ನಾಟಿ ಮಾಡಲು ಹಣವಿಲ್ಲದೆ ರೈತ ದಂಪತಿ ಸಂಕಷ್ಟ
Farmer couple in distress due to lack of funds for transplanting
ಲೋಕದರ್ಶನ ವರದಿ
ಮಾಂಜರಿ 08: ಚಿಕ್ಕೋಡಿ ತಾಲ್ಲೂಕಿನ ನಣದಿವಾಡಿ ಗ್ರಾಮದ ಬಡ ರೈತ ದಂಪತಿ ಕೇದಾರಿ ನಾಯಿಕ ಹಾಗೂ ಅವರ ಪತ್ನಿ ಕವಿತಾ ಅವರ ಬದುಕು ಕೃಷಿಯನ್ನೇ ಅವಲಂಬಿಸಿದೆ. ದಂಪತಿಗೆ ಮೂರು ಎಕರೆ ಜಮೀನು ಇದ್ದು, ಮಳೆಗಾಲ ಆರಂಭವಾಗಿರುವುದರಿಂದ ಹೊಲ ಹದ ಮಾಡಲು ಹಾಗೂ ಬಿತ್ತನೆಗೆ ಸಿದ್ಧತೆ ನಡೆಸುವುದು ಅನಿವಾರ್ಯವಾಗಿದೆ. ಆದರೆ ಟ್ರ್ಯಕ್ಟರ್ ಬಾಡಿಗೆಗೆ ಪಡೆಯಲು ಹಾಗೂ ಕನಿಷ್ಠ ಎತ್ತುಗಳನ್ನು ಬಾಡಿಗೆಗೆ ಪಡೆದು ಕೃಷಿ ಮಾಡಲು ಕೂಡ ಹಣವಿಲ್ಲದ ಪರಿಸ್ಥಿತಿ ಎದುರಾಗಿದೆ. ಸಮಯ ಕೈತಪ್ಪಬಾರದೆಂಬ ಕಾರಣಕ್ಕೆ ದಂಪತಿ ಸಾಹಸಕ್ಕೆ ಮುಂದಾಗಿ, ಪತ್ನಿ ಕವಿತಾ ಸ್ವತಃ ನೇಗಿಲಿನ ಸ್ಥಾನದಲ್ಲಿ ನಿಂತು ಎಳೆಯುತ್ತಿದ್ದರೆ, ಪತಿ ಕೇದಾರಿ ನಾಯಿಕ ನೇಗಿಲು ಹಿಡಿದು ಹೊಲ ಉಳುಮೆ ಮಾಡಿದ್ದಾರೆ.
ಕಡುಬಡತನದ ನಡುವೆಯೂ ಕೃಷಿಯ ಮೇಲಿನ ಪ್ರೀತಿ ಮತ್ತು ಬದುಕು ಕಟ್ಟಿಕೊಳ್ಳುವ ಛಲದಿಂದ ಈ ದಂಪತಿ ಕೈಗೊಂಡ ಕಾರ್ಯ ಸ್ಥಳೀಯರ ಗಮನ ಸೆಳೆದಿದೆ. ದೃಶ್ಯ ಕಂಡ ಸ್ಥಳೀಯರು ಹಾಗೂ ಸಾರ್ವಜನಿಕರು ತೀವ್ರ ಆಘಾತ ವ್ಯಕ್ತಪಡಿಸಿದ್ದು, ರೈತರ ಸಂಕಷ್ಟಕ್ಕೆ ಸರ್ಕಾರದ ಯೋಜನೆಗಳು ತಲುಪುತ್ತಿವೆಯೇ ಎಂಬ ಪ್ರಶ್ನೆ ಎತ್ತಿದ್ದಾರೆ. ಬಡ ರೈತ ಕುಟುಂಬದ ಸಂಕಷ್ಟವನ್ನು ಸರ್ಕಾರ ಹಾಗೂ ಕೃಷಿ ಇಲಾಖೆ ತಕ್ಷಣ ಗಮನಿಸಿ, ಅಗತ್ಯ ನೆರವು ಮತ್ತು ಸೌಲಭ್ಯ ಒದಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 