ಎ.ಕೆ.ನದಾಫ ಶಿಕ್ಷಕಿಯ ಬಿಳ್ಕೊಡುಗೆ ಸಮಾರಂಭ
Farewell ceremony for teacher A.K. Nadaf
ಯರಗಟ್ಟಿ 12: ಸ್ಥಳೀಯ ಅಂಬೇಡ್ಕರ ನಗರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 30 ವರ್ಷ ಶಿಕ್ಷಕಿ ಸೇವೆ ಸಲ್ಲಿಸಿ ನಿವೃತ್ತಿಯಾದ ಎ.ಕೆ.ನದಾಫ ಅವರಿಗೆ ಬಿಳ್ಕೊಡುಗೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಶಾಲಾ ಸಿಬ್ಬಂದಿ, ವಿವಿಧ ಇಲಾಖೆ, ಹಾಗೂ ಹಲವಾರು ಸಂಘಟನೆಯವರನ್ನು ಸನ್ಮಾನಿಸಲಾಯಿತು.
ಮುಖ್ಯಶಿಕ್ಷಕ ಪಿ.ಎಂ.ತಳವಾರ ಮಾತನಾಡಿ ಇವರ ಸುದೀರ್ಘ ಸೇವೆಯಲ್ಲಿ ನಿರಂತರ ಕಲಿಸುವಿಕೆ ಚಟುವಟಿಕೆಗಳಿಂದ ಮಕ್ಕಳು ಸದಾ ಉತ್ಸಾಹಿಗಳಿಂದ ಇರುತ್ತಿದ್ದವು. 1, 2,3ನೇ ತರಗತಿ ಮಕ್ಕಳಿಗೆ ಅಷ್ಟೆ ಕಲಿಸುವುದಲ್ಲದೆ ನಲಿ-ಕಲಿ ವಿಭಾಗ ತರಬೇತಿ ಸಹ ಪಡೆದಿದ್ದರು. ಇವರಿಂದ ಕಲಿತವರು ಬಹಳಷ್ಟು ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಶಾಲೆಯ ಒಬ್ಬ ಒಳ್ಳೆಯ ಗುಣಮಟ್ಟದ ಶಿಕ್ಷಕರನ್ನು ಕಳೆದುಕೊಂಡಂತಾಗಿದೆ ಎಂದರು.
ನಂತರ ಸದಾನಂದ ಹಣಬರ ಮಾತನಾಡಿ ಶಿಕ್ಷಕರನ್ನು ಗೌರವಿಸುವಷ್ಟು ಇನ್ನುಳಿದ ಇಲಾಖೆ ಸಿಬ್ಬಂದಿಯನ್ನು ಗೌರವಿಸುವದಿಲ್ಲಾ ಯಾವುದೇ ವ್ಯಕ್ತಿ ಉನ್ನತ ಮಟ್ಟದಲ್ಲಿ ಇದ್ದಾನೆ ಎಂದರೇ ಅವರ ಹಿಂದೆ ಕಲಿಸಿದ ಗುರುವಿನ ಆಶಿರ್ವಾದ ಮತ್ತು ಅವರು ಕಲಿಸಿ ಕೊಟ್ಟ ಶಿಕ್ಷಣ ಅತ್ಯ ಅಮೂಲ್ಯವಾಗಿರುತ್ತದೆ.ಸಮಾಜದಲ್ಲಿ ನಿವೃತ್ತಿಯಾಗಿರುವ ಶಿಕ್ಷಕಿ ಕ್ರಿಯಾಶೀಲರು, ಸಮಯಪ್ರಜ್ಞ, ಮಾತೃಹೃದಯದವರು ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದರು.ಶಾಲಾ ಸುಧಾರಣಾ ಸಮೀತಿ ಅದ್ಯಕ್ಷ ಡಿ.ಕೆ.ರಫೀಕ ಮಾತನಾಡಿ ಇವರಿಂದ ಶಾಲೆ ಇವರಿಂದ ಶಿಸ್ತಿನಿಂದ ಸದಾ ಚಟುವಟಿಕೆಯಂದ ಯಾವುದೆ ತೆರನಾದ ಕಪ್ಪು ಚುಕ್ಕೆ ಇಲ್ಲದಂತೆ ಸೇವೆ ಸಲ್ಲಿಸಿ ನಿವೃತ್ತ ಆಗುವ ಅವರ ಮುಂದಿನ ಜೀವನ ಸುಗಮವಾಗಿರಲಿ ಎಂದರು.
ಮುಖ್ಯ ಶಿಕ್ಷಕ ವಿಜಯ ಮರಡಿ, ಉಮಾ ಜೋಶಿ, ಇಮಾಮಸಾಬ ಹುಸೇನಾಯ್ಕರ, ಬಾಬು ಚೆನ್ನಮೇತ್ರಿ, ಫಿರೋಜ ಖಾದ್ರಿ, ಶಾಲೆಯ ಎಲ್ಲಾ ಶಿಕ್ಷಕರುಗಳು, ಆಡಳಿತ ಮಂಡಳಿಯವರು, ಮಕ್ಕಳು ಉಪಸ್ಥಿತರಿದ್ದರು.
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್ 