ಮೃತಪಟ್ಟ ಹಾಗೂ ಗಾಯಗೊಂಡ ಕುಟುಂಬಗಳಿಗೆ ಕಾರ್ಖಾನೆಯ ಅಧ್ಯಕ್ಷ ಪರ್ಪ ಸವದಿ ಭೇಟಿ
Factory President Parpa Savadi visits families of deceased and injured
ಮೃತಪಟ್ಟ ಹಾಗೂ ಗಾಯಗೊಂಡ ಕುಟುಂಬಗಳಿಗೆ ಕಾರ್ಖಾನೆಯ ಅಧ್ಯಕ್ಷ ಪರ್ಪ ಸವದಿ ಭೇಟಿ
ಅಥಣಿ 29 : ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಚುನಾವಣೆ ವೇಳೆ ಮತ ಚಲಾಯಿಸಿ ತೆರಳುತ್ತಿದ್ದಾಗ ನಡೆದ ದುರ್ಘಟನೆಯಲ್ಲಿ ಮೃತಪಟ್ಟ ಹಾಗೂ ಗಾಯಗೊಂಡ ಕುಟುಂಬಗಳಿಗೆ ಕಾರ್ಖಾನೆಯ ಅಧ್ಯಕ್ಷ ಪರ್ಪ ಸವದಿ ಬುಧವಾರ ಭೇಟಿ ನೀಡಿ ಮಾನವೀಯ ಸಾಂತ್ವನ ನೀಡಿದರು. ಸಪ್ತಸಾಗರ ಗ್ರಾಮದ ರಾಜೇಸಾಬ ಜಮಾದಾರ ಅವರು ಮೋಟರ್ ಸೈಕಲ್ ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದ ಹಿನ್ನೆಲೆಯಲ್ಲಿ, ಅವರ ಮನೆಗೆ ಭೇಟಿ ನೀಡಿದ ಪರ್ಪ ಸವದಿ ಅವರು ರಾಜೇಸಾಬ ಅವರ ಪತ್ನಿಯವರಿಗೆ ಧೈರ್ಯ ತುಂಬಿದರು. ಈ ಕಷ್ಟದ ಪರಿಸ್ಥಿತಿಯಲ್ಲಿ ಕುಟುಂಬಕ್ಕೆ ಆರ್ಥಿಕ ನೆರವಾಗುವ ನಿಟ್ಟಿನಲ್ಲಿ, ಪರ್ಪ ಸವದಿ ಅವರು ತಮ್ಮ ವೈಯಕ್ತಿಕ 1 ಲಕ್ಷ ರೂಪಾಯಿಗಳ ಆರ್ಥಿಕ ಸಹಾಯಧನವನ್ನು ಮೃತರ ಪತ್ನಿಗೆ ಹಸ್ತಾಂತರಿಸಿದರು.ಇದೇ ವೇಳೆ, ಅದೇ ಗ್ರಾಮದ ಪ್ರಕಾಶ ಜೋಶಿ ಅವರು ಸಹ ಇದೇ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಕುಟುಂಬಸ್ಥರಿಗೂ ಪರ್ಪ ಸವದಿ ಸಾಂತ್ವನ ಹೇಳಿದರು.
ಪರ್ಪ ಸವದಿ ಅವರು ಈ ಸಂದರ್ಭದಲ್ಲಿ ಮಾತನಾಡುತ್ತಾ, "ನಮ್ಮ ಕಾರ್ಖಾನೆಯ ಚುನಾವಣೆ ಮುಗಿದು ಎಲ್ಲರೂ ಸಂತಸದಲ್ಲಿರುವಾಗ, ನಮ್ಮ ಗ್ರಾಮದ ಸಹಕಾರಿ ಬಂಧುಗಳು ಈ ರೀತಿ ಅಪಘಾತಕ್ಕೀಡಾಗಿರುವುದು ಅತ್ಯಂತ ದುಃಖದ ಸಂಗತಿ. ಮೃತ ರಾಜೇಸಾಬ ಜಮಾದಾರ ಅವರ ಕುಟುಂಬದ ನೋವನ್ನು ಹಣದಿಂದ ಅಳೆಯಲಾಗದು. ಆದರೂ, ಅವರ ಕಷ್ಟದ ದಿನಗಳಲ್ಲಿ ನಾನು ವೈಯಕ್ತಿಕವಾಗಿ 1 ಲಕ್ಷ ನೆರವು ನೀಡುತ್ತಿದ್ದೇನೆ. ನಮ್ಮ ಸಹಕಾರಿ ಕುಟುಂಬವು ಸದಾ ನಿಮ್ಮೊಂದಿಗಿರುತ್ತದೆ, ಎಂದು ತಿಳಿಸಿದರು ."ಅಲ್ಲದೆ, ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಕಾಶ ಜೋಶಿ ಅವರ ಕುಟುಂಬಸ್ಥರು ಯಾವುದೇ ಆತಂಕಕ್ಕೆ ಒಳಗಾಗಬಾರದು. ಅವರ ಚಿಕಿತ್ಸೆಗೆ ಎಷ್ಟೇ ಖರ್ಚಾಗಲಿ, ಅದರ ಸಂಪೂರ್ಣ ವೆಚ್ಚವನ್ನು ನಾನೇ ಭರಿಸುತ್ತೇನೆ ಎಂದು ಭರವಸೆ ನೀಡುತ್ತೇನೆ. ಅವರ ಸಂಪೂರ್ಣ ಚೇತರಿಕೆಗೆ ನಾವು ಪ್ರಾರ್ಥಿಸುತ್ತೇವೆ ಎಂದು ಪರ್ಪ ಸವದಿ ಅವರು ಘೋಷಿಸಿದರು.ಈ ಸಂದರ್ಭದಲ್ಲಿ ಗುರುಬಸು ತೇವರಮನಿ, ರಾಜು ನಾಡಗೌಡ, ಅಶೋಕ ಐಗಳಿ, ದುಂಡಪ್ಪ ಅಸ್ಕಿ, ರಾಮಪ್ಪ ಗುಮತಾಜ, ಫರೀದ ಅವಟಿ, ಪರಮಾನಂದ ತೇಲಿ ಸೇರಿದಂತೆ ಹಲವು ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು, ಅಧ್ಯಕ್ಷರ ಮಾನವೀಯ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 