ಪ್ರವಾಹದಲ್ಲಿ ಕೊಚ್ಚಿ ಹೋದ ಎತ್ತುಗಳನ್ನು ಪ್ರಾಣ ಪಣಕ್ಕಿಟ್ಟು ರಕ್ಷಿಸಿದ ರೈತ
Farmer risks his life to save oxen washed away in flood
ತಾಳಿಕೋಟಿ 14: ಸಮೀಪದ ಹರನಾಳ ಗ್ರಾಮದ ಬಡ ರೈತ ಮಾಳಪ್ಪ ಬಿರಾದಾರ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಪ್ರವಾಹದಲ್ಲಿ ಕೊಚ್ಚಿ ಹೋದ ತನ್ನೆರಡು ಜೋಡೆತ್ತುಗಳನ್ನು ರಕ್ಷಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದ್ದು, ಡೋಣಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಇಂತಹ ಸಂದರ್ಭದಲ್ಲೇ, ಸೋಮವಾರ ಬಡ ರೈತ ಮಾಳಪ್ಪ ಬಿರಾದಾರನು ಗ್ರಾಮದ ಹತ್ತಿರದ ನದೀತೀರದಲ್ಲಿ ತನ್ನ ಎರಡು ಎತ್ತುಗಳನ್ನು ಸ್ನಾನ ಮಾಡಿಸಲು ಕರೆದುಕೊಂಡು ಹೋಗಿದ್ದಾನೆ ಆದರೆ ತೀವ್ರ ಪ್ರವಾಹದಿಂದ ಎತ್ತುಗಳು ಕಾಲುಜಾರಿ ನೀರಿನಲ್ಲಿ ಬಿದ್ದು ಸುಮಾರು ಒಂದು ಕಿಲೋಮೀಟರ್ ದೂರಕ್ಕೆ ಹರಿದುಹೋಗಿವೆ. ಈ ದೃಶ್ಯವನ್ನು ಕಂಡ ಮಾಳಪ್ಪ ಹಿಂದೆ ಮುಂದೆ ಯೋಚಿಸದೆ ನದಿಗೆ ಜಿಗಿದು ಮೊದಲು ಒಂದು ಎತ್ತನ್ನು ದಡಕ್ಕೆ ತಂದು ಕಟ್ಟಿ, ಬಳಿಕ ಮತ್ತೊಮ್ಮೆ ನೀರಿಗೆ ಇಳಿದು ಎರಡನೇ ಎತ್ತನ್ನೂ ಸುರಕ್ಷಿತವಾಗಿ ದಡಕ್ಕೆ ತಂದು ಸೇರಿಸಿದ್ದಾನೆ. ನೀರಿನ ಪ್ರವಾಹ ತೀವ್ರವಾಗಿದ್ದರಿಂದ ಗ್ರಾಮಸ್ಥರು "ನೀರಿಗೆ ಇಳಿಯಬೇಡ ಎತ್ತುಗಳಿಗಿಂತಲೂ ನಿನ್ನ ಜೀವ ಮುಖ್ಯ" ಎಂದು ಎಚ್ಚರಿಸಿದರೂ ತನ್ನ ಬದುಕಿಗೆ ಆಧಾರವಾಗಿದ್ದ ಎತ್ತುಗಳನ್ನು ಬಿಡದೇ ಮಾಳಪ್ಪ ಸಾಹಸ ಪ್ರದರ್ಶಿಸಿ ಅವುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾನೆ.
ಈ ಘಟನೆಯನ್ನು ಕಣ್ಣಾರೆ ಕಂಡ ಗ್ರಾಮಸ್ಥರು, "ಮಾಳಪ್ಪ ಬಿರಾದಾರನ ಈ ಧೈರ್ಯಮಯ ಕಾರ್ಯಕ್ಕೆ ಸರ್ಕಾರವು ಪ್ರಶಸ್ತಿ ನೀಡಿ ಗೌರವಿಸಬೇಕು" ಎಂದು ಆಗ್ರಹಿಸಿದ್ದಾರೆ. ಈ ಸಮಯದಲ್ಲಿ ಗ್ರಾಮಸ್ಥರಾದ ಮುತ್ತು ಚಳ್ಳಗಿ, ಹನುಮಂತರಾಯ ಬಿರಾದಾರ, ಮಲ್ಲಣ್ಣ ಚಳ್ಳಗಿ, ವೆಂಕಪ್ಪ ಯಡಹಳ್ಳಿ, ಶಂಕ್ರ್ಪ ಚಳ್ಳಗಿ, ಈರ್ಪ ಅಂಬಳನೂರ, ಭೀಮಾಶಂಕರ ತುಂಬಗಿ, ತಾಳಿಕೋಟಿ ಸಾಮಾಜಿಕ ಕಾರ್ಯಕರ್ತೆಯರಾದ ತಾರಾಬಾಯಿ ಹಜೇರಿ, ಮೀನಾಕ್ಷಿ ರಜಪೂತ ಮತ್ತಿತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 