ವಿದ್ಯುತ್ ಖಾಸಗೀಕರಣ ವಿರುದ್ಧ ರೈತ ಸಂಘ ಪ್ರತಿಭಟನೆ

ವಿದ್ಯುತ್ ಖಾಸಗೀಕರಣ ವಿರುದ್ಧ  ರೈತ ಸಂಘ ಪ್ರತಿಭಟನೆ  Farmers' association protests against electricity privatization

ಲೋಕದರ್ಶನ ವರದಿ  

ಹೂವಿನಹಡಗಲಿ  22:  ಸರ್ಕಾರವು ವಿದ್ಯುತ್ ಸರಬರಾಜು ಖಾಸಗೀಕರಣ ಕೈ -ಬಿಡಬೇಕು ಹಾಗೂ ಏಳು ತಾಸು ವಿದ್ಯುತ್ ಬದಲು ಐಪಿ ಪಂಪ್ ಸೆಟ್ ಗಳಿಗೆ  24 ತಾಸು ವಿದ್ಯುತ್ ಒದಗಿಸಬೇಕು ಎಂದು ಆಗ್ರಹಿಸಿ ಇಲ್ಲಿನ  ರೈತ ಸಂಘ ಮತ್ತು ಕಾರ್ಮಿಕರ ಸಂಘಟನೆ  ಯಿಂದ ಸೋಮವಾರ ಪಟ್ಟಣದ ಶಾಸ್ತ್ರೀಯ ವೃತದಲ್ಲಿ  ಪ್ರತಿಭಟನೆ ಮಾಡಿದರು. ಇದೇ ವೇಳೆ ರಾಜ್ಯ ರೈತ ಸಂಘದ ಸಂಘಟನೆ ಕಾರ್ಯದರ್ಶಿ  ಬಿ.ಗೋಣಿಬಸಪ್ಪ, ತಾಲೂಕು ಅದ್ಯಕ್ಷ ಸಿದ್ದಪ್ಪ ಹೊಸಮನಿ,ತಾಲೂಕು ಉಪಾಧ್ಯಕ್ಷವಿ.ಬಿ.ಚನ್ನಬಸಪ್ಪ , ಕೆಆರ್ ಪಕ್ಷದ ಚಂದ್ರಶೇಖರ ಮಾತನಾಡಿ  ಸರ್ಕಾರವು ವಿದ್ಯುತ್ ಸರಬರಾಜು ಖಾಸಗೀಕರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಇಂದಿನ ಹವಾಮಾನ ವೈಪರಿತ್ಯ ಯಿಂದ ಮಳೆ ಕೊರತೆ ಮತ್ತುಬಿತ್ತನೆ ಬೀಜ,ಗೊಬ್ಬರ ಬೆಲೆ ಏರಿಕೆಯಿಂದ ಕೃಷಿ ಕ್ಷೇತ್ರ ಸಂಪೂರ್ಣ ನೆಲಕಚ್ಚಿದೆ.

ಇಂತಹ ಪರಿಸ್ಥಿತಿ ಯಲ್ಲಿ ವಿದ್ಯುತ್ ಸರಬರಾಜು ಖಾಸಗೀಕರಣ ಮಾಡಲು ಮುಂದಾಗಿದೆ ಕೂಡಲೇ ಖಾಸಗಿ ಕಂಪನಿಗೆ ವಿದ್ಯುತ್ ಸರಬರಾಜಿನ ಪರವಾನಗಿ ಕೊಡಬಾರದು ಎಂದು ಆಗ್ರಹಿಸಿದರು.ತಡವಾಗಿ ಆಗಮಿಸಿದ ತಹಶಿಲ್ದಾರರ ರಸ್ತೆ ತಡೆ : ರೈತ ಸಂಘದ ಬೇಡಿಕೆಯಮನವಿಯನ್ನು ಸ್ವೀಕರಿಸಲು ತಡವಾಗಿ ಬಂದ ತಹಶಿಲ್ದಾರರ ಕೆ.ಎಂ.ಗುರುಬಸವರಾಜ ವಿರುದ್ಧ ಧಿಕ್ಕಾರ ಕೂಗಿದರು.  ಕೆಲ ಸಮಯ ರಸ್ತೆ ತಡೆ ನಡೆಸಿದರು. ಪ್ರತಿಭಟನೆಯಲ್ಲಿ ತಾಲೂಕು ಗೌರವ ಅಧ್ಯಕ್ಷ ಪಕ್ಕೀರ​‍್ಪ.ಉಪಾಧ್ಯಕ್ಷರು ವಿಠ್ಠಲ್ ನಾಯ್ಕ್‌.  ಹಗರಿಬೊಮ್ಮನಹಳ್ಳಿ ತಾಲೂಕು ಅಧ್ಯಕ್ಷರು ಬಿ ಬಸವನಗೌಡ ಮತ್ತು ಮಹಿಳಾ ಜಿಲ್ಲಾ ಅಧ್ಯಕ್ಷರು ಅಧ್ಯಕ್ಷರು ವಿಜಯಲಕ್ಷ್ಮಿ.

ಜಿಲ್ಲಾ ಉಪಾಧ್ಯಕ್ಷರು ಗನಿ ಸಾಬ್‌. ಮುಜ್ಜುರಾಹಿಮಾನ. ಪ್ರಧಾನ ಕಾರ್ಯದರ್ಶಿ ಶಿವರಾಜ ಎಂ ಹೊಳಗುಂದಿ. ಸಂಘಟನಾ ಕಾರ್ಯದರ್ಶಿ ಗೀರೀಶ್ ಕೆ ಕೆ ತಾಂಡ. ಜಿಲ್ಲಾ ಉಪಾಧ್ಯಕ್ಸರು ಕೆ ಮಂಜುನಾಥ್ ಪುರ . ಜಿಲ್ಲಾ ಕಾರ್ಯದರ್ಶಿ ದುರುಗಪ್ಪ.ವೇಕಟೇಶ್ ನಾಯಕ.ಗ್ರಾಮ ಘಟಕದ ಅಧ್ಯಕ್ಷರು ಚಂದ್ರಶೇಖರ್ ನಾಯಕ ಞಞ ತಾಂಡ. ದರ್ಗಾ ನಾಯಕ್  ಚಂದ್ರನಾಯಕ. ಉಪಾಧ್ಯಕ್ಷರು ಕುಬ್ಯ್‌ ನಾಯಕ ಬೋಜ್ಯ ನಾಯಕ. ಯಂಕಾನಾಯ್ಕ್‌. ಗಿರಿಯಪ್ಪ. ಬಸವರಾಜ. ಏಢಿ ಪಕ್ಷದ ರಾಜ್ಯ ರೈತ ಕಾರ್ಯದರ್ಶಿ ಚಂದ್ರಶೇಖರ್ ದೊಡ್ಡಮನಿ ಮತ್ತು ಸುಭಾನ್ ಸಾಬ್ ಮತ್ತು ಇನ್ನೂ ಮುಂದಾದ ಕಮಲ ಇದ್ದರು.