ಗ್ರಾಮ, ಗೋಮಾಳಕ್ಕೆ ದಾರಿ ಬಿಡಲು ಆಗ್ರಹಿಸಿ ರೈತರ ಮನವಿ

ಗ್ರಾಮ, ಗೋಮಾಳಕ್ಕೆ ದಾರಿ ಬಿಡಲು ಆಗ್ರಹಿಸಿ ರೈತರ ಮನವಿ  Farmers appeal to make way for village, cattle ranch

ಬೆಳಗಾವಿ 04: ತಾಲೂಕಿನ ಹಾಲಗಿಮರ್ಡಿ ಗ್ರಾಮದ ಮಲ್ಲಪ್ಪನ ಗುಡ್ಡದಲ್ಲಿ ನಿರ್ಮಿಸುತ್ತಿರುವ ವಿಶ್ವವಿದ್ಯಾಲಯದ ಪಕ್ಕಕ್ಕೆ ಉಳಿದಿರುವ ಜಮೀನಿನಲ್ಲಿ ಗ್ರಾಮಕ್ಕೆ ಹಾಗೂ ಗೋಮಾಳಕ್ಕೆ ದಾರಿ ಬಿಡಬೇಕೆಂದು ಆಗ್ರಹಿಸಿ ಹಾಲಗಿಮರ್ಡಿ ರೈತರು ರಾಣಿ ಚನ್ನಮ್ಮ ವಿಶ್ವಿದ್ಯಾಲಯದ ಕುಲಸಚಿವರಿಗೆ ಮನವಿ ಅರ​‍್ಿಸಿದರು. 

ಮನವಿಯಲ್ಲಿ ರಾಚವಿವಿಗೆ ಹಾಲಗಿಮರ್ಡಿ ಗ್ರಾಮದ ಗೋಮಾಳ ಜಾಗವನ್ನು ನೀಡಲಾಗಿದ್ದು, ಸರ್ವೆ ನಂ. 47,48,49 ತಮ್ಮ ವಿವಿಗೆ ಸಂಭಂದಿಸಿದ್ದು, ಉಳಿದ ಸರ್ವೇ ನಂ. 64, 65ಕ್ಕೆ ವಿವಿದವರು ಕಂಪೌಂಡನ್ನು ನಿರ್ಮಿಸಿ ದಾರಿಯನ್ನು ಬಂದ್ ಮಾಡಿದ್ದಾರೆ. ನಮ್ಮ ಪೂರ್ವಜರ ಕಾಲದಿಂದಲೂ 64, 65 ಸರ್ವೇ ನಂ.ಕ್ಕೆ ದ ಸರ್ವೇ ನಂ.47,48,49ರ ಮುಖಾಂತರ ದನಕರುಗಳನ್ನು ಮೇಯಿಸಲು, ಮೇವು ತರಲು ಹೋಗಲು ದಾರಿಯಿತ್ತು. ಈಗ ಕಂಪೌಂಡ ಗೋಡೆ ನಿರ್ಮಿಸುವಾಗ ಕಂಪೌಂಡ ಒಳಗಡೆ ದಾರಿ ಬಿಡುತ್ತಾರೆ ಎಂದುಕೊಂಡಿದ್ದರು. ಆದರೆ ಯಾವಾಗ ಗ್ರಾಮದ ಕಡೆ ಬಿಟ್ಟ ಗೇಟನ್ನು ಮುಚ್ಚಲು ಬಂದಾಗಲೇ ತಿಳಿದಿದ್ದು ಸವೇ ನಂ. 64, 65ಕ್ಕೆ ಹೋಗುವ ದಾರಿಯನ್ನು ಬಂದ ಮಾಡುತ್ತಿದ್ದಾರೆ ಎಂದು. ಆಗ ರೈತರೆಲ್ಲ ಹೋಗಿ ಗೋಡೆ ನಿರ್ಮಾಣ ಕಾಮಗಾರಿಯನ್ನು ತಡೆದಿದ್ದಾರೆ. ಆದ್ದರಿಂದ ಕಂಪೌಂಡನ್ನು ತೆರವುಗೊಳಿಸಿ ಗ್ರಾಮದ ರೈತರಿಗೆ ಅತ್ಯವಶ್ಯವಾಗಿರುವ ದಾರಿ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ. 

ಅಲ್ಲದೆ ವಿತಯವರು ಅಲ್ಲಲ್ಲಿ ಪೈಪುಗಳನ್ನು ಅಳವಡಿಸಿ ರೈತರ ಹೊಲಗಳಿಗೆ ನೀರು ಹರಿಬಿಟ್ಟಿದ್ದಾರೆ. ಇದರಿಂದ ಬೆಳೆಗಳಿಗೆ ಹಾನಿಯಾಗುತ್ತಿದೆಯಲ್ಲದೆ ದನಕರುಗಳ ಮೇವು ಸಹಿತ ಹಾನಿಯಾಗುತ್ತಿದೆ. ಆದ್ದರಿಂದ ನೀರು ಹೊಗಳಿಗೆ ಹೋಗದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. 

ಶೀಘ್ರ ಈ ಕುರಿತು ಗಮನ ಹರಿಸಿ ರೈತರ ಈ ಸಮಸ್ಯಗಳನ್ನು ಪರಿಹರಿಸದಿದ್ದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. 

ಮನವಿ ಅರ್ಪಿಸುವಾಗ ಗ್ರಾ. ಪಂ ಸದಸ್ಯರಾದ ನಾಗಪ್ಪ ವಾಯ್‌., ಭರತ ತಳವಾರ, ಶಿವಬಸಪ್ಪಾ ಕೊಪ್ಪರಗಿ, ಬಸವಣ್ಣೆಪ್ಪ ಯರಗೊಪ್ಪ, ನಾಗರಾಜ ತಳವಾರ, ಬಸವಣ್ಣೆಪ್ಪ ಕಂಠಿ, ರುದ್ರ​‍್ಪ ದೇಮಿನಕೊಪ್ಪ, ಮಹಾಂತೇಶ ಪೂಜೇರಿ, ಮಂಜುನಾಥ ಕೊಪ್ಪರಗಿ, ಸುರೇಶ ಅಲಗೋಡಿ ಸೇರಿದಂತೆ ಅನೇಕರು ಇದ್ದರು.