ಸರಕಾರಿ ಶಾಲೆಗೆ 2 ಲಕ್ಷ ರೂ ದೇಣಿಗೆ ನೀಡಿದ ವೀರಯೋಧನ ಕುಟುಂಬಸ್ಥರು
Family members of Soldier donate Rs 2 lakh to government school
ಚಿಕ್ಕೋಡಿ 25: ತಾಲೂಕಿನ ನವಲಿಹಾಳ ಸರಕಾರಿ ಪ್ರೌಢ ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ವೀರಯೋಧ ದಿ.ಯೋಗೇಶ ದತ್ತವಾಡೆ ಇವರ ಸ್ಮರಣಾರ್ಥ ಅಂಗವಾಗಿ ಕುಟುಂಬಸ್ಥರು ಸರಕಾರಿ ಪ್ರೌಢ ಶಾಲೆಗೆ 2 ಲಕ್ಷ ರೂ ದೇಣಿಗೆ ನೀಡಿ ಉಧಾರತೆ ಮೆರೆದರು.
ಇಂದಿನ ಹೈಟಿಕ ಜೀವನದಲ್ಲಿ ದೇಣಿಗೆ ಎನ್ನುವುದು ಮರೆಮಾಚುವ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳು ಪ್ರಗತಿ ಕಾಣಬೇಕು ಎಂದುಕೊಂಡಿರುವ ವೀರಯೋಧನ ಕುಟುಂಬಸ್ಥರು ನವಲಿಹಾಳ ಸರಕಾರಿ ಪ್ರೌಢ ಶಾಲೆಗೆ 2 ಲಕ್ಷ ರೂ ದೇಣಿಗೆ ನೀಡಿರುವುದು ವಿಶೇಷವಾಗಿದೆ.
ಪ್ರೌಢ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯ ಬಿ.ಡಿ.ನೇರಲೆ ಮಾತನಾಡಿ ದೇಶ ಸೇವೆ ಮಾಡಿ ಹುತಾತ್ಮರಾದ ದಿ.ಯೋಗೇಶ ದತ್ತವಾಡೆ ಇವರ ಸ್ಮರಣಾರ್ಥ ದತ್ತವಾಡೆ ಕುಟುಂಬಸ್ಥರು 2 ಲಕ್ಷ ರೂ ದೇಣಿಗೆ ನೀಡಿರುವುದು ಸರಕಾರಿ ಶಾಲೆಗೆ ಬಲ ಬಂದಿದೆ. ಈ ದೇಣಿಗೆ ಹಣವನ್ನು ಬಡ ಮಕ್ಕಳ ಅಭಿವೃದ್ಧಿಗೆ ಸಮರ್ಕ ಬಳಸಿಕೊಳ್ಳುತ್ತೇವೆ ಎಂದರು.
ಗ್ರಾಮದ ಹಿರಿಯರಾದ ಜಯರಾನಜಿರಾವ ಘೋರೆ್ಡ(ಸರಕಾರ), ಕಾಕಾಸಾಹೇಬ ಖಡ್ಡ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ವಿಶ್ವನಾಥ ಧುಮಾಳ, ಶೀತಲ ಚೌಗಲಾ, ಸಿ.ಆರ್.ಹಿರವೆಣ್ಣವರ ಮುಂತಾದವರು ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 