ತಡವಲಗಾದಲ್ಲಿ 8ನೇ ತರಗತಿ ವಿದ್ಯಾರ್ಥಿನಿಯರ ಬೀಳ್ಕೋಡುವ ಸಮಾರಂಭ

ತಡವಲಗಾದಲ್ಲಿ 8ನೇ ತರಗತಿ ವಿದ್ಯಾರ್ಥಿನಿಯರ  ಬೀಳ್ಕೋಡುವ ಸಮಾರಂಭ Farewell ceremony for 8th grade students in Tadawalaga

ಇಂಡಿ 05: ವಿದ್ಯಾರ್ಥಿ ಜೀವನವು ಜ್ಞಾನಾರ್ಜನೆ, ಸ್ನೇಹ, ಮತ್ತು ಕನಸುಗಳನ್ನು ಕಟ್ಟಿಕೊಳ್ಳುವ ಬಂಗಾರದ ಅವಧಿಯಾಗಿದೆ. ಇದು ಶಿಸ್ತು, ಜವಾಬ್ದಾರಿ ಹಾಗೂ ಉಜ್ವಲ ಭವಿಷ್ಯದ ಅಡಿಪಾಯ ಹಾಕುವ ಸುವರ್ಣಾವಕಾಶ. ಈ ಹಂತದಲ್ಲಿ ಕಲಿಯುವ ಪಾಠಗಳು ಮತ್ತು ರೂಢಿಸಿಕೊಳ್ಳುವ ಒಳ್ಳೆಯ ಅಭ್ಯಾಸಗಳು ಜೀವನದುದ್ದಕ್ಕೂ ದಾರೀದೀಪವಾಗುತ್ತವೆ, ಆದ್ದರಿಂದ ಈ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಡವಲಗಾ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ತಮ್ಮಣ್ಣ ಪೂಜಾರಿ  ಹೇಳಿದರು. 

ಅವರು ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಸರ್ಕಾರಿ ಹಿರಿಯ ಕನ್ನಡ ಹೆಣ್ಣು ಮಕ್ಕಳ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿಯರ  ಬೀಳ್ಕೋಡುವ ಸಮಾರಂಭ ಮತ್ತು ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ವರದಿಗಾರ ಸಚೀನ ಇಂಡಿ ಮಾತನಾಡಿ ಮಕ್ಕಳ ಬೆಳವಣಿಗೆಯಲ್ಲಿ ತಾಯಿ ಪಾತ್ರ ಮುಖ್ಯವಾದುದು.ಮನೆಯ ಮೊದಲು ಪಾಠ ಶಾಲೆ ತಾಯಿಯೇ ಮೊದಲ ಗುರು ಎಂಬಂತೆ ಮಕ್ಕಳಿಗೆ ಸಂಜೆ ಸಮಯದಲ್ಲಿ ಮನೆಗೆ ಮಕ್ಕಳಿಗೆ ಓದಲು ಹಾಗೂ ಬರೆಯಲು ಹೇಳುವುದು ಪಾಲಕರ ಪಾತ್ರ ಮುಖ್ಯ ವಹಿಸುತ್ತದೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ರವಿ ಹೋಸಮನಿ ಮಾತನಾಡಿ ಮಕ್ಕಳಿಗೆ ಮೊಬೈಲ್ ಹಾಗೂ ಟಿವಿ ಯಿಂದ ದೂರು ಇಟ್ಟು ಮಕ್ಕಳಿಗೆ ಒಳ್ಳೆಯ ಸದ್ದಬುದ್ದಿ ಹೇಳುವ ಕೆಲಸ ತಂದೆ ತಾಯಿ ಪಾತ್ರ ಮುಖ್ಯ ಎಂದು.ಈ ಸಂದರ್ಭದಲ್ಲಿ ಶಂಕರಯ್ಯ ಹೀರೆಮಠ ಅಶೋಕ ಮಿರ್ಜಿ ಉಸ್ಮಾನ್ ಕಸ್ಸಾಬ ಸೋಮಶೇಖರ ಬ್ಯಾಳಿ ಶಿವಶಂಕರ ಹಿಳ್ಳಿ ಚಿದಾನಂದ ಇಂಡಿ ಸುರೇಶ್ ಗೋಳ್ಳಗಿ ಸಂತೋಷ ಸಾರವಾಡ ರಾಕೇಶ್ ವಾಲಿಕಾರ ಮಹೇಶ್ ತಳಕೇರಿ ಚನ್ನು ಜಾಡರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ವಿಠೋಬಾ ವಿಜಾಪೂರ ವಹಿಸಿದ್ದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ನೇತ್ರಾವತಿ ಕವಟಗಿ ಮಳಸಿದ್ದಪ್ಪ ಬ್ಯಾಳಿ ಪ್ರಭಾರಿ ಮುಖ್ಯ ಗುರುಗಳಾದ ಆರ್ ಎಸ್ ದೊಡ್ಡಮನಿ ಎಲ್ ಬಿ ಕೊಂಕಣಿ ಗೀತಾ ಎಮ್ ಬಿರಾದಾರ ಬಿ ಎಸ್ ಮುರಾಳ ಐ ಜಿ ಗಂಗನಗೌಡ ಅಕ್ಷತಾ ನಾಗ್ರೇಸಿ ಮಾಹಾನಂದ ಡಂಗಿ ದಾನಮ್ಮ ಬಡಿಗೇರ ಮಂಜುನಾಥ ಮಕಣಿ ಬಸವರಾಜ ರೆಬಿನಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು ಈ ಕಾರ್ಯಕ್ರಮವನ್ನು  ಶಿಕ್ಷಕರಾದ ರಾಜಕುಮಾರ ಬೆಣ್ಣೆಸೂರ ನಿರೂಪಿಸಿದರು ಎಸ್ ಎಂ ಝಳಕಿ ಸ್ವಾಗತಿಸಿದರು ಎಚ್ ಎಲ್ ನದಾಫ್ ವಂದಿಸಿದರು