ಜಾತ್ರೆಗಳು ಜಾತಿಯಿಂದ ಮುಕ್ತವಾಗಲಿ-ಮುದಿಯಪ್ಪ
Fairs should be free from caste - Mudiappa
ಜಾತ್ರೆಗಳು ಜಾತಿಯಿಂದ ಮುಕ್ತವಾಗಲಿ-ಮುದಿಯಪ್ಪ
ಕುಕನೂರ 14 : ಜಾತ್ರೆಗಳು ಜಾತಿಯಿಂದ ಮುಕ್ತವಾಗಿ ಸರ್ವರನ್ನು ಪ್ರೀತಿಸುವ ಜಾತ್ರೆ ನಾವು ಮಾಡಬೇಕು ಎಂದು ತಳಕಳ ಗ್ರಾಮದ ಮುಖಂಡ ಮುದಿಯಪ್ಪ ಯೋಗೆಮ್ಮನವರ ಹೇಳಿದರು. ಅವರು ಕುಕನೂರ ತಾಲ್ಲೂಕಿನ ತಳಕಲ್ ಗ್ರಾಮದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ನಡೆದ ಮಠದ ಜಾತ್ರಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಾ ನಮ್ಮ ಗ್ರಾಮದ ಸದ್ಭಕ್ತರು ವಿಶೇಷವಾಗಿ ಸರ್ವರನ್ನು ಪ್ರೀತಿಸುವ ಗುಣವಳ್ಳವರು ಇಲ್ಲಿ ಯಾವುದೇ ಜಾತಿ, ಮತ ಪಂಥವೆನ್ನದೆ ಎಲ್ಲರೂ ಒಗ್ಗೂಡಿ ಜಾತ್ರೆಗೆ ತನು ಮನ ಧನದಿಂದ ಸೇವೆ ಮಾಡಬೇಕು ಅಂದಾಗ ಮಾತ್ರ ಜಾತ್ರೆಗಳು ಯಶಸ್ವಿಯಾಗಲು ಸಾಧ್ಯ ಕೇವಲ ಒಂದು ಜಾತಿಯವರು ಮಾತ್ರ ದುಡಿದರೆ ಜಾತ್ರೆಗಳು ಯಶಸ್ವಿಯಾಗುವುದಿಲ್ಲ ಎಂದರು.
ಮುಖಂಡ ಮಲ್ಲಪ್ಪ ಬಂಗಾರಿ ಮಾತನಾಡಿ ಅನ್ನದಾನೀಶ್ವರ ಮಹಾಸ್ವಾಮಿ ಈ ಕ್ಷೇತ್ರವನ್ನ ಪಾವನ ಮಾಡಿ ನಾಡಿನದ್ದಕ್ಕೂ ಅಪಾರ ಭಕ್ತರನ್ನು ಹೊಂದಿರುವಂತಹ ಒಬ್ಬ ಮಹಾತಪಸ್ವಿ ಅಂತವರ ಜಾತ್ರೆಯನ ನಮ್ಮ ಗ್ರಾಮದಲ್ಲಿ ಆಚರಣೆ ಮಾಡಿಕೊಂಡು ಬರುತ್ತಿರುವುದನ್ನು ನಮ್ಮೆಲ್ಲರಿಗೂ ಹೆಮ್ಮೆಯಿದೆ ಎಂದರು. ನಂತರ ಸೋಮಪ್ಪ ಖರ್ಜಗಿ ಮಾತನಾಡಿ ಇದೇ ನವೆಂಬರ್ 01ರಿಂದ ಶರಣಬಸವೇಶ್ವರರ ಪುರಾಣ ಪ್ರಾರಂಭವಾಗಿ ನವೆಂಬರ್ 21 ರಂದು ಮಂಗಳಗೊಳ್ಳುವುದು ಅಂದು ಸಂಜೆ ಅನ್ನದಾನೀಶ್ವರ ಲಘು ರಥೋತ್ಸವ ಜರುಗಲಿದೆ, ಜಾತ್ರ ನಿಮಿತ್ಯ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ ಇಂತಹ ಕಾರ್ಯಕ್ಕೆ ಯುವಕರ ಸಹಕಾರ ಅವಶ್ಯ ಎಂದರು. ಈ ಸಂದರ್ಭದಲ್ಲಿ ಪೂಜ್ಯ ಮಹಾದೇವ ಸ್ವಾಮೀಜಿ, ಮಲ್ಲಪ್ಪ ಗೋರಿ, ಪಕ್ಕಪ್ಪ ಮುರಿಗಿ, ಶಿವಪ್ಪ ಬ್ಯಾಳಿ, ಅಬ್ಬಸಲಿ, ಕಲ್ಲಯ್ಯ ತಿರುಗುಣೇಶ, ಶರಣಪ್ಪ, ಬಸಯ್ಯ ಚಂಡೂರು, ರಾಮಣ್ಣ ನಿಟ್ಟಲಿ, ಸುರೇಶ ನಿಟ್ಟಲಿ, ಗೋಣೇಪ್ಪ ವಾಲ್ಮಿಕಿ, ಮುಡಿಯಪ್ಪ, ವೀರ್ಪ ಕರ್ಜಗಿ, ಬಾಳಪ್ಪ ಮುಸ್ಲಿ, ಪರಸಪ್ಪ ಅಳವಂಡಿ ಮತ್ತು ಇತರರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 