ಕುಟುಂಬ ದುರಂತ ಪ್ರಕರಣ: ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹ
Family tragedy case: Demand for severe punishment for the accused
ಲೋಕದರ್ಶನ ವರದಿ
ಗದಗ 29: ಮೈಸೂರು ಜಿಲ್ಲೆ ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಉಪ್ಪಾರ ಕುಟುಂಬಕ್ಕೆ ಆಗಿರುವ ಅನ್ಯಾಯ ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ನಗರದಲ್ಲಿ ಸೋಮವಾರ ಜಿಲ್ಲಾ ಮಹರ್ಷಿ ಭಗೀರಥ ಉಪ್ಪಾರ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮದಲ್ಲಿ ಉಪ್ಪಾರ ಸಮಾಜದ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಶಿವಣ್ಣ, ನಾಗರತ್ನ, ರಕ್ಷಿತಾ ಮೃತ ಪಟ್ಟಿದ್ದಾರೆ. ಅವರ ಸಾವಿನ ಬಗ್ಗೆ ವಿವರವಾದ ಡೆತ್ ನೋಟ್ ಬರೆದಿಟ್ಟು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರ ಸಾವಿಗೆ ಉಲ್ಲಾಸಗೌಡ ಎಂಬ ಕೀಚಕನ ಹೀನಕೃತ್ಯದಿಂದ ಮನನೊಂದು ಬಡ ಕುಟುಂಬ ಬಲಿಯಾಗಿದೆ. ಉಲ್ಲಾಸಗೌಡ ರಕ್ಷಿತಾಳಿಗೆ ಪ್ರೀತಿಸುವಂತೆ ದುಂಬಾಲು ಬಿದ್ದಿದ್ದನಂತೆ. ಅವಳು ನಿರಾಕರಿಸಿದರೂ ಅವನು ಪ್ರೀತಿಸುವ ನಾಟಕವಾಡಿ, ಮೋಸ ಮಾಡಿದ್ದಾನೆ. ಈ ಬಗ್ಗೆ ಕರೆದು ಬುದ್ದಿ ಮಾತು ಹೇಳಿದರೂ ಅವನು ತನ್ನ ದುಷ್ಟ, ದುರ್ಬುದ್ಧಿ ಮುಂದುವರೆಸಿದ್ದನಂತೆ. ಹಾಗಾಗಿ ಕುಟುಂಬಸ್ಥರು ರಕ್ಷಿತಾಳನ್ನು ಬೇರೊಬ್ಬರ ಜೊತೆ ಮದುವೆ ನಿಶ್ಚಯವಾಗಿತ್ತು. ಮದುವೆ 2 ದಿನ ಬಾಕಿ ಇತ್ತು. ಆಗ ಮದುವೆ ಆಗುವ ಹುಡುಗನಿಗೆ ರಕ್ಷಿತಾಳ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿದ್ದಾನೆ. ಮದುವೆ ಸಂಭ್ರಮದಲ್ಲಿರಬೇಕಾದ ಕುಟುಂಬ, ಉಲ್ಲಾಸಗೌಡನ ಕ್ರೌರ್ಯದಿಂದ ಮರ್ಯಾದೆಗೆ ಅಂಜಿ ಮಸನ ಸೇರಿದ್ದಾರೆ. ಕೂಡಲೇ ತಪ್ಪಿತಸ್ಥ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು. ಮೃತ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದು ಎಂದು ಒತ್ತಾಯಿಸಿದರು.
ಚಾಮರಾಜನಗರ ಜಿಲ್ಲೆಯ ಮಸಣಾಪುರ ಎಂಬ ಗ್ರಾಮದಲ್ಲಿ ಉಪ್ಪಾರಶೆಟ್ಟರ್ ಚಂದ್ರು ಎಂಬ ಯುವಕನನ್ನು ದುರುದ್ದೇಶದಿಂದ ಅನ್ಯ ಕೋಮಿನವರು ಕಂಬಕ್ಕೆ ಕಟ್ಟಿಹಾಕಿ ಅರಬೆತ್ತಲೆಗೊಳಿಸಿ ಮನಸೋ ಇಚ್ಚೆ ಥಳಿಸಿದ್ದಾರೆ. ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ್ದಿ ಎಂದು ಚಂದ್ರು ವಿರುದ್ಧ ಸುಳ್ಳು ಕಥೆ ಕಟ್ಟಿ, ಬಟ್ಟೆ ಬಿಚ್ಚಿ, ಚಪ್ಪಲಿ ಹಾರ ಹಾಕಿ, ಕಂಬಕ್ಕೆ ಕಟ್ಟಿಹಾಕಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡುವುದನ್ನು ಸಮಸ್ತ ಉಪ್ಪಾರ ಸಮಾಜ ಸಹ ಖಂಡಿಸುತ್ತೆ. ಆದರೆ ದುರುದ್ದೇಶದಿಂದ ಫ್ರೀ ಪ್ಲಾನ್ ಮಾಡಿಕೊಂಡು ಬೆಳಗಿನ ಜಾವ ಕೆಲಸಕ್ಕೆ ಹೋಗುವ ವೇಳೆ ಹಿಡಿದು ಕಟ್ಟಿಹಾಕಿ ಹಲ್ಲೆ ಮಾಡಿರುವುದು ಖಂಡನೀಯ.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 