ಸಾಲ ಬಾಧೆ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆಗೆ ಶರಣು
Farmer commits suicide due to debt
ಬೆಳಗಾವಿ : ಸಾಲ ಬಾಧೆ ಹಿನ್ನೆಲೆಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡ ರೈತನೋರ್ವ ತನ್ನ ಮನೆ ಲೀಲಾವು ಮಾಡುತ್ತಾರೆಂದು ಹೆದರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿ ಗ್ರಾಮದಲ್ಲಿ ನಡೆದಿದೆ.
ನಿಡಸೋಸಿ ಗ್ರಾಮದ ವೀರಭದ್ರ ಮಾದನ್ನವರ (42) ಆತ್ಮಹತ್ಯೆ ಗೆ ಶರಣಾದ ರೈತನಾಗಿದ್ದಾನೆ. ಸಾಲಬಾಧೆಯಿಂದ ಜಿಗುಪ್ಸೆ ಗೊಂಡು ತನ್ನ ಪತಿ ಆತ್ಮಹತ್ಯೆ ಗೆ ಶರಣಾಗಿರುವದಾಗಿ ರೈತನ ಪತ್ನಿ ಸಂಕೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ.
ತನ್ನ ಗಂಡನಾದ ವೀರಭದ್ರ ಮಾದನ್ನವರ ಇವರು ಜಮೀನು ಸಾಗುವಳಿ ಹಾಗೂ ಹೈನುಗಾರಿಗೆ ಮಾಡಲು ವಿವಿಧ ಬ್ಯಾಂಕುಗಳಲ್ಲಿ ಅಂದರೆ ದಿ. ಕಮುನಿಟಿ ಫೈನಾನ್ಸ್ ಪ್ರವೇಟ ಅಮಿಟೆಡ್ ಆಫೀಸ ಠಾಣಿ, ಮುಂಬೈ ಬ್ರಾಂಚ ಚಿಕ್ಕೋಡಿ ಹೆಡ್ ಆಫೀಸ ಬೆಳಗಾವಿ ಬ್ಯಾಂಕಿನಲ್ಲಿ 8,೦೦,೦೦೦ ರೂಪಾಯಿ, ಶ್ರೀ ದುರದುಂಡೇಶ್ವರ ಅರ್ಬನ್ ಕ್ರೆಡಿಟ್ಸೌಹಾರ್ದ ಸಹಕಾರಿ ಸಂಘ ನಿಯಮಿತ ನಿಡಸೋಸಿಯಲ್ಲಿ 1,50,000 ರೂಪಾಯಿ, ಕರ್ನಾಟಕ ವಿಕಾಸ ಗ್ರಾಮೀಣಬ್ಯಾಂಕ ನಿಡಸೋಸಿಯಲ್ಲಿ 80,000 ರೂಪಾಯಿ, ಐ.ಡಿ.ಎಪ್.ಸಿ ಬ್ಯಾಂಕ ಚಿಕ್ಕೋಡಿಯಲ್ಲಿ 30,000 ರೂಪಾಯಿ,ದರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ನಿಡಸೋಸಿಯಲ್ಲಿ 90,000 ಸಾವಿರ ರೂಪಾಯಿ ಹೀಗೆ ಒಟ್ಟು 11 ಲಕ್ಷ 50 ಸಾವಿರ ರೂಪಾಯಿ ಸಾಲ ಮಾಡಿ ಈ ವರ್ಷ ಜಮೀನದಲ್ಲಿ ಸರಿಯಾಗಿ ಬೆಳೆ ಬಾರದೇ ಇದ್ದುದರಿಂದ ಹಾಗೂ ಹೈನುಗಾರಿಕೆ ಮಾಡಲು ಖರೀದಿ ಮಾಡಲು 05 ಆಕಳುಗಳು ತೀರಿಕೊಂಡಿದ್ದರಿಂದ ನಷ್ಟ ಅನುಭವಿಸಿ ಮಾಡಿದ ಸಾಲವನ್ನು ಹೇಗೆ ತೀರಿಸುವುದು ಅಂತಾ ಮಾನಸಿಕ ಮಾಡಿಕೊಂಡು ಜೀವನದಲ್ಲಿ ಜಿಗುಪ್ಪೆ ಹೊಂದಿ ದಿ: 1 ರಂದು ರಾತ್ರಿ ನಿಡಸೋಸಿ ಗ್ರಾಮ ಹದ್ದಿಯ ತನ್ನ ಜಮೀನದಲ್ಲಿರುವ ಮನೆಯಲ್ಲಿ ಹಗ್ಗದಿಂದ ನೇಣುಹಾಕಿಕೊಂಡು ತೀರಿಕೊಂಡಿರುವದಾಗಿ ಪತ್ನಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ದೂರು ದಾಖಲಿಸಿಕೊಂಡಿರುವ ಸಿಪಿಐ ಶಿವಶರಣ ಅವಜಿ ಅವರು ಪರಿಶೀಲನೆ ನಡೆಸಿದ್ದಾರೆ.
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ 