ಮುಂಗಾರು ಮಳೆ ವಿಫಲವಾದ ಕಾರಣ ಕಂಗಾಲಾದ ರೈತರು

ಮುಂಗಾರು ಮಳೆ ವಿಫಲವಾದ ಕಾರಣ ಕಂಗಾಲಾದ ರೈತರು  Farmers are worried due to the failure of monsoon rains

ಲೋಕದರ್ಶನ ವರದಿ 

ಯಮಕನಮರಡಿ 26 : ಮುಂಗಾರು ಮಳೆ  ವಿಫಲವಾದ ಕಾರಣ ಸ್ಥಳೀಯ ಹೋಬಳಿ ಮಟ್ಟದಲ್ಲಿ ರೈತರು ಬಾರಿ ಕಂಗಾಲಾಗಿದ್ದಾರೆ ಸುಮಾರು ರೈತರು ಬೆತ್ತಲೆ ಮಾಡಿ ಮಳೆರಾಯನ ದಾರಿ ನೋಡುತ್ತಿದ್ದಾರೆ ಆದರೆ ಹವಾಮಾನ ಇಲಾಖೆ ಸೂಚನೆಯಂತೆ ಮುಂಗಾರು ಮಳೆಯು ಬಾರದೆ ಇರುವುದರಿಂದ ಸುತ್ತಮುತ್ತಲಿನ ರೈತರಿಗೆ ಭಯಾನಕ ಪರಿಸ್ಥಿತಿ ಉಂಟಾದಂತಾಗಿದೆ. ಹಿಡಕಲ್ ಜಲಾಶಯದಿಂದ ಹುಕ್ಕೇರಿ ತಾಲೂಕಿನ 18 ಪಟ್ಟಣ ಮತ್ತುಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಇದ್ದು ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದಂತೆ ಮುಂದಿನ ದಿನಮಾನಗಳಲ್ಲಿ ನೀರಿಗಾಗಿ ಜನರು ಲೆದಾಡುವ ಪರಿಸ್ಥಿತಿ ಬರುವುದು ಖಚಿತವಾದ ಸಂಗತಿಯಾಗಿದೆ. ಈಗಾಗಲೇ ಬಿತ್ತನೆ ಮಾಡಿದ ರೈತರು ಮಳೆರಾಯನ ದಾರಿಯನ್ನು ಕಾಯುತ್ತಿದ್ದಾರೆ ಅಲ್ಲದೆ ಬಹುತೇಕ ಯಮಕನಮರಡಿ ಪಶ್ಚಿಮ ಭಾಗದಲ್ಲಿ ಯಾವುದೇ ತರದ ನೀರಿನ ಸಂಗ್ರಹಕ್ಕೆ ಯಾವುದೇ ತರದ ಕೆರೆಕಿಕಟ್ಟೆಗಳು ಇರುವುದಿಲ್ಲ ಹೀಗಾಗಿ ಪಶ್ಚಿಮ ಭಾಗದ ರೈತರು ಅಲ್ಲದೆ ಪೂರ್ವ ಭಾಗದ ರೈತರಿಗೂ ಸಹಿತ ಈ ವರ್ಷದ ಬರಗಾಲವು ಬೀಳಬಹುದೆಂದು ನಂಬಲಾಗಿದೆ ಹಿಡಕಲ್ ಜಲಾಶಯದಿಂದ ಕುಡಿಯುವ ನೀರಿನ ಸಮಸ್ಯೆಯೂ ಉಂಟಾಗಬಹುದು ಎಂದು ನಂಬಲಾಗಿದೆ. 

