ಸಹಕಾರಿ ಸಂಘದಿಂದ ರೈತರಿಗೆ ಪ್ರಯೋಜನ: ಶಂಕ್ರಣ್ಣ
Farmers benefit from cooperative societies: Shankranna
ಬ್ಯಾಡಗಿ 23: ಸಹಕಾರಿ ಸಂಘದಿಂದ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಂಘದ ಸದಸ್ಯರು ಹಾಗೂ ರೈತರು ಮುಂದಾಗಬೇಕೆಂದು ಸಹಕಾರಿ ಸಂಘದ ಅಧ್ಯಕ್ಷ ಶಂಕ್ರಣ್ಣ ಅಕ್ಕಿ ಹೇಳಿದರು.ಸೋಮವಾರ ಅವರು ತಾಲೂಕಿನ ಖುರ್ಧಕೋಡಿಹಳ್ಳಿ ಗ್ರಾಮದಲ್ಲಿ ವಿವಿಧೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಜನ ಸಭೆಯನ್ನು ಇಂದು ಸಂಘದ ಕಛೇಯಲ್ಲಿ ಹಮ್ಮಿಕೊಳ್ಳಲಾಗಿತ್ತು.ಸಂಘದ ಅಧ್ಯಕ್ಷರಾದ ಶಂಕ್ರಣ್ಣ ಅಕ್ಕಿ ಮಾತನಾಡಿ ಸಂಘವು 2825 ಜನ ಸದಸ್ಯರನ್ನು ಒಳಗೊಂಡು, 86 ಲಕ್ಷ ರೂಗಳ ಷೇರು ಹೊಂದಿದೆ, ಸಂಘವು ವರ್ಷದಲ್ಲಿ 3 ಕೋಟಿ 90 ಲಕ್ಷ ರೂ ಗಳ ಕೆ.ಸಿ.ಸಿ. ಸಾಲ ವಿತರಿಸಿದೆ, 28 ಲಕ್ಷ ರೂ ಗಳ ಪಿಗ್ಮಿ ಸಂಗ್ರಹಣೆ ಮಾಡಿ, 1 ಕೋಟಿ. 60 ಲಕ್ಷ ರೂ.ಗಳ ಎನ್.ಎ.ಬಿ.ಡಿ.ಪಿ. ಸಾಲ ವಿತರಿಸಲಾಗಿದೆ.
ಒಟ್ಟಾರೆಯಾಗಿ 3 ಕೋಟಿ 90 ಲಕ್ಷ ರೂ ಗಳ ಸಾಲ ವಿತರಿಸಿದೆ. ಸಂಘದ ಷೇರುದಾರ ರೈತ ಸದಸ್ಯರ ಅನುಕೂಲಕ್ಕಾಗಿ ಸಾಕಷ್ಟು ಅನುಕೂಲ ಮಾಡಲಾಗಿದೆ. ರಾಜ್ಯ ಸರ್ಕಾರದ ಯಶಸ್ವಿನಿ ಯೋಜನೆಯಲ್ಲಿ 335 ಕುಟುಂಬಗಳು ಯಶಸ್ವಿನೆ ಫಲಾನುಭವಿಗಳಾಗಿ ಸರಕಾರದಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದರು.ಮುಖ್ಯ ಕಾರ್ಯನಿರ್ವಾಹಕರಾದ ಎನ್.ಎಲ್. ಕುರಗುಂದ ಅವರು ಸಂಘದ 2024-25ನೇ ಸಾಲಿನ ಲೆಕ್ಕ ಪರಿಶೋಧನೆ ಕೈಗೊಳ್ಳಲಾಗಿದ್ದ ವರದಿಯನ್ನು ಓದಿದರು.ಲೆಕ್ಕಪಾರಿಶೋಧನಾ ವರದಿ ಮಂಡಿಸಿದರು, ಸಂಘದ ಪ್ರಸಕ್ತ ವರ್ಷದ ಮುಂಗಡ ವಾರ್ಷಿಕ ಆಯ-ವ್ಯಯವನ್ನು ಮಂಡಿಸಿ ಅನುಮೋದನೆ ಪಡೆದುಕೊಳ್ಳಲಾಯಿತು.
ಈ ಸಂದರ್ಭದಲ್ಲಿ ತಾಲೂಕಾ ಕೆಸಿಸಿ ಬ್ಯಾಂಕ್ ಮ್ಯಾನೇಜರ್ ಬಿ.ಎಚ್.ಮೋಟೆಬೆನ್ನೂರ, ಸಹಕಾರಿ ಧುರೀಣ ಶಂಕ್ರಣ್ಣ ಮಾತನವರ,ಸಹಕಾರಿ ಸಂಘದ ಉಪಾಧ್ಯಕ್ಷ ತಿರಕಪ್ಪ ಬಿದರಕಟ್ಟಿ, ನಿರ್ದೇಶಕರಾದ ವೀರಣ್ಣ ಕುಲಕರ್ಣಿ, ಬಸವರಾಜ ಸಂಕಣ್ಣನವರ, ಬಡೇಸಾಬ ನಧಾಪ, ಸುರೇಶ ಪವಾರ, ದುರುಗಪ್ಪ ಮಾತನವರ, ಹೊನ್ನಪ್ಪ ಕರಡಿ, ಸ್ವಾರೆಪ್ಪ ಮರಿಯಮ್ಮನವರ, ರೇಖಾ ಮಾತನವರ, ನೀಲವ್ವ ಪಾಟೀಲ, ಲೆಕ್ಕಿಗ ಅಶೋಕ ನೂರಂದನವರ ಸೇರಿದಂತೆ ಇತರರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 