ಅಗಡಿ ಗ್ರಾಮದ ಸ್ವಯಂ ನಿವೃತ್ತಿಗೊಂಡ ಪಾರ್ವತಿ ಪಾಟೀಲ ಗುರುಮಾತೆಯ ಬೀಳ್ಕೊಡುಗೆ ಸಮಾರಂಭ
Farewell ceremony of self-retired Guru Mata Parvati Patil of Agadi village
ಹಾವೇರಿ 02 : ಮಕ್ಕಳು, ಹಿರಿಯ ವಿದ್ಯಾರ್ಥಿಗಳು ಬಿಕ್ಕಿ ಬಿಕ್ಕ ಅತ್ತರು, ಗುರುಗಳು ಗುರುಮಾತೆಯರು ಹಾಗೂ ಅಡುಗೆ ಸಿಬ್ಬಂದಿಯವರ ಕಣ್ಣಾಲಿಗಳು ತುಂಬಿ ಬಂದವು ಎಸ್‌ಡಿಎಂಸಿ ಸದಸ್ಯರ,ಪೋಷಕರ ದುಃಖ ತಪ್ತರಾದರು ಅದೊಂದು ಭಾವುಕ ಕಾರ್ಯಕ್ರಮವೆನಿಸಿತು. ತಾಲೂಕಿನ ಅಗಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.2ರಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿಗೊಂಡ ಪಾರ್ವತಿ ಪಾಟೀಲ ಗುರುಮಾತೆಯ ಬೀಳ್ಕೊಡುಗೆ ಸಮಾರಂಭ.
ಶಿಕ್ಷಣ ಚಿಂತಕ ನಿಜಲಿಂಗಪ್ಪ ಬಸೇಗಣ್ಣಿ ಮಾತನಾಡಿ ಪಾರ್ವತಿ ಅವರದು ಮಾತೃಹೃದಯ ಮಕ್ಕಳೇ ಅವರ ಆಸ್ತಿ, ಅವರು ಮಕ್ಕಳು ಮೆಚ್ಚಿದ ಗುರುಮಾತೆ. ರೂ.50,000 ದತ್ತಿ ಬಹುಮಾನ ಹಾಗೂ ಮಕ್ಕಳ ಬ್ಯಾಂಕಿಗೆ ರೂ.15,000 ನೀಡಿದ ಹೃದಯ ಶ್ರೀಮಂತರು ಶಿಕ್ಷಕರು ವೃತ್ತಿಗೌರವಕ್ಕೆ ಧಕ್ಕೆ ತರದೇ ಮಕ್ಕಳಿಗೆ ಸಮಾಜಕ್ಕೆ ಮಾದರಿಯಾಗಬೇಕು ಎಂದರು. ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, ಒಳ್ಳೆಯ ಶಿಕ್ಷಕರ ಬಗ್ಗೆ ವಿದ್ಯಾರ್ಥಿಗಳು ಹೆದರಿಕೆಯ ಭಾವನೆಯನ್ನು ಇರಿಸಿಕೊಂಡಿರುತ್ತಾರೆ ಹಾಗೆ ಗೌರವದ ಭಾವನೆಯನ್ನೂ ಇರಿಸಿಕೊಂಡಿರುತ್ತಾರೆ. ಒಬ್ಬ ಉತ್ತಮ ಶಿಕ್ಷಕ ಸಾವಿರಾರು ಅರ್ಚಕರಿಗಿಂತ ಮಿಗಿಲು. ಸಮಯ ಪ್ರಜ್ಞೆ ವೃತ್ತಿ ಗೌರವ ಮಕ್ಕಳಲ್ಲಿ ಪ್ರೀತಿ, ಮುಗಳ್ನಗೆ ಶಿಕ್ಷಕರ ಆಭರಣಗಳಾಗಬೇಕು ಎಂದು ಹೇಳಿ ಮಕ್ಕಳ ಭವಿಷ್ಯದ ನಿರ್ಮಾತೃಗಳು ಶಿಕ್ಷಕರು ಎಂಬ ಕವನ ವಾಚನ ಮಾಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಅರಳಿ,ಕಾರ್ಯದರ್ಶಿ ಬಸವರಾಜ ಹಳೇಮನಿ,ನಿರ್ದೇಶಕ ಎ.ಎಚ್. ಹವಾಲ್ದಾರ, ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಮಿಳಾ ಕಾಮನಹಳ್ಳಿ, ಮಂಜುನಾಥ ಕಮ್ಮಾರ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ರೇಖಾ ತೋಟಗೇರ, ಎಸ್.ಎನ್. ಗೊಲಲರ, ನಾಗರಾಜ ಮೂಲಿಮನಿ, ಎಫ್.ಎ. ರಿತ್ತಿ, ಬಸವರಾಜ ಮುರಡಿ, ಎಸ್.ವೈ. ಗಾಣಿಗೇರ, ಮುಖ್ಯಶಿಕ್ಷಕ ವಿ.ವಿ. ಕಮತರ, ರವಿರಾಜ ಇಟಗಿ, ಅಕ್ಕಮ್ಮ ಮುದ್ದಿ, ವಿ.ಪಿ. ಗೋಣಿ ಹಾಗೂ ವಿದ್ಯಾರ್ಥಿಗಳು ಪಾರ್ವತಿ ಗುರುಮಾತೆ ಕುರಿತು ಮಾತನಾಡಿದರು.ಕ್ಲಸ್ಟರ್‌ನ ಶಿಕ್ಷಕರು, ಸ್ಪೂರ್ತಿ ವಿದ್ಯಾಕುಟೀರ, ಸಂಘ ಸಂಸ್ಥೆಗಳು, ಶಾಲಾ ಮಕ್ಕಳು, ಹಿರಿಯ ವಿದ್ಯಾರ್ಥಿಗಳು, ಎಸ್.ಡಿ.ಎಂ.ಸಿ. ಹಾಗೂ ಅಡುಗೆ ಸಿಬ್ಬಂದಿಯವರಿಂದ ಗೌರವ ಸ್ವೀಕರಿಸಿ ಪಾರ್ವತಿ ಪಟೀಲ ಮಾತನಾಡಿ, ಸಹದ್ಯೋಗಿಗಳಿಗೆ, ಸಮಾಜಕ್ಕೆ ಹಾಗೂ ಮಕ್ಕಳಿಗೆ ನಾನು ಚಿರಋಣಿಯಾಗಿರುವೆ. ಹೃದಯ ತುಂಬಿ ಬಂದಿದೆ ಆದರೆ ನನ್ನ ಆರೋಗ್ಯದ ದೃಷ್ಠಿಯಿಂದ ವೈದ್ಯರ ಸಲಹೆಯಂತೆ ಸ್ವಯಂ ನಿವೃತ್ತಿ ತೆಗೆದುಕೊಳ್ಳುವುದು ನನಗೆ ಅನಿವಾರ್ಯವಾಯಿತು ಎಂದು ಭಾವುಕರಾಗಿ ಮಾತನಾಡಿ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.
ಎಸ್.ಡಿ.ಎಂ.ಸಿ. ಅಧ್ಯಕ್ಷ ಶಿವಪ್ಪ ಬಳಲಕೊಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು ಸೇವಾಕಾರ್ಯ ಬೋಧನಾ ಕೌಶಲ್ಯ, ಮಕ್ಕಳೋಡನಾಟ, ಸೌಜನ್ಯತೆಗೆ ಹೆಸರಾದವರು ಎಂದು ಶ್ಲಾಘಸಿದರು. ಶಿವಪುತ್ರ್ಪ ಬಸೇಗಣ್ಣಿ, ಗುಡ್ಡಪ್ಪ ಹುಚ್ಚಮ್ಮನವರ, ಗೀತಾ ಟಾಕಪ್ಪನವರ, ಬೀಬಿಆಯಿಷಾ ಮತ್ತಿತರರು ಇದ್ದರು. ಗುರುಮಾತೆ ಜಿ. ಶೋಭಾ ಸ್ವಾಗತಿಸಿದರು. ಶಂಕರ ಚಿಕ್ಕಳ್ಳಿ ನಿರೂಪಿಸಿದರು. ಅಶ್ವಿನಿ ಭಜಂತ್ರಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 