"ಮಳೆ ವಿರಾಮದಿಂದ ರೈತರ ಚಿಂತೆ ಹೆಚ್ಚಳ"

"ಮಳೆ ವಿರಾಮದಿಂದ ರೈತರ ಚಿಂತೆ ಹೆಚ್ಚಳ"  Farmers' anxiety rises due to a break in the rains

ದಾಂಡೇಲಿ 15:  ಜೋಯಿಡಾ, ಹಳಿಯಾಳ ತಾಲೂಕುಗಳಲ್ಲಿ ಮೋಡ ಕಣ್ಮರೆಯಾಗಿದೆ. ಬೆಳೆಗಳ ಭವಿಷ್ಯದ ಬಗ್ಗೆ ರೈತರು ಆತಂಕಗೊಂಡಿದ್ದಾರೆ. ಮಳೆ ಇಲ್ಲ, ಮಳೆ ಇಲ್ಲ ಎಂದು ಆಕಾಶದತ್ತ ಕಣ್ಣಿಿಟ್ಟು ಕಾದು ಕುಳಿತಿದ್ದ ಈ ತಾಲೂಕುಗಳ ರೈತರಿಗೆ ಕಳೆದ ಮೂರಾ​‍್ನಲ್ಕು ದಿನ ಸುರಿದ ಮಳೆ ಹೊಸ ಭರವಸೆ ಮೂಡಿಸಿತ್ತು. ಮಳೆಯಾದ ಬೆನ್ನಲ್ಲೇ ರೈತರು ಉಳುಮೆ, ಬಿತ್ತನೆ ಸೇರಿದಂತೆ ಕೃಷಿ ಚಟುವಟಿಕೆಗಳನ್ನು ಆರಂಭಿಸಿ ಸಂಭ್ರಮ ವ್ಯಕ್ತ ಪಡಿಸಿದ್ದರು. ಆದರೆ ರೈತರ ಸಂತಸ ಹೆಚ್ಚು ದಿನ ಉಳಿಯಲಿಲ್ಲ. 

ಕಳೆದ ಕೆಲವು ದಿನಗಳಿಂದ ಮಳೆ ಸಂಪೂರ್ಣವಾಗಿ ನಿಂತಿದ್ದು, ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಸಮಯದಲ್ಲಿ ಧಾರಾಕಾರ ಮಳೆಯಾಗಬೇಕಿದ್ದರೂ ಮೋಡಗಳು ಕಣ್ಮರೆಯಾಗಿದ್ದು ಬಿಸಿಲು ರಾರಾಜಿಸುತ್ತಿದೆ. ಇದರಿಂದ ಕೃಷಿ ಚಟುವಟಿಕೆಗಳು ಮತ್ತೆ ಸ್ಥಗಿತಗೊಳ್ಳುವ ಆತಂಖ ಎದುರಾಗಿದೆ. ಮಳೆಯ ಆಶ್ರಯದಲ್ಲಿಯೇ ಕೃಷಿ ನಡೆಸುವ ತಾಲೂಕಿನ ರೈತರು ಬಿತ್ತನೆ ಮಾಡಿದ ಬೆಳೆಗಳು ಮೊಳಕೆಯೊಡೆದ ಬಳಿಕ ನಿರಂತರ ಮಳೆ ನೀರೀಕ್ಷೆಯಲ್ಲಿದ್ದಾರೆ. ಆದರೆ ಮಳೆ ಕೈಕೊಟ್ಟಿರುವದರಿಂದ ಮೊಳಕೆ ಒಣಗುವ ಭೀತಿ ಕಾಡುತ್ತಿದೆ. ಮತ್ತೊಂದೆಡೆ ಬಿತ್ತನೆ ಮಾಡದ ರೈತರು ಮಳೆಯ ನೀರೀಕ್ಷೆಯಲ್ಲೇ ಕಾಯುವಂತಾಗಿದೆ. 

ರೈತರು ಅಳಲು  : ಮೂರಾ​‍್ನಲ್ಕು ದಿನ ಚೆನ್ನಾಗಿ ಮಳೆಯಾದ ಕಾರಣ ಬಿತ್ತನೆ ಮಾಡಿದ್ದೆವೆ. ಈಗ ಮತ್ತೆ ಬಿಸಿಲು ಹೆಚ್ಚಾಗಿದ್ದು ಬೆಳೆ ಉಳಿಯುತ್ತದೆಯೋ ಇಲ್ಲವೋ ಎಂಬ ಆತಂಕ ಎದುರಾಗಿದೆ. ಇನ್ನೆರಡು ದಿನಗಳಲಿ ಮಳೆ ಬರದಿದ್ದರೆ, ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಹವಾಮಾನ ಎರುಪೇರಿನಿಂದ ಕೃಷಿ ಸಂಪೂರ್ಣ ಅನಿಶ್ಚಿತತೆ ಎತ್ತ ಸಾಗಿದ್ದು ಸಕಾಲದಲ್ಲಿ ಉತ್ತಮ ಮಳೆಯಾದರೆ ಮಾತ್ರ ಬೆಳೆಗಳು ಉಳಿದು ರೈತರಿಗೆ ನೆಮ್ಮದಿ ಸಿಗಲಿದೆ ಎಂಬುದು ರೈತರ ಆಶಯವಾಗಿದೆ. ಈಗ ಮತ್ತೆ ರೈತರು ಆಕಾಶದತ್ತ ಮುಖ ಮಾಡಿ ಮಳೆಯ ನೀರೀಕ್ಷೆಯಲ್ಲಿ ದಿನಕಳೆಯುವಂತಾಗಿದೆ.