ಅಲ್ಲದೆ ಜಾಣವಾರುಗಳಿ ಗೆ ನೀರಿನ ಕೊರತೆಹೆಚ್ಚಾಗುತ್ತಿದ್ದಂತೆ ರೈತರ ಉಪಜೀವನಕ್ಕೆ ಬಹಳಷ್ಟು ತೊಂದರೆ ಆಗಬಹು ದೆಂದುನಂಬಲಾಗಿದೆ ರೈತರಿಗಾಗಿ ಸರ್ಕಾರವು ಪಶ್ಚಿಮ ಭಾಗದ ಗಡಿ ಭಾಗದಲ್ಲಿ ಯಾವುದೇ ತರದ ನೀರಾವರಿ ಯೋಜನೆ ಮಾಡಿರುವುದಿಲ್ಲ ಈಗಾಗಲೇ ನೀರಾವರಿ ಯೋಜನೆ ಮಾಡುವುದಕ್ಕಾಗಿ ಸರ್ಕಾರಕ್ಕೆ ರೈತ ಸಂಘದ ಸರ್ವ ಸದಸ್ಯರು ರಾಜಕೀಯ ಮುಖಂಡರು ಸತ್ಯಾಗ್ರ ಮಾಡಿ ಕೈ ತೊಳೆದುಕೊಂಡಿದ್ದಾರೆ ಆದರೆ ಇಲ್ಲಿಯವರೆಗೆ ಸರ್ಕಾರವು ಯಾವುದೇ ತರದ ಕ್ರಮ ಕೈಗೊಂಡಿರುವುದಿಲ್ಲ ಹಿಡಕಲ್ ಜಲಾಶಯ ಕೇವಲ ಎರಡು ತಿಂಗಳವರೆಗೆ ಬೇಕಾಗುವಷ್ಟು ನೀರಿನ ಸಂಗ್ರಹ ಇರುತ್ತದೆ ಮುಂದಿನ ದಿನಮಾನಗಳಲ್ಲಿ ಮಳೆಯ ಆದರೆ ಮಾತ್ರ ಎಲ್ಲರಿಗೂ ಕುಡಿಯುವ ನೀರಿನ ಅನುಕೂಲತೆ ಆಗಬಹುದು ಇಲ್ಲವಾದಲ್ಲಿ ಸರ್ಕಾರವು ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡಬೇಕಾಗುತ್ತದೆ.

ಕಾರಣ ರೈತರ ನೋವನ್ನು ಗಮನಿಸಿ ಸರ್ಕಾರವು ಜಾನುವಾರುಗಳಿಗೆ ನೀರಿನ ವ್ಯವಸ್ಥೆ ಮಾಡಬೇಕಾಗಿದೆ ಡಿಕೆ ಶಿವಕುಮಾ ರ ಅವರ ಹೊಸಸಸರ್ಕಾರ ಬರುತ್ತಿದ್ದಂತೆ ಜನರ ಭರವಸೆಗಳು ಕೇವಲ ಗಾಳಿ ಮಾತಾಗಿ ಉಳಿದಿವೆ ಜೊತೆಗೆ ವೃದ್ಧಾಪವೇತನ ಅಂಗವಿಕಲರ ವೇತನ ಕಲಾವಿದರವೇತನ ಸಂಪೂರ್ಣ ಸಹಿತವಾಗಿದ್ದು ಬಹಳಷ್ಟು ಕಲಾವಿದರು  ಅಂಗವಿಕಲರು ಮಾಸಾಸನದ ದಾರಿ ನೋಡುತ್ತಾ ಕುಳಿತಿದ್ದಾರೆ. ಕಾರಣ ಗ್ಯಾರಂಟಿ ಸರಕಾರವು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ರೈತರು ಕಲಾವಿದರು ಅಂಗವಿಕಲರು ತಮ್ಮ ನೋವನ್ನು ಹಂಚಿಕೊಳ್ಳುತ್ತಿದ್ದಾರೆ. ಮಾನ್ಯ ಡಿಕೆ ಸರ್ಕಾರವು ಜನರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ ಎಂದು ಜನರು ಮಾತನಾಡುತ್ತಿದ್ದಾರೆ. ಮಾಶಾಸನದ ಬಗ್ಗೆ ತಾಲೂಕ ದಂಡಾಧಿಕಾರಿಗಳು ಗ್ರಾಮ ಲೆಕ್ಕಾಧಿಕಾರಿಗಳು ಜನರಿಗೆ ಸಮರ​‍್ಕ ಮಾಹಿತಿ ನೀಡುತ್ತಿಲ್ಲವೆಂದು ಬಹಳಷ್ಟು ಜನ ಆರೋಪಿಸುತ್ತಿದ್ದಾರೆ. ಕಾರಣ ಕೂಡಲೇ ನಿರ್ಗತಿಕ ಜನರ ಮಾಸಾಶನವನ್ನು ಪ್ರಾರಂಭಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.