದೆ.ಈ ಬಗ್ಗೆ ಕಾಖರ್ಾನೆ ಆಡಳಿತ ಮಂಡಳಿಯವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.ತೋಟಗಾರ ಇಲಾಖೆ, ತಹಶಿಲ್ದಾರ ಹಾಗೂ ಕಂದಾಯ ಉಪ ವಿಭಾಗಾಧಿಕಾರಿಗಳಿಗೂ ಮನವಿ ಪತ್ರ ನೀಡಿದರೂ ಪ್ರಯೋಜನಾವಿಲ್ಲ.ಕೂಡಲೇ ಈ ಬ್ಗಗೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ,ಇಂಡಿಯನ್ ಸಕ್ಕರೆ ಕಾಖರ್ಾನೆ ಯ ಕಚೇರಿ ಎದಿರು ನೇಣು ಹಾಕಿಕೊಳ್ಳುವದಾಗಿ ಎಚ್ಚರಿಕೆ ನೀಡಿದ್ದಾರೆ.
ಮಾಜಿ ಶಾಸಕರ ಭೇಟಿ:ದಾಳಿಂಬೆ ತೋಟಕ್ಕೆ ಭಾನುವಾರ ಭೇಟಿ ನೀಡಿದ ಮಾಜಿ ಶಾಸಕ ವಿಠ್ಠಲ ಕಟಕಧೊಂಡ, ಗ್ರಾಮ ಪಂಚಾಯ್ತಿ ಮಾಜಿ
ಅಧ್ಯಕ್ಷ ರಮೇಶ ಬಿರಾದಾರ, ಕಾಖರ್ಾನೆ ಹೊರ ಸೂಸುವ ದೂಳಿನಿಂದ ದೋಣಿ ಸಹೋದದರ ದಾಳಿಂಬೆ ಸಂಪೂರ್ಣ ಹಾಳಾಗಿದ್ದು,ಕೂಡಲೇ ಸಕರ್ಾರ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.