ಎ.ಎ.ಹದ್ಲಿ ನಿವೃತ್ತ ಪ್ರಾಚಾರ್ಯರ ಬೀಳ್ಕೊಡುಗೆ ಹಾಗೂ ಷಷ್ಠ್ಯಬ್ದಿಪೂರ್ತಿ ಸಮಾರಂಭ

ಎ.ಎ.ಹದ್ಲಿ ನಿವೃತ್ತ ಪ್ರಾಚಾರ್ಯರ ಬೀಳ್ಕೊಡುಗೆ ಹಾಗೂ ಷಷ್ಠ್ಯಬ್ದಿಪೂರ್ತಿ ಸಮಾರಂಭ Farewell ceremony of retired principal A.A. Hadli

ಬೆಟಗೇರಿ 17: ನಗರದ ಶ್ರೀ ಮಹಾರಾಣಾ ಪ್ರತಾಪಸಿಂಹ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ  ಪ್ರಾಚಾರ್ಯರಾಗಿ ಸುದೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತಿಗೊಂಡ ಎ.ಎ.ಹದ್ಲಿ ಇವರಿಗೆ ಬೀಳ್ಕೊಡುವ ಹಾಗೂ ಷಷ್ಠ್ಯಬ್ದಿಪೂರ್ತಿ ಸಮಾರಂಭವನ್ನು ದಿ. 19. ಶನಿವಾರದಂದು ಬೆಳಿಗ್ಗೆ 9-30 ಘಂಟೆಗೆ ಸಂಸ್ಥೆಯ ಶಾಲಾ ಆವರಣದಲ್ಲಿ           ಏರಿ​‍್ಡಸಲಾಗಿದೆ. 

ಸಾನಿಧ್ಯವನ್ನು ಶ್ರೀ ಷ.ಬ್ರ.ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು ಗದಗ ಇವರು ವಹಿಸಲಿದ್ದು ಅಧ್ಯಕ್ಷತೆಯನ್ನು ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರವೀಂದ್ರ ಎಂ.ಮೂಲಿಮನಿ ಇವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಚಾರ್ಯರಾದ ಬಿ.ಎಫ್‌.ಚೇಗರಡ್ಡಿ ಇವರು ಆಗಮಿಸಲಿದ್ದಾರೆ.  ವಿಶೇಷ ಆಮಂತ್ರಿತರಾಗಿ ನಿವೃತ್ತ ಪ್ರಾಚಾರ್ಯರಾದ ವೈ.ಆರ್‌.ಹಿರೇಗೌಡರ, ನಿವೃತ್ತ ಶಿಕ್ಷಕರಾದ ಬಿ.ಎಲ್‌.ಹೊಸಳ್ಳಿ, ನಿವೃತ್ತ ಮುಖ್ಯಾಧ್ಯಾಪಕರಾದ ಸಿ.ಎಂ.ಮಾರನಬಸರಿ, ನಿವೃತ್ತ ಮುಖ್ಯಾಧ್ಯಾಪಕರಾದ ಕೆ.ಎಂ.ಮೂಲಿಮನಿ, ನಿವೃತ್ತ ಶಿಕ್ಷಕರಾದ ವಿ.ಜಿ.ಕಾಂಬಳೇಕರ, ನಿವೃತ್ತ ಶಿಕ್ಷಕರಾದ ಆರ್‌.ಎಸ್‌.ರಜಪೂತ ಇವರುಗಳು ಆಗಮಿಸಲಿದ್ದಾರೆ.. 

ಪದವಿ ಪೂರ್ವ ವಿಭಾಗದ ಎಸ್‌.ಎಂ.ಉಳ್ಳಾಗಡ್ಡಿ, ಪ್ರೌಢ ಶಾಲಾ ಮುಖ್ಯಾಧ್ಯಾಪಕರಾದ ಎಸ್‌.ಎಸ್‌.ಬಡಿಗೇರ, ಆಡಳಿತ ಮಂಡಳಿ ಹಾಗೂ ಸಮಸ್ತ ಸಿಬ್ಬಂದಿ ವರ್ಗದವರು ಸರ್ವರನ್ನು ಸ್ವಾಗತಿಸಲಿದ್ದಾರೆ.