ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ರೈತರ ಆಗ್ರಹ
Farmers demand completion of Boodihal-Pirapur lift irrigation project
ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ರೈತರ ಆಗ್ರಹ
ತಾಳಿಕೋಟಿ 14: ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆ ಕೊನೆಯ ಹಂತದ ಎಫ್‌ಐಸಿ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ರೈತ ಬಾಂಧವರು ನಡೆಸುತ್ತಿರುವ ನ್ಯಾಯಯುತವಾದ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದ್ದು ಬೇಡಿಕೆಈಡೇರಿಸಲುತಮ್ಮೊಂದಿಗೆಗಟ್ಟಿಯಾಗಿ ನಿಲ್ಲುವುದಾಗಿ ವಿಜಯಪುರ ಸಂಸದರಮೇಶ್‌ಜಿಗಜಿಣಗಿಅಭಯ ನೀಡಿದರು. ತಾಳಿಕೋಟಿತಾಲೂಕಿನಕೊಡಗಾನೂರಗ್ರಾಮದಕ್ರಾಸ್ ಹತ್ತಿರ ಕಳೆದ ಎರಡು ದಿನಗಳಿಂದ 38 ಗ್ರಾಮಗಳ ರೈತರು ನಡೆಸುತ್ತಿರುವಧರಣಿ ಸ್ಥಳಕ್ಕೆ ರವಿವಾರ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿ ಅವರು ಮಾತನಾಡಿದರು. ಈ ಹಿಂದೆರಾಜ್ಯದಲ್ಲಿ ನಮ್ಮ ಸರ್ಕಾರವಿದ್ದಾಗ ಈ ಕ್ಷೇತ್ರದ ಮಾಜಿ ಶಾಸಕರಾದ ಸೋಮನಗೌಡ ಪಾಟೀಲ ಅವರು ಪರಿಶ್ರಮ ಪಟ್ಟು ಸುಮಾರು 750 ಕೋಟಿ ಮೊತ್ತದ ಈ ಮಹತ್ವದಯೋಜನೆಯನ್ನು ಅನುಷ್ಠಾನಗೊಳಿಸಿದ್ದರು.ಯೋಜನೆಯಕೊನೆಯ ಹಂತದ ಶೇ.10ರಷ್ಟು ಕೆಲಸ ಮಾತ್ರ ಉಳಿದಿತ್ತು ಇದಕ್ಕೆ ಆಗ ಕೇವಲ 150 ಕೋಟಿ ಮೊತ್ತದಅಗತ್ಯವಿತ್ತು, ಆದರೆರಾಜ್ಯದಲ್ಲಿರುವ ಈ ಅನಿಷ್ಠ ಸರ್ಕಾರ ಬಂದ ನಂತರ ಈ ಸಣ್ಣ ಕೆಲಸವನ್ನು ಮಾಡಲುಇವರಿಗೆ ಸಾಧ್ಯವಾಗಲಿಲ್ಲ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿರುವಇವರಿಗೆರೈತರಕುರಿತುಚಿಂತಿತ್ತು ಕಾಳಜಿ ಇಲ್ಲಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದಅಭಿವೃದ್ಧಿಕುಂಠಿತ ವಾಗಿದ್ದು ಸರ್ಕಾರಿ ನೌಕರರಿಗೆ ಸಂಬಳವನ್ನು ಕೊಡದೆಅವರ ಗೋಳು ಹಾಕಿಕೊಳ್ಳುತ್ತಿದ್ದಾರೆ ಇದೊಂದು ಶಾಪಗ್ರಸ್ತ ಸರ್ಕಾರಇವರಿಗೆರೈತರ ಶಾಪವೂ ತಟ್ಟಲಿದೆಎಂದಅವರು ನಾನು ಸಹ ಮುಖ್ಯಮಂತ್ರಿಗಳ ಹಾಗೂ ನೀರಾವರಿ ಸಚಿವರಜೊತೆ ಮಾತನಾಡಿಅವರ ಮೇಲೆ ಒತ್ತಡತರಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆಎಂದರು. ಮಾಜಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಮಾತನಾಡಿ ನಾನು ಶಾಸಕ ನಾಗಿದ್ದಾಗ ಮುಖ್ಯಮಂತ್ರಿ ಬೊಮ್ಮಾಯಿಯವರಜೊತೆಕಾಡಿ-ಬೇಡಿ ಈ ಭಾಗದರೈತರ ಅನುಕೂಲಕ್ಕಾಗಿ ಈ ಯೋಜನೆಯನ್ನುತಂದಿದ್ದೆ ಕೊನೆ ಹಂತದ ಕೆಲಸ ಮಾತ್ರ ಉಳಿದಿತ್ತು ಈಗ ಅಧಿಕಾರಲ್ಲಿರುವವರುಯೋಜನೆ ಪೂರ್ಣಗೊಳಿಸುವ ಇಚ್ಛಾಶಕ್ತಿ ತೋರುತ್ತಿಲ್ಲಇದರಿಂದ ನಮ್ಮರೈತರು ಸಾಕಷ್ಟು ತೊಂದರೆಯನ್ನುಅನುಭವಿಸುವಂತಾಗಿದೆ ನಾನು ನಮ್ಮ ಸಂಸದರಲ್ಲಿ ವಿನಂತಿಯನ್ನು ಮಾಡಿಕೊಳ್ಳುತ್ತೇನೆ ಅವರು ನಮ್ಮರೈತರಿಗೆ ನ್ಯಾಯಕೊಡಿಸಲು ಸರ್ಕಾರದಜವಾಬ್ದಾರರೊಂದಿಗೆ ಮಾತನಾಡಬೇಕು ನಾವೆಲ್ಲರೂ ನಿಮ್ಮಜೊತೆಯಲ್ಲಿದ್ದೇವೆ ಹೋರಾಟತಾರ್ಕಿಕಅಂತ್ಯಕಾಣುವವರೆಗೂ ಮುಂದುವರಿಸಿ ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯಅರುಣ ಶಹಪೂರ, ಜಿಲ್ಲಾ ಬಿಜೆಪಿ ಮಾಜಿಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಸಂಗನಗೌಡ ಹೆಗರಡ್ಡಿ, ಬಿಜೆಪಿ ರೈತ ಮೋರ್ಚಾಜಿಲ್ಲಾಧ್ಯಕ್ಷ ಸಿದ್ದು ಬುಳ್ಳಾ ಮಾತನಾಡಿ ಹೋರಾಟಕ್ಕೆತಮ್ಮ ಸಂಪೂರ್ಣ ಬೆಂಬಲ ಇರುವುದಾಗಿ ತಿಳಿಸಿದರು. ವೇದಿಕೆಯಲ್ಲಿಅಖಂಡಕರ್ನಾಟಕರೈತ ಸಂಘದರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದಕುಲಕರ್ಣಿ, ಬಿಜೆಪಿ ಜಿಲ್ಲಾಉಪಾಧ್ಯಕ್ಷ ಪ್ರಭುಗೌಡ ಬಿರಾದಾರ ಅಸ್ಕಿ, ಸಾಹೇಬಗೌಡರಾರಡ್ಡಿ, ಗುರುನಾಥಗೌಡಗುರಡ್ಡಿ ಸುರೇಶಕುಮಾರ ಇಂಗಳಗೇರಿ, ಗುರುರಾಜ ಪಡಶೆಟ್ಟಿಡಾ.ಪ್ರಭುಗೌಡ ಬಿರಾದಾರ, ಎಚ್.ಎನ್.ಬಿರಾದಾರ, ಮಲ್ಲನಗೌಡ ಬಿರಾದಾರ,ಆನಂದಗೌಡ ಪಾಟೀಲ, ಶಿವರೆಡ್ಡಿ ಐನಪೂರ ಹಾಗೂ ರೈತ ಸಂಘಟನೆಗಳ ಪದಾಧಿಕಾರಿಗಳು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 