ಹೂವಿನ ಹಡಗಲಿ ತಾ.ಪಂ.ಪ್ರಗತಿ ಪರಿಶೀಲನಾ ಸಭೆ
ಲೋಕದರ್ಶನ ವರದಿ
ಹೂವಿನಹಡಗಲಿ11: ಕೇಂದ್ರ ಸಕರ್ಾರದ ಶ್ಯಾಮ ಪ್ರಸಾದ್ ಮುಖಜರ್ಿ ಗ್ರಾಮೀಣ ನಗರ ಅಭಿವೃದ್ದಿ ಅಭಿಯಾನಕ್ಕೆ ಹೊಳಲು ಕ್ಲಸ್ಟರ್ ಆಯ್ಕೆಯಾಗಿದೆ.ಹೊಳಲು ಮತ್ತ ಮೈಲಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಯೋಜನೆ ಅಡಿ 50ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಾ.ಪಂ.ಇಒ ಯು.ಎಚ್.ಸೋಮಶೇಖರ ತಿಳಿಸಿದರು.
ಇಲ್ಲಿನ ತಾ.ಪಂ.ಯಲ್ಲಿ ಈಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದರು.ಗ್ರಾಮ ವಿಕಾಸ ಯೋಜನೆಯ ಹಣವನ್ನು ಏಜೆನ್ಸಿಗೆ ವಗರ್ಾವಣೆ ಮಾಡಲು ಹಿಂದೇಟು ಹಾಕುತ್ತಿರುವ ಗ್ರಾ.ಪಂ.ಅಧ್ಯಕ್ಷರ ಮೇಲೆ ಶಿಸ್ತು ಕ್ರಮದ ನೋಟಿಸ್ ನೀಡುವಂತೆ ತಾ.ಪಂ.ಅಧ್ಯಕ್ಷ ಸೋಗಿ ಹಾಲೇಶ ಸೂಚಿಸಿದ ಅವರು ನಂದಿಹಳ್ಳಿ ಹೊರತಾಗಿ ನಾಲ್ಕು ಗ್ರಾ.ಪಂ.ಅಧ್ಯಕ್ಷರು ಹಣ ವಗರ್ಾವಣೆ ಮಾಡಿಲ್ಲ.ಇದರಿಂದ ಕೆಲಸಕ್ಕೆ ಅಡ್ಡಿಯಾಗಿದೆ ಎಂದು ಪಂಚಾಯತ್ ರಾಜ್ಯ ಇಲಾಖೆ ಎಇಇ ಸತೀಶ ಪಾಟೀಲ ಸಭೆಗೆ ತಿಳಿಸಿದರು.
14ನೇ ಹಣಕಾಸು ಯೋಜನೆ,ನರೇಗಾ ಯೋಜನೆ ಹಣ ಕೇಳುತ್ತಿಲ್ಲ.ವಾರದಲ್ಲಿ ಹಣ ವಗರ್ಾವಣೆ ಮಾಡದಿದ್ದಲ್ಲಿ ಅಂತವರ ವಿರುದ್ದ ಕ್ರಮಕ್ಕೆ ಶಿಫಾರಸು ಮಾಡುತ್ತೇವೆ ಎಂದು ಇಒ ತಿಳಿಸಿದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಇನ್ನು ವಿಳಂಬವಾಗುತ್ತಿವೆ.ನದಿ ತುಂಬಿ ಹರಿಯುವ ದಿನಗಳಲ್ಲಿ ನೀರು ಪೂರೈಕೆ ಮಾಡದಿದ್ದರೇ ಹೇಗೆ ಎಂದು ಗ್ರಾಮೀಣ ಕುಡಿವ ನೀರು ನೈರ್ಮಲ್ಯ ಇಲಾಖೆ ಎಂಜಿನಿಯರ್ ಅವರನ್ನು ಹಾಲೇಶ ತರಾಟೆಗೆ ತೆಗೆದುಕೊಂಡರು.ಇಟ್ಟಿಗಿಯಲ್ಲಿ 2ಶುದ್ದ ನೀರಿನ ಘಟಕಗಳಿವೆ.ಇನ್ನು ಎರಡು ಘಟಕಗಳು ಮಂಜೂರಾಗಿವೆ.
ಘಟಕಗಳಲ್ಲಿ ಶೇ.50ಕ್ಕಿಂತ ಹೆಚ್ಚು ನೀರು ಪೋಲಾಗುವುದರಿಂದ ಮುಂದಿನ ಬೇಸಿಗೆಯಲ್ಲಿ ನಿರ್ವಹಣೆ ಕಟ್ಟವಾಗುತ್ತದೆ.ಆದ್ದರಿಂದ ಇಟ್ಟಿಗಿಗೆ ನದಿಯಿಂದ ನೀರು ಪೂರೈಕೆ ಮಾಡಬೇಕು ಎಂದು ಪಿಡಿಒ ಶಶಿಕಲಾ ಕೊಪ್ಪದ ಗಮನ ಸೆಳೆದರು. ಉಪನಾಯ್ಕನಹಳ್ಳಿ, ಮಾನ್ಯರ ಮಸಲವಾಡ ಗ್ರಾಮಕ್ಕೆ ಬೇಗ ಯೋಜನೆ ಪೂರ್ಣಗೊಳಿಸಿ ಹಳ್ಳಿಗಳಿಗೆ ನೀರು ಪೂರೈಕೆ ಮಾಡುವಂತೆ ತಾಕೀತ್ ಮಾಡಿದರು.ತಾ.ಪಂ.ಯೋಜನಾಧಿಕಾರಿ ಬಸವನಗೌಡ ಇದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 