ಸಂಭ್ರಮದಿಂದ ಸೀಗೆ ಹುಣ್ಣಿಮೆ ಹಬ್ಬ ಆಚರಿಸಿದ ರೈತರು
Farmers celebrate the full moon festival of the Seege River with joy
ಸಂಭ್ರಮದಿಂದ ಸೀಗೆ ಹುಣ್ಣಿಮೆ ಹಬ್ಬ ಆಚರಿಸಿದ ರೈತರು
ರಾಣೆಬೆನ್ನೂರು 07: ಹೊರವಲಯದ ಜಮೀನುಗಳು ಸೇರಿದಂತೆ, ತಾಲೂಕಿನಾದ್ಯಂತ ರೈತರು ಸೀಗೆ ಹುಣ್ಣಿಮೆ ಹಬ್ಬವನ್ನು ಅತ್ಯಂತ ಸಡಗರ ಮತ್ತು ಸಂಭ್ರಮದೊಂದಿಗೆ ಬಂಧು-ಬಳಗದೆಲ್ಲ ಸೇರಿ, ಸಂಭ್ರಮದೊಂದಿಗೆ ಆಚರಿಸಿದರು.
ರೈತರು ಜಮೀನಿನಲ್ಲಿ ಬನ್ನಿ ಮಹಾಂಕಾಳಿಗೆ ಹಾಗೂ ಕೌರವರು, ಪಾಂಡವರ ಹೆಸರಿನಲ್ಲಿ ಕಲ್ಲಿನ ಮೂರ್ತಿಗಳಿಗೆ ಮತ್ತು ಭೂತಾಯಿಗೆ ಪೂಜೆ ಸಲ್ಲಿಸಿದರು. ಪ್ರತೀವರ್ಷವೂ ಚೆನ್ನಾಗಿ ಮಳೆ ಸುರಿದು ಬೆಳೆಗಳು ಸಮೃದ್ದಿಯಾಗಿ ಬರಲಿ ಮತ್ತು ಸಕಲ ಜೀವ ರಾಶಿಗಳು ನೆಮ್ಮದಿಯಾಗಿ ಬದುಕಲೆಂದು ಹಾರೈಸಿ ರೈತರು ಭೂತಾಯಿಗೆ ರೊಟ್ಟಿ, ಚಟ್ನಿ, ಪಲ್ಯ, ಹಪ್ಪಳ, ಸಂಡಿಗೆ, ಉಂಡಿಗಡಬು, ಕರಿಗಡಬು, ಶೇಂಗಾ ಹೋಳಿಗೆ, ಎಳ್ಳು ಹೋಳಿಗೆ ಚೆರಗ ಚೆಲ್ಲಿದರು.
ರೈತ ಬಾಂಧವರು ಐದು ಸುತ್ತು ಭೂತಾಯಿಗೆ ಪ್ರದಕ್ಷಿಣಿ ಹಾಕುವ ಮೂಲಕ ಹೂಲಿಗೊ..ಹೂ ಲಿಗೂ.. ವಿವಿಧ ಭಕ್ಷ ಬೋಜನೆಗಳಿಂದ ತಯಾರಿಸಿದ ಎಡೆಯನ್ನು ಚರಗದ ರೂಪದಲ್ಲಿ ಭಕ್ತಿ ಮತ್ತು ಭಾವದೊಂದಿಗೆ ಭೂತಾಯಿಗೆ ಸಮರ್ಿಸಿ ಧನ್ಯತೆ ಪಡೆದರು. ತದನಂತರ ರೈತ ಬಾಂಧವರು ಹಾಗೂ ಕುಟುಂಬ ಸದಸ್ಯರು ಎಲ್ಲರೂ ಒಂದು ಕಡೆಗೆ ಕುಳಿತು ಊಟವನ್ನು ಸವಿಯುವ ದೃಶ್ಯವು ಎಲ್ಲೆಡೆಯೂ ಕಂಡು ಬಂದಿತು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 