ಕಾರ್ಖಾನೆ ಮಾಲಿಕರು ರೈತರಿಗೆ ಯಾವುದೆ ಅನ್ಯಾಯಮಾಡದೆ
Factory owners do no injustice to farmers
ಆಲಮೇಲ 27: ರೈತರ ಹಿತ ಪಾಡುವಲ್ಲಿ ಎಲ್ಲ ಪಕ್ಷದ ಸರ್ಕಾರಗಳು ವಿಪವಾಗಿವೆ. ರೈತರಿಗೆ ಒಳಿತು ಮಾಡುವದಾಗಿ ಹೆಳುತ್ತಾರೆ ವಿನಹ ರೈತರ ಬೆಳೆಗೆ ಯೋಗ್ಯ ಬೆಲೆ ನಿಗದಿಗೊಳಿಸುವ ಕಾನೂನು ಜಾರಿಗೊಳಿಸಲು ಯಾವುದೆ ಸರ್ಕಾರ ಆಸಕ್ತಿ ತೋರದಿರುವದು ವಿಪರ್ಯಾಸ ಎಂದು ಇಂಡಿ ಶಾಸಕ ಯಶವಂತ್ರಾಯಗೌಡ ಪಾಟೀಲ ಹೇಳಿದರು. ಆಲಮೇಲ ಸಮೀಪದ ಇಂಡಿ ತಾಲೂಕಿನ ತೆಗ್ಗೆಹಳ್ಳಿ ಕ್ರಾಸ್ ಹತ್ತಿರ ನಿರ್ಮಾಣ ಮಾಡಿರುವ ಕರ್ನಾಟಕ ಕಾಟ್ ಸೀಡ್ಸ್ ಹತ್ತಿ ಮೀಲ್ ಕಾರ್ಖಾನೆ ಉದ್ಘಾಟಿಸಿ ಮಾತನಾಡುತ್ತ ಹೆಳಿದರು. ಆಲಮೇಲ ಇಂಡಿ ತಾಲೂಕಿನ ಮದ್ಯದಲ್ಲಿ ನಿರ್ಮಾಣವಾಗಿರುವ ಈ ಹತ್ತಿ ಮಿಲ್ ಪ್ರಾರಂಭವಾಗಿದ್ದರಿಂದ ನಾಲ್ಕರಿಂದ ಐದು ತಾಲೂಕಿನ ರೈತರಿಗೆ ಅನಕೂಲವಾಗಲಿದೆ ಕಾರ್ಖಾನೆ ಮಾಲಿಕರು ರೈತರಿಗೆ ಯಾವುದೆ ಅನ್ಯಾಯಮಾಡದೆ ಯೋಗ್ಯ ಬೇಲೆ ನೀಡಿ ರೈತರಿಗೆ ಪ್ರೋತ್ಸಹ ನೀಡಿದರೆ ರೈತರು ಅಂತಹ ಕಾರ್ಖಾನೆ ಗಳಿಗೆ ಸಹಕಾರ ನೀಡುತ್ತಾರೆ ಎಂದೆರು.
ನಿಜವಾದ ರೈತರ ಹಿತ ಕಾಪಾಡುವ ಉದ್ದಿಮೆದಾರರು ಯಾರಾದ್ರು ಇದ್ದರೆ ಅದು ರೈತರರಿಂದ ನೇರವಾಗಿ ಖರಿದಿ ಮಾಡುವ ಹತ್ತಿ ಕಾರ್ಖಾನೆ, ಕಬ್ಬಿನ ಕಾರ್ಖಾನೆಗಳಂತವು ಮಾತ್ರ. ಮುಂಬರುವ ದಿನಗಳಲ್ಲಿ ಅಧಿಕಾರದಲ್ಲಿರುವ ಯಾವುದೆ ಪಕ್ಷದ ಸರ್ಕಾರವಿರಲಿ ರೈತರ ಬೆಳೆಗಳಿಗೆ ಯೋಗ್ಯ ಬೆಲೆ ನಿಗದೀಗೊಳೊಸುವಂತ ಕಾನೂನು ಜಾರಿಗೆ ತರಬೇಕು ಎಂದರು. ರೈತರ ಅನಕೂಲಕ್ಕೆ ಅನಗುಣವಾಗಿ ಯಾವುದೆ ಕಾರ್ಖಾನೆಗಳು ನಿರ್ಮಾಣ ವಾದರು ಅದಕ್ಕೆ ರೈತರು ಸಹಕಾರ ನೀಡಿ ಮತ್ತು ನನ್ನಿಂದ ಸರ್ಕಾದಿಂದ ಎಲ್ಲ ರೀತಿಯ ಸಹಕಾರ ನೀಡುತ್ತೆನೆ ಎಂದು ಹೆಳಿದರು. ಅಫಜಲಪುರ ಶಾಸಕ ಎಂ.ವಾಯ್.ಪಾಟೀಲ,
ಮಾಜಿ ಶಾಸಕ ಮಾಲಿಕಯ್ಯ ಗುತ್ತೇದಾರ, ಸಾನಿಸ್ಯ ವಹಿಸಿದ ಆಲಮೇಲದ ಚಂದ್ರಶೇಖರ ಶಿವಾಚಾರ್ಯ, ಅಫಜಲಪುರದ ಮಳೆಂದ್ರ ಶಿವಾಚಾರ್ಯ, ಶಿರಶ್ಯಾಡದ ಅಭಿನವ ಮುರಿಘೇಂದ್ರ ಸ್ವಾಮಿಜಿ ಮಾತನಾಡಿದತು ಮುಂತಾದವರು ಮಾತನಾಡಿದರು. ಡಾ. ಸಂದೀಪ ಪಾಟೀಲ, ಗೋಳಸಾರದ ಅಭಿನವ ಪುಂಡಲಿಂಗ ಸ್ವಾಮಿಜಿ, ಮೌಲಾನಾ ಶಾಕೀರ ಹುಸೇನ ಕಾಸಮಿ, ಅಳ್ಳೊಳ್ಳಿಮಠ ಶ್ರೀಶೈಲಯ್ಯ ಸ್ವಾಮಿಜಿ, ಸಾನಿದ್ಯ ವಹಿಸಿದ್ದರು. ಸಿಂದಗಿ ಶಾಸಕ ಅಶೋಕ ಮನಗೂಳಿ, ಶಿವುಕುಮಾರ ಗುಂದಗಿ, ಡಾ. ಶರಣಬಸಪ್ಪ ದಾಮ, ನೀತಿನ ಗುತ್ತೇದಾರ, ಅಬ್ದುಲ್ ಹಮೀದ ಮುಸ್ರಿಪ್, ಸಿದ್ದಯ್ಯ ಹಿರೇಮಠ, ಬಸವರಾಜ ಧನಶ್ರೀ, ರೀಯಾಜ ಬಿಳವಾರ, ನೂತನ ಕಾರ್ಖಾನೆ ಪಾಲುದಾರ ಮಾಲಿಕರಾದ ಅಲ್ತಾಪ ಪಟೇಲ, ಶೇರಣ್ಣಪ್ಪ ಶೆಟ್ಟಿ, ಸಂತೋಷ ದಾಮಾ, ಗುರುರಾಜ ಗುಂದಗಿ, ಮ್ಯಾನೇಜರ್ ಗುಂಡಪ್ಪ ಬುರಡ, ಗುರುಲಿಂಗಪ್ಪ ಅಂಗಡಿ ಮುಂತಾದವರು ಇದ್ದರು.
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ 