ಧರೆಗುರುಳಿತ್ತಿರುವ ವಿದ್ಯುತ್ ಕಂಬಗಳನ್ನು ಸರಿಪಡಿಸಲು ರೈತರಿಂದ ಆಗ್ರಹ
Farmers demand repair of downed electric poles
ಬ್ಯಾಡಗಿ 13: ತಾಲೂಕಿನ ಅನೇಕ ಕಡೆಗಳಲ್ಲಿ ವಿದ್ಯುತ್ ತಂತಿಗಳು ಹಾಗೂ ವಿದ್ಯುತ್ ಕಂಬಗಳು ಧರೆಯತ್ತ ಮುಖ ಮಾಡಿ ಜೋತಾಡುತ್ತಲಿವೆ ಅವುಗಳನ್ನು ಹೆಸ್ಕಾಂ ಇಲಾಖೆ ಭದ್ರ ಪಡಿಸಿ ಮುಂದೆ ಸಂಭವಿಸುವ ಅನಾಹುತಗಳನ್ನು ತಡೆಯುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕಾರ್ಯಕರ್ತರು ತಾಲೂಕಾ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರಿಗೆ ಗುರುವಾರಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಸಂಘದ ಧುರೀಣ ಕೆ.ವಿ.ದೊಡ್ಡಗೌಡ್ರ ಮಾತನಾಡಿ ಪ್ರಸಕ್ತ ಸಾಲಿನಲ್ಲಿ ತಾಲೂಕಿನಾದ್ಯಂತ ಹೆಚ್ಚಿನ ಮಳೆ ಬಿದ್ದ ಪರಿಣಾಮವಾಗಿ ವಿವಿಧೆಡೆ ವಿದ್ಯುತ್ ಕಂಬಗಳು ಸಡಿಲಗೊಂಡಿವೆ. ಇದರ ಪರಿಣಾಮವಾಗಿ ವಿದ್ಯುತ್ ಹರಿಯು ತಂತಿಗಳು ಜೋಲಾಡುತ್ತಲಿವೆ. ಕೆಲ ವಿದ್ಯುತ್ ಕಂಬಗಳು ಬಾಗೀಬೀಳುವ ಹಂತ ತಲುಪಿವೆ. ರೈತರು ಹೊಲ ಗದ್ದೆಗಳಲ್ಲಿ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ತೋಟ ಪಟ್ಟಿಗಳಲ್ಲಿ ರಾತ್ರಿ ಸಮಯದಲ್ಲಿ ಜಮೀನುಗಳಲ್ಲಿರುವ ಫಸಲುಗಳಿಗೆ ನೀರುಣಿಸಲು ಹೋಗಲು ರೈತರು ಹಾಗೂ ರೈತ ಕಾರ್ಮಿಕರು ಹಿಂಜರಿಕೆ ಪಡುತ್ತಿದ್ದಾರೆ. ಹೆಸ್ಕಾಂ ನಿರ್ಲಕ್ಷ್ಯದಿಂದ ಕೆಲವೊಮ್ಮೆ ರೈತರಿಗೆ ಇಲ್ಲವೇ ಸಾಮಾನ್ಯ ಜನರಿಗೆ ಅಪಾಯಗಳು ಸಂಭವಿಸಿಬಹುದು ಎಂದು ಆರೋಪಿಸಿದರು.
ಮಂಜು ತೋಟದ ಮಾತನಾಡಿ ತಾಲೂಕಿನ ಕೆಲವೊಂದು ವಿದ್ಯುತ್ ಪರಿವರ್ತಕಗಳಲ್ಲಿ ಹಾಕಲಾಗಿರುವ ಎಣ್ಣೆಯೂ ಸೋರುತ್ತಲಿವೆ. ಮುಂದೆ ಬೇಸಿಗೆ ಕಾಲ ಬರಲಿರುವುದರಿಂದ ವಿದ್ಯುತ್ ಪರಿವರ್ತಕಗಳಿಗೆ ಹಾನಿಯುಂಟಾಗುವ ಸಂಭವಗಳಿದ್ದು, ಹೆಸ್ಕಾಂ ಇಲಾಖೆಯ ನೌಕರರು ಮುನ್ನೆಚ್ಚರಿಕೆಯಾಗಿ ತಾಲೂಕಿನಲ್ಲಿರುವ ಎಲ್ಲಾ ವಿದ್ಯುತ್ ಪರಿವರ್ತಕಗಳನ್ನು ಪರೀಶಿಲಿಸಿ ದುರಸ್ಥಿಗೊಳಸುವಂತೆ ಒತ್ತಾಯಿಸಿದರು. ಕೆಲ ವಿದ್ಯುತ್ ಪರಿವರ್ತಕಗಳಿಗೆ ಹೆಚ್ಚಿನ ವಿದ್ಯುತ್ ಸಂಪರ್ಕಗಳನ್ನು ಜೋಡಿಸಲಾಗಿದೆ. ಇದರಿಂದಾಗಿ ಕೆಲವೊಂದು ರೈತರ ಪಂಪ್ ಶೆಟ್ಟಗಳಲ್ಲಿ ನೀರು ವೇಗವಾಗಿ ಬರುತ್ತಿಲ್ಲ, ನಿಯಮಾನುಸಾರ ಒಂದು ವಿದ್ಯುತ್ ಪರಿವರ್ತಕಕ್ಕೆ ಹೆಚ್ಚಿನ ಜೋಡಣೆ ಮಾಡದಂತೆ ಎಚ್ಚರಿಸಿದರು. ಆದ್ದರಿಂದ ನಮ್ಮ ಮನವಿಯನ್ನು ನಿರ್ಲಕ್ಷ್ಯ ಮಾಡದೇ ತಕ್ಶಣವೇ ದುರಸ್ಥಿ ಮಾಡುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 