ಕೋವಿಡ್ ಸೋಂಕು ಗೆದ್ದ ಕೃಷ್ಣ ನಗರದ ವ್ಯಕ್ತಿಗೆ ಗುಲಾಬಿ ಹೂ ನೀಡಿ ಬೀಳ್ಕೊಡುಗೆ
ಹಾವೇರಿ: ಮೇ 23: ಕೋವಿಡ್ ಸೋಂಕಿನಿಂದಾಗಿ ಕಳೆದ 14 ದಿನಗಳಿಂದ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯು ಗುಣಮುಖ ಹೊಂದಿದ್ದು, ವೈದ್ಯಾಧಿಕಾರಿಗಳು, ನಸರ್್ಗಳು, ಆಸ್ಪತ್ರೆ ಸಿಬ್ಬಂದಿಗಳು ಚಪ್ಪಾಳೆಯೊಂದಿಗೆ ಗುಲಾಬಿ ಹೂ ನೀಡಿ ಬೀಳ್ಕೊಟ್ಟರು.
ಶನಿವಾರ ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಕೋವಿಡ್ -19 ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ, ಜಿಲ್ಲಾ ಶಸ್ತ್ರ ಚಿಕಿತ್ಸ ಡಾ. ಪಿ.ಆರ್.ಹಾವನೂರ ಹಾಗೂ ಇತರ ವೈದ್ಯರ ತಂಡ ಸವಣೂರ ತಾಲೂಕಿನ ಕೃಷ್ಣ ನಗರದ ನಿವಾಸಿ 40 ವರ್ಷದ ಕ-672 ವ್ಯಕ್ತಿಯನ್ನು ಆಸ್ಪತ್ರೆಯಿಂದ ನಿಯಮಾನುಸಾರ ಬಿಡುಗಡೆಗೊಳಿಸಿ ಸಕರ್ಾರಿ ಅಂಬ್ಯುಲೆನ್ಸ್ ಮೂಲಕ ಮನೆಗೆ ಕಳುಹಿಸಿಕೊಡಲಾಯಿತು.
ಮುಂಬೈನಿಂದ ತನ್ನ ಸಹೋದರ ಹಾಗೂ ಮಗನೊಂದಿಗೆ ಜಿಲ್ಲೆಗೆ ಬಂದಿದ್ದ ಈತನಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಸತತ 14 ದಿನ ವೈದ್ಯರ ತಂಡ ಚಿಕಿತ್ಸೆ ನೀಡಿದ ಫಲವಾಗಿ ಗುಣಮುಖನಾಗಿ ಈಗ ಮನೆಗೆ ತೆರಳಿದ್ದಾನೆ.
ಈತನನ್ನು ಮುಂದಿನ 14 ದಿವಸ ಗೃಹ ಪ್ರತ್ಯೇಕತೆಯಲ್ಲಿರಿಸಿ ನಿಗಾವಹಿಸಲಾಗುತ್ತಿದೆ. ಇವನೊಂದಿಗೆ ಸಹೋದರನೂ(ಕ-639) ಸೋಂಕಿನಾಗಿದ್ದು, ಈತನ ಅಂತಿಮ ಲ್ಯಾಬ್ ವರದಿ ಬರಬೇಕಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ ಅವರು ಮಾತನಾಡಿ, ಕರೊನಾ ವೈರಸ್ಸಿನಿಂದ ಗುಣಮುಖರಾದವರಿಗೆ ಜನರು ಯಾವುದೇ ತೊಂದರೆ ಕೊಡದೆ ಅವರ ಮನಸ್ಸಿಗೆ ನೋವು ಮಾಡದಂತೆ ಸಾಮಾನ್ಯರಂತೆ ಎಲ್ಲರು ನೋಡಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಎಷ್ಟೇ ಬಂದರು ಎದುರಿಸಲು ಎಲ್ಲ ಸಿದ್ಧತೆಗಳು ಮಾಡಿಕೊಳ್ಳಲಾಗಿದೆ.
ಆಸ್ಪತ್ರೆಯಲ್ಲಿ ಬೇಕಾದಂತಹ ವಾರ್ಡಗಳು, ಐ.ಸಿ.ಯು ಘಟಕಗಳು ಸೇರಿದಂತೆ ಪೂರ್ಣ ಪ್ರಮಾಣದ ವೈದ್ಯಕೀಯ ಸೌಲಭ್ಯಗಳನ್ನು ವಿಸ್ತರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸೋಂಕಿತ ವ್ಯಕ್ತಿ ಗುಣಮುಖನಾಗಿ ಮನೆಗೆ ತೆರಳು ಕೋವಿಡ್ ಆಸ್ಪತ್ರೆಯ ವೈದ್ಯರು, ಜಿಲ್ಲಾಡಳಿತದ ವಿವಿಧ ಇಲಾಖೆಯ ಅಧಿಕಾರಿಗಳ ಸಹಕಾರ ಬಹಳ ಪ್ರಮುಖವಾಗಿದೆ. ಎಲ್ಲರೂ ಸಾಕಷ್ಟು ಶ್ರಮ ವಹಿಸಿದ್ದಾರೆ ಅವರ ಪರಿಶ್ರಮದಿಂದ ಸೋಂಕಿತ ವ್ಯಕ್ತಿಗೆ ಗುಣಮುಖರನ್ನಾಗಿ ಮಾಡಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಪಿ.ಆರ್.ಹಾವನೂರ ಮಾತನಾಡಿ, ಕರೋನಾ ವೈರಸ್ಗೆ ಸಂಬಂಧಿಸಿದಂತೆ ಯಾವುದೇ ಪರಿಸ್ಥಿತಿ ಬಂದರು ಎದುರಿಸಲು ಕೋವಿಡ್ ಆಸ್ಪತ್ರೆ ಸನ್ನದ್ಧವಾಗಿದೆ. ಸವಣೂರ ಕೃಷ್ಣಾ ನಗರದ ಸೋಂಕಿತ ವ್ಯಕ್ತಿ ಕೊನೆಯ ವರದಿ ನೆಗೆಟೀವ್ ಬಂದು ಸಂಪೂರ್ಣ ಗುಣಮುಖರಾಗಿದ್ದು ನಮಗೆ ತುಂಬಾ ಸಂತಸವಾಗಿದೆ ಎಂದರು.
ಕೋವಿಡ್ ಆಸ್ಪತ್ರೆಯಲ್ಲಿ ಈವರೆಗೆ 6 ಕೋವಿಡ್ ಸೋಂಕಿತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಪೈಕಿ ಓರ್ವ ವ್ಯಕ್ತಿ ಗುಣಮುಖನಾಗಿರುವ ಕಾರಣ ಬಿಡುಗಡೆಮಾಡಲಾಗಿದೆ. ಇನ್ನುಳಿದ 5 ಜನರು ಸ್ಟೇಬಲ್ ಆಗಿದ್ದಾರೆ.
ಯಾವುದೇ ತೊಂದರೆಗಳಿಲ್ಲದೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಕೃಷ್ಣ ನಗರ ಹಾಗೂ ಅಂದಲಗಿ ಗ್ರಾಮದ ಸೋಂಕಿತರ ಅಂತಿಮ ವರದಿ ಶೀಘ್ರದಲ್ಲಿಯೇ ಬರಲಿದೆ. ಈ ಇಬ್ಬರು ಗುಣಮುಖರಾಗುವ ಲಕ್ಷಣಗಳಿವೆ ಎಂದು ತಿಳಿಸಿದರು.
ಡಾ. ವಿಶ್ವನಾಥ ಸಾಲಿಮಠ, ಡಾ.ನಿರಂಜನ ಮಾನಿ ಬಣಕಾರ, ಡಾ. ಪರಸಪ್ಪ ತುರಚಿಹಾಳ, ಡಾ.ವಿಠ್ಠಲದಾಸ, ಜಿಲ್ಲಾ ನಸರ್ಿಂಗ್ ಸೂಪರಡೆಂಟ್ ರಾಜೇಶ್ವರಿ ಭಟ್ ಸೇರಿದಂತೆ ವಿವಿಧ ವೈದ್ಯರು, ನಸರ್ಿಂಗ್ ಸ್ಟಾಪ್, ಲ್ಯಾಬ್ಟೆಕ್ನಿಷಿಯನ್ಸ್ ಇತರ ವೈದ್ಯಕೀಯೇತರ ಸಿಬ್ಬಂದಿಗಳು ಭಾಗವಹಿಸಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 