ಬೆಂಗಳೂರು,
ಏ. 13, ದೆಹಲಿಯ ನಿಜಾಮುದ್ದೀನ್ ಜಮಾತ್ ಗೆ ಹೋಗಿ ಬಂದು ಮಾಹಿತಿ ಕೊಡದವರ
ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ
ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮಾತ್‌ನಲ್ಲಿ
ಭಾಗವಹಿಸಿದವರು ದಯಮಾಡಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಗೃಹ ಸಚಿವರು ಮತ್ತೊಮ್ಮೆ
ಮನವಿ ಮಾಡಿದ್ದಾರೆ.ವಿಜಯಪುರದಲ್ಲಿ ಒಂದೇ ಕುಟುಂಬದ 5 ಜನರಿಗೆ ಸೋಂಕು ಕಂಡು
ಬಂದಿದೆ. ಅವರ ಕುಟುಂಬ ವರ್ಗ, ಅವರ ಪ್ರಾಥಮಿಕ, ದ್ವಿತೀಯ ಸಂಪರ್ಕದವರನ್ನು ತಪಾಸಣೆ
ಮಾಡಲು ಹೊರಟಿದ್ದರು. ಆದರೆ ಸ್ಥಳೀಯರು ಅದಕ್ಕೆ ವಿರೋಧ ವ್ಯಕ್ತಪಡಿಸಿ ನಮ್ಮ
ಜಿಲ್ಲಾಡಳಿತಕ್ಕೆ ತೊಂದರೆ ಕೊಟ್ಟಿದ್ದರು. ಬಳಿಕ ಮೌಲ್ವಿಗಳ ಜತೆ ಮುಖ್ಯಮಂತ್ರಿಗಳು
ಮಾತನಾಡಿದ ಬಳಿಕ ಎಲ್ಲರೂ ತಪಾಸಣೆಗೆ ಒಪ್ಪಿದ್ದಾರೆ.ದೆಹಲಿಯ ನಿಜಾಮುದ್ದೀನ್ ಜಮಾತ್
ಗೆ ಹೋಗಿದ್ದ ಒಟ್ಟು 801 ಮಂದಿಯನ್ನು ಪತ್ತೆಹಚ್ಚಿ ಕ್ವಾರಂಟೈನ್ ಮಾಡಲಾಗಿದೆ. ಜಮಾತ್ ಗೆ
ಹೋಗಿ ಹೊರ ರಾಜ್ಯದಲ್ಲಿ ಇರುವ ನಮ್ಮ ರಾಜ್ಯದ 581 ಮಂದಿಯನ್ನು ಪತ್ತೆ ಹಚ್ಚಿ ಆಯಾ ರಾಜ್ಯಗಳ ಗಮನಕ್ಕೆ ತರಲಾಗಿದೆ. 50ಕ್ಕಿಂತ ಹೆಚ್ಚು ಎಫ್ಐಆರ್ ದಾಖಲು ಮಾಡಲಾಗಿದೆ ಎಂದರು.