ಸರ್ಕಾರಿ ಕಾಲೇಜು ಹೋರಾಟ ಉದ್ದೇಶಸಿ ಮಾತನಾಡಿದ ರೈತ ಸಂಘದ ಅಧ್ಯಕ್ಷ ಬಡಗಲಪುರ್ ನಾಗೇಂದ್ರ

ಸರ್ಕಾರಿ ಕಾಲೇಜು ಹೋರಾಟ ಉದ್ದೇಶಸಿ ಮಾತನಾಡಿದ ರೈತ ಸಂಘದ ಅಧ್ಯಕ್ಷ ಬಡಗಲಪುರ್ ನಾಗೇಂದ್ರ Farmers' Association President Badgalpur Nagendra spoke about the government college struggle

ಸರ್ಕಾರಿ ಕಾಲೇಜು ಹೋರಾಟ ಉದ್ದೇಶಸಿ ಮಾತನಾಡಿದ ರೈತ ಸಂಘದ ಅಧ್ಯಕ್ಷ ಬಡಗಲಪುರ್ ನಾಗೇಂದ್ರ 

ವಿಜಯಪುರ 09: 53ನೇ ದಿನದ ಹೋರಾಟಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರು, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು ಹೋರಾಟಕ್ಕೆ ಬೆಂಬಲ ಸೂಚಿಸಿದರು. ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ್ ನಾಗೇಂದ್ರ ಅವರು ಮಾತನಾಡಿ "ಉದ್ದೇಶ ಒಳ್ಳೆದಿದೆ, ಜನರ ಹಿತವಿದೆ, ಅದಕ್ಕೆ ಜನ ಹೋರಾಟವನ್ನು ಪ್ರಾರಂಭ ಮಾಡಿದ್ದೀರಾ.  ಬಸವಣ್ಣ ಹುಟ್ಟಿದಂತ ನಾಡಿದು. ಇವತ್ತಿನ ಶಿಕ್ಷಣ ಹಾಗೂ ಆರೋಗ್ಯ ಸರ್ಕಾರದ ಕೈಯಲ್ಲಿ ಇರಬೇಕು. ಖಾಸಗಿ ಅವರ ಕೈಯಲ್ಲಿ ಹೋಗಿ ಇವತ್ತಿನ ಶಿಕ್ಷಣ ಹದಗೆಟ್ಟಿದೆ, ಆರೋಗ್ಯ ಕ್ಷೇತ್ರ ಕೂಡ ಹದಗೆಟ್ಟಿದೆ. ಹಿಂತಾ ಒಂದು ದೊಡ್ಡ ಜಿಲ್ಲೆಯಲ್ಲಿ ಸಾಕಷ್ಟು ಅವಕಾಶ ಇದೆ. ಸರ್ಕಾರಿ ಆಸ್ಪತ್ರೆ ಮಂಜೂರು ಆದ ಜಿಲ್ಲೆಯಲ್ಲಿ ಕೂಡ ಜಾಗ ಇಲ್ಲದೇ ನೆಲಗುದಿಗೆ ಬಿದ್ದಿದೆ. ಇಲ್ಲಿ 153 ಎಕರೆ ಜಾಗ ಇದೆ, ಆಸ್ಪತ್ರೆ ಇದೆ ಇನ್ನೂ ವಿಸ್ತರಣೆ ಮಾಡಿ ಸಂಪೂರ್ಣ ಸರ್ಕಾರಿ ಆಸ್ಪತ್ರೆ ಮಾಡಬೇಕು. ಇಲ್ಲಿ ಪಿಪಿಪಿ ಮಾದರಿ ಮಾಡ್ತೀವಿ ಅಂದ್ರೆ ಇಲ್ಲಿಯ ರಾಜಕಾರಣಿಗಳ ಹಿತಾಸಕ್ತಿ ಇದ್ದೆ ಇರುತ್ತೆ. ಬಂಡವಾಳ ಶಾಹಿಗಳು ರಾಜಕಾರಣಿಗಳಲ್ಲಿ ಇರ್ತಾರೆ, ಅದಕ್ಕೆ ಅವರು ಖಾಸಗಿಗೆ ಪ್ರೋತ್ಸಾಹ ಕೊಡ್ತಾರೆ. ಆದರೆ ದಿಟ್ಟತನದಿಂದ ನೀವು ಮಾಡ್ತಾ ಇರೋ ಹೋರಾಟ ಸರಿ ಇದೆ, ಯಾಕಂದ್ರೆ ಎಲ್ಲ ಕ್ಷೇತ್ರದಲ್ಲಿ  ಖಾಸಗೀಕರಣ ಆಗ್ತಾ ಇದೆ. ಎಲ್ಲವೂ ಖಾಸಗೀಕರಣ ಆದರೆ ನಮಗೆ ಸರ್ವಭೌಮತ್ಬದ ಪ್ರಜಾಪ್ರಭುತ್ವದ ಸರ್ಕಾರ ಯಾಕೆ ಬೇಕು. ಹಾಗಿದ್ರೆ ವಿಧಾನಸೌಧವೂ ಕೂಡ ಖಾಸಗೀಕರಣ ಮಾಡಬಿಡಿ. ಇದು ರಾಜ್ಯಕ್ಕೆ ಅಪಾಯ. ವಿಜಯಪುರದಲ್ಲಿ ಈ ಹೋರಾಟ ಮುಂದುವರೆತಾ ಇದೆ, ಜಯಗಳಿಸಬೇಕು ಇದಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಸಂಪೂರ್ಣ ಬೆಂಬಲವನ್ನು ಸೊಚ್ಚಿಸುತ್ತೆ ಯಾಕೆಂದ್ರೆ ಸಾರ್ವಜನಿಕ ಹಿತಾಸಕ್ತಿ. ಎರಡು ದಿನಗಳಲ್ಲಿ ರೈತ ಸಂಘದಿಂದ ಮುಖ್ಯಮಂತ್ರಿ ಅವರಿಗೆ ಭೇಟಿ ಮಾಡಿ ನಿಮ್ಮ ಹೋರಾಟದ ಉದ್ದೇಶ ಹಾಗೂ ಸರ್ಕಾರಿ ಕಾಲೇಜಿನ ಅವಶ್ಯಕತೆ ಹಾಗೂ ಇಲ್ಲಿರುವ ಅನುಕೂಲತೆ ಬಗ್ಗೆ ಪತ್ರವನ್ನು ಬರೆಯುತ್ತೇನೆ" ಎಂದು ಅವರು ಹೇಳಿದರು.ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷರಾದ ಮಂಜುಳಾ ಅಕ್ಕಿ ಮಾತನಾಡಿ " ಹದಿಮೂರು ತಾಲೂಕಿನ ಜಿಲ್ಲೆಯಾದ ವಿಜಯಪುರದಲ್ಲಿ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲ ಅಂದ್ರೆ ಜಿಲ್ಲಾ ಉಸ್ತುವಾರಿಗಳು, ಸಚಿವರು, ಜಿಲ್ಲೆಯ ಶಾಸಕರು, ಜಿಲ್ಲಾಧಿಕಾರಿಗಳು ಏನು ಮಾಡ್ತಾ ಇದಾರೆ. ನಾವು ಕೇಳ್ತಾ ಇರೋದು ಶಿಕ್ಷಣ. ಹೋರಾಟಕ್ಕೆ ಹೆಸರು ವಾಸಿಯಾದ ವಿಜಯಪುರ ಜಿಲ್ಲೆ ಇಡೀ ದೇಶಕ್ಕೆ ಮಾದರಿಯಾಗಿದೆ. ಜಿಲ್ಲಾಧಿಕಾರಿ ಆಗಿರಬಹುದು,ರಾಜ್ಯ ಸರ್ಕಾರ ಆಗಿರಬಹುದು, ಜಿಲ್ಲೆಯ ಉಸ್ತುವಾರಿಗಳಾಗಿರಬಹುದು, ಜಿಲ್ಲೆಯ ಶಾಸಕರಾಗಿರಬಹುದು, ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು  ಆಗಿರಬಹುದು ಎಲ್ಲರೂ ಎಚ್ಚೆತ್ತುಗೊಂಡು ಈ ವೇದಿಕೆಯನ್ನು ಅರ್ಥ ಮಾಡಿಕೊಂಡು ತಕ್ಷಣ ವಿಧಾನಸಭೆಯಲ್ಲಿ ಚರ್ಚೆ ಮಾಡಿದರೆ ಒಳ್ಳೇದು ಇಲ್ಲಾ ಅಂದ್ರೆ 30 ಜಿಲ್ಲೆಗಳಿಂದ ರೈತ ಸಂಘದ ಮುಖಂಡರು ಇಲ್ಲಿ ಬಂದು ದಿಟ್ಟ ಹೋರಾಟ ಮಾಡಬೇಕಾಗುತ್ತೆ " ಎಂದು ಮಂಜುಳಾ ಅವರು ಗುಡುಗಿದರು.ಹಿರಿಯ ರೈತ  ಮುಖಂಡರಾದ ಪಂಚಪ್ಪ ಕಲ್ಬುರ್ಗಿ, ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರಾದ ಶಿವನಗೌಡ ಪಾಟೀಲ್, ಶಿವನಂದ್ ಕೊಂಡಗುಲಿ, ರಾಜೇಂದ್ರ, ಭೀಮರಾಯ ಪೂಜಾರಿ, ರವಿಕುಮಾರ್, ಗಂಗಪ್ಪ ಮೈತ್ರಿ, ಬಸನಗೌಡ, ಶಬ್ಬೀರ್ ಪಟೇಲ್ ಬಿರಾದಾರ್, ಮಹದೇವಪ್ಪ ತೇಲಿ, ಬಸವರಾಜ್ ರೆಡ್ಡಿ, ಜಯಸಿಂಗ್ ರಜಪೂತ್, ರಾಜೇಸಾಬ್ ನದಾಫ್, ಅಮ್ಮೋಗಿ ಉಕ್ಕಲಿ, ಡಿ.ಎಂ.ನದಾಫ್, ಲಾಯಪ್ಪ ಇಂಗಳೇ, ಪ್ರಭುಲಿಂಗ ಕಾರಜೋಳ, ಸಂತೋಷ್ ಚವ್ಹಾಣ್, ಹನುಮಂತ ಹಾಗೂ ಹೋರಾಟ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.