ವರ್ಗಾವಣೆಗೊಂಡ ಆರೋಗ್ಯ ಸಿಬ್ಬಂದಿಗೆ ಬೀಳ್ಕೊಡುಗೆ, ನೂತನ ವೈದ್ಯಾಧಿಕಾರಿಗೆ ಸ್ವಾಗತ

ವರ್ಗಾವಣೆಗೊಂಡ ಆರೋಗ್ಯ ಸಿಬ್ಬಂದಿಗೆ ಬೀಳ್ಕೊಡುಗೆ, ನೂತನ ವೈದ್ಯಾಧಿಕಾರಿಗೆ ಸ್ವಾಗತ  Farewell to Transferred Health Staff, Welcome to the New Medical Officer

ತಾಳಿಕೋಟೆ, ಜು.12: ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ನರ್ಸಿಂಗ್ ಅಧಿಕಾರಿ ಜ್ಯೋತಿ ಕೋಳೂರಗಿ, ಕಚೇರಿ ಅಧೀಕ್ಷಕಿ ಜಮುನಾ ಅರಸಂಗಿ, ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿಯಾಗಿ ಪದೋನ್ನತಿ ಹೊಂದಿದ ಫಯಾಜ್ ಅತ್ತಾರ್ ಹಾಗೂ ಕೊಣ್ಣೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ. ಶ್ರೀಶೈಲ್ ಹುಕ್ಕೇರಿ ಅವರು ಆಲಮಟ್ಟಿ ಕೆಬಿಜೆಎನ್‌ಎಲ್ ಆಸ್ಪತ್ರಿಗೆ ವರ್ಗಾವಣೆಗೊಂಡ ಹಿನ್ನೆಲೆ ಶನಿವಾರ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಅವರಿಗೆ ಸನ್ಮಾನಿಸಿ ಬೀಳ್ಕೊಡಲಾಯಿತು.  

ಇದೇ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಆಸ್ಪತ್ರೆಯಿಂದ ನೂತನ ಹಿರಿಯ ವೈದ್ಯಾಧಿಕಾರಿಯಾಗಿ ಆಗಮಿಸಿದ ಡಾ. ಎ.ಜಿ. ಬಿರಾದಾರ್ ಅವರನ್ನು ಸನ್ಮಾನಿಸಿ ಆತ್ಮೀಯವಾಗಿ ಸ್ವಾಗತಿಸಲಾಯಿತು.  ಕಾರ್ಯಕ್ರಮದಲ್ಲಿ ರಾಜ್ಯ ಸಹಕಾರ ಸಂಘಗಳ ಮಹಾಮಂಡಳಿ ನಿರ್ದೇಶಕ ಆನಂದ ಬಿರಾದಾರ್, ಹಿರಿಯ ವೈದ್ಯಾಧಿಕಾರಿ ಡಾ. ಮಧುಬಾಲಾ ಸಿಂಘಾಲ್, ಡಾ. ಸಾಗರ ಪಾಟೀಲ, ಸಿಬ್ಬಂದಿಗಳಾದ ನಾಗರಾಜ್ ಪಾಟೀಲ, ರಾಮನಗೌಡ ಬಿರಾದಾರ್, ಇಸಾಕ್ ಚೌದ್ರಿ, ಮಹೆಬೂಬ್ ನಡುವಿನಮನಿ, ಆಸಿಫ್ ಕಲಕೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.