ನಕಲಿ ನೋಟಿನ ಜಾಲ ಪತ್ತೆ: 1 ಕೋಟಿ ರೂಪಾಯಿ ನಕಲಿ ಹಣ ವಶ

 ನಕಲಿ ನೋಟಿನ ಜಾಲ ಪತ್ತೆ: 1 ಕೋಟಿ ರೂಪಾಯಿ ನಕಲಿ ಹಣ ವಶ Fake currency network busted: Rs 1 crore worth of fake currency seized

ಲೋಕದರ್ಶನ ವರದಿ 


ನಕಲಿ ನೋಟಿನ ಜಾಲ ಪತ್ತೆ: 1 ಕೋಟಿ ರೂಪಾಯಿ ನಕಲಿ ಹಣ ವಶ 

ಸಂಬರಗಿ 13: ಕಳೆದ ವಾರದಲ್ಲಿ ಮಿರಜ್ ಪೋಲಿಸರು ನಕಲಿ ನೋಟಿನ ಜಾಲವನ್ನು ಪತ್ತೆಮಾಡಿ, 5 ಜನರನ್ನು ಬಂಧಿಸಿ 1 ಕೋಟಿ ರೂಪಾಯಿ ನಕಲಿ ಹಣವನ್ನು ವಶಪಡಿಸಿಕೊಂಡಿದ್ದು, ಅದರಲ್ಲಿ ಐದು ನೂರು ಹಾಗೂ ಎರಡು ನೂರು ರೂಪಾಯಿಗಳ ನಕಲಿ ನೋಟುಗಳು ಇರುವುದು ಪತ್ತೆಯಾಗಿದೆ. ಮಿರಜ್‌ದಲ್ಲಿ ನಕಲಿ ನೋಟುಗಳು ಸಿಕ್ಕಿದ ನಂತರ ಗಡಿ ಭಾಗದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. 

ಅಥಣಿ, ಕಾಗವಾಡ, ತಿಕೋಟಾ ತಾಲೂಕಾ ಸಾಂಗಲಿ-ಮಿರಜ್ ಪಟ್ಟಣಕ್ಕೆ ವ್ಯಾಪಾರ ವಹಿವಾಟು ಹಾಗೂ ವಿವಿಧ ಕೆಲಸಕ್ಕಾಗಿ ಜನರು ಇಲ್ಲಿ ತಲುಪುತ್ತಾರೆ. ಆದರೆ ಈ ನಕಲಿ ನೋಟುಗಳನ್ನು ಈ ಭಾಗದ ಗ್ರಾಮೀಣ ಪ್ರದೇಶದಲ್ಲಿ ಅನಕ್ಷರಸ್ಥರು ಐದು ನೂರು, ಎರಡು ನೂರು ರೂಪಾಯಿಗಳ ನೋಟುಗಳನ್ನು ತೆಗೆದುಕೊಳ್ಳಬೇಕಾದರೆ ಹಲವಾರು ಬಾರಿ ಪರೀಶೀಲಿಸುತ್ತಿದ್ದಾರೆ. ಮಿರಜದಲ್ಲಿ ನಕಲಿ ನೋಟುಗಳು ಸಿಕ್ಕ ನಂತರ ಗಡಿ ಭಾಗದ ಹಲವಾರು ಗ್ರಾಮಗಳಲ್ಲಿ ಸಂಶಯಕ್ಕೆ ಕಾರಣವಾಗಿದೆ. ಕಾರಣ ಈ ಭಾಗದ ಜನರಿಗೆ ಸಾಂಗಲಿ-ಮಿರಜ ಸಂಪರ್ಕ ಹೆಚ್ಚಿದ್ದ ಕಾರಣ ಆಕಸ್ಮಿಕವಾಗಿ ವ್ಯಾಪಾರಸ್ಥರಿಂದ ಇಂತಹ ಘಟನೆ ನಡೆಯುವ ಸಾಧ್ಯತೆ ಇದೆ ಎಂದು ಚರ್ಚಿಸಲಾಗುತ್ತಿದೆ. 

ಮಿರಜದಲ್ಲಿ ದಾಳಿ ಮಾಡಿದ ನಂತರ ಗಡಿ ಭಾಗದಲ್ಲಿರುವ ಅಥಣಿ-ಕಾಗವಾಡ ತಾಲೂಕಿನಲ್ಲಿ ಬರುವ ಗ್ರಾಮಗಳ ಜನರಲ್ಲಿ ಭಯ ತುಂಬಿದೆ. ಐದು ನೂರು, ಎರಡು ನೂರು ರೂಪಾಯಿಗಳ ನೋಟುಗಳನ್ನು ಕೈಯಲ್ಲಿ ಕೊಡುತ್ತಿದ್ದರೆ, ಅಯ್ಯೋ ಬೇಡಪ್ಪಾ ಅನ್ನುವ ಪರಿಸ್ಥಿತಿ ಬಂದಿದೆ. ಮಿರಜ ನಕಲಿ ನೋಟಿನ ಜಾಲದಲ್ಲಿ 5 ಜನರನ್ನು ಬಂದಿಸಿದ್ದು, ಅದರಲ್ಲಿ ಒಬ್ಬರು ಕೊಲ್ಹಾಪುರದ ಪೋಲಿಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾಂಗಲಿ ಪೋಲಿಸರು ಗಡಿ ಭಾಗದ ಹಲವಾರು ಗ್ರಾಮಗಳಲ್ಲಿ ತನಿಖೆ ನಡೆಸಿದ್ದಾರೆ.  

ಈ ನಕಲಿ ನೋಟುಗಳ ಜಾಲದಲ್ಲಿ ಭಾಗಿಯಾದವರನ್ನು ಕಂಡು ಹಿಡಿಯಲು ತನಿಖೆ ನಡೆಸಿದ್ದಾರೆ.