ಕಾಲುವೆಗಳಿಗೆ ನೀರು ಬಿಡಲು ಒತ್ತಾಯಿಸಿ ರೈತರಿಂದ ಪ್ರತಿಭಟನೆಗೆ ನಿರ್ಧಾರ

ಕಾಲುವೆಗಳಿಗೆ ನೀರು ಬಿಡಲು ಒತ್ತಾಯಿಸಿ ರೈತರಿಂದ ಪ್ರತಿಭಟನೆಗೆ ನಿರ್ಧಾರ Farmers decide to protest, demanding the release of water into canals

ಕೊಪ್ಪಳ  20: ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಪೂರೈಸದಿರುವ ವಿಚಾರ ಖಂಡಿಸಿ ರೈತರು ಉಗ್ರ ಪ್ರತಿಭಟನೆ ನಡೆಸುವ ನಿರ್ಧಾರಕ್ಕೆ ಬಂದಿದ್ದಾರೆ.ಹೌದು, ತುಂಗಭದ್ರಾ ಜಲಾಶಯಕ್ಕೆ ಸುಮಾರು 1,137 ಕ್ಯೂಸೆಕ್ ಒಳಹರಿವು ಇದ್ದರೆ, 3,493 ಕ್ಯೂಸೆಕ್ ನೀರನ್ನು ಬಲದಂಡೆ ಕಾಲುವೆ ಹಾಗೂ ನದಿಯ ಮೂಲಕ ಹೊರರಾಜ್ಯಕ್ಕೆ ಹರಿಸಲಾಗುತ್ತಿದೆ.ಜಲಾಶಯದಲ್ಲಿ ಸದ್ಯ ಸುಮಾರು 26 ಟಿಎಂಸಿ ನೀರು ಸಂಗ್ರಹವಾಗಿದೆ. ಆದ್ದರಿಂದ ವಿಜಯನಗರ ಕಾಲುವೆಗಳಿಗೆ ತಕ್ಷಣವೇ ನೀರು ಬಿಡುಗಡೆ ಮಾಡಬೇಕು. ಇಲ್ಲದಿದ್ದರೇ ಉಗ್ರ ಹೋರಾಟ ಮಾಡಲಾಗುವುದು ಎಂದು ರೈತರು ತಿಳಿಸಿದ್ದಾರೆ.

ಈಗಾಗಲೇ ನಮ್ಮ ಭಾಗದ ರೈತರು ಈಗಾಗಲೇ ಹತ್ತಾರು ಸಭೆಗಳನ್ನು ನಡೆಸಿ, ವಿಜಯನಗರ ಎಡದಂಡೆ ಕಾಲುವೆ ಹಾಗೂ ಹಿರೇಹಳ್ಳ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ನೀರು ಹರಿಸುವಂತೆ ತುಂಗಭದ್ರಾ ಮಂಡಳಿಗೆ ಮನವಿ ಸಲ್ಲಿಸಿದ್ದಾರೆ.ಆದರೆ, ಸರಕಾರದ ನೀರಾವರಿ ಇಲಾಖೆ ಅಧಿಕಾರಿಗಳು, “ಅಣೆಕಟ್ಟಿನ ನೀರನ್ನು ನಂಬಿ ಬೆಳೆ ಬೆಳೆಯಬೇಡಿ ಎಂದು ಮುಖ್ಯಮಂತ್ರಿಗಳು ಆದೇಶ ಹೊರಡಿಸಿದ್ದಾರೆ.

ಆ ಆದೇಶದಂತೆ ಕಾಲುವೆಗಳಿಗೆ ನೀರು ಬಿಡಲು ಸಾಧ್ಯವಿಲ್ಲ” ಎಂದು ಕಡ್ಡಿಮುರಿದಂತೆ ಉತ್ತರಿಸಿದ್ದಾರೆ.ರೈತರೊಂದಿಗೆ ಕನಿಷ್ಠ ಸೌಜನ್ಯದಿಂದಲೂ ಉತ್ತರಿಸದೆ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸಿರುವುದು ಖಂಡನೀಯ. ಮುಖ್ಯಮಂತ್ರಿಗಳು ಕೂಡ “ಹೊರರಾಜ್ಯಗಳ ಒತ್ತಡವಿರುವುದರಿಂದ ರೈತರಿಗೆ ನೀರು ಕೊಡಲು ಸಾಧ್ಯವಿಲ್ಲ” ಎಂದು ಮಾಧ್ಯಮಗಳ ಮೂಲಕ ಹೇಳಿರುವುದು ಸರಿಯಲ್ಲ. ಕರ್ನಾಟಕದ ರೈತರ ಹಕ್ಕಿನ ನೀರನ್ನು ಹೊರರಾಜ್ಯಕ್ಕೆ ಹರಿಸಿ, ನಮ್ಮ ರೈತರಿಗೆ ಮಾತ್ರ ನೀರು ನಿರಾಕರಿಸುವುದು ಯಾವ ನ್ಯಾಯ? ಈ ಸರ್ಕಾರ ರೈತ ವಿರೋಧಿ ಎಂಬುದು ಮೊನ್ನೆ ಬಿಡದಿಯಲ್ಲಿ ರೈತರ ಮೇಲಾದ ದೌರ್ಜನ್ಯದಿಂದ ತಿಳಿದಿದೆ.

ಸುಮಾರು 600 ವರ್ಷಗಳ ಇತಿಹಾಸ ಹೊಂದಿರುವ ವಿಜಯನಗರ ಕಾಲುವೆಯನ್ನೇ ಈ ಭಾಗದ ಸಾವಿರಾರು ರೈತರು ಹಾಗೂ ಜನರು ಅವಲಂಬಿಸಿದ್ದಾರೆ. ಬಚಾವತ್ ತೀರ​‍್ಿನ ಅನ್ವಯ ವಿಜಯನಗರ ಕಾಲುವೆ ಮತ್ತು ರಾಯ ಬಸವ ಕಾಲುವೆಗಳಿಗೆ ವರ್ಷದ 11 ತಿಂಗಳು ನೀರು ಹರಿಸಲು ಅವಕಾಶವಿದೆ.ಕೃಷ್ಣಾ ಜಲವಿವಾದ ನ್ಯಾಯಮಂಡಳಿಯ ದಾಖಲೆಯಲ್ಲಿ ವಿಜಯನಗರ ಕಾಲುವೆಗಳ ಐತಿಹಾಸಿಕ ನೀರಿನ ಬಳಕೆಯನ್ನು ಅಧಿಕೃತವಾಗಿ ಗುರುತಿಸಲಾಗಿದೆ